Thursday, November 21, 2024

ಯಶಸ್ವೀ ಕಲಾವೃಂದ: ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ತೆಕ್ಕಟ್ಟೆಯಲ್ಲಿ ಗಾನಾಭಿನಂದನೆ

ತೆಕ್ಕಟ್ಟೆ: ಸಣ್ಣ ಸಣ್ಣ ಸಾಧನೆಯ ಮೆಟ್ಟಿಲುಗಳನ್ನು ಏರುತ್ತ ನಾಲ್ಕು ಭಾರಿ ಶಾಸಕನಾಗುವುದಕ್ಕೆ ಜನತೆ ಅವಕಾಶ ಮಾಡಿಕೊಟ್ಟಿದೆ. ಯಕ್ಷಕಲೆಯ ಆಳವನ್ನು ಅರಿಯಲಾಗದಷ್ಟು ಮುಗ್ದ ಪ್ರೇಕ್ಷಕರಲ್ಲಿ ನಾನೊಬ್ಬನಾದರೂ ಯಕ್ಷಗಾನವನ್ನು ಒಪ್ಪುತ್ತಾ, ಅಪ್ಪುತ್ತಾ ಬೆಳೆದು ಬಂದವನು ನಾನು. ಸಾವಿರಾರು ಯಕ್ಷಗಾನ ಕಲಾವಿದರನ್ನು ಹುಟ್ಟು ಹಾಕಿದ ಸಂಸ್ಥೆ ಇಂದು ವಿಭಿನ್ನವಾಗಿ ನನಗೆ ಗಾನಾಭಿನಂದನೆ ಸಲ್ಲಿಸಿಕೊಂಡಿದೆ. ಅನೇಕರ ಪರಿಶ್ರಮದ ಜೊತೆಗೆ ಯಶಸ್ವೀ ಕಲಾವೃಂದವೂ ಸಾಂಸ್ಕೃತಿಕವಾಗಿ ಈ ಭಾಗದಲ್ಲಿ ಇನ್ನಷ್ಟು ಎತ್ತರಕ್ಕೆ ಏರಲಿ. ಒಂದಷ್ಟು ಸಮಯವನ್ನು ಯಕ್ಷಗಾನಕ್ಕೂ ವಿನಿಯೋಗ ಮಾಡುತ್ತೇನೆ ಎಂದು ಗಾನಾಭಿನಂದನೆ ಸಲ್ಲಿಸಿಕೊಂಡ ಕೋಟ ಶ್ರೀನಿವಾಸ ಪೂಜಾರಿ ಮಾತನ್ನಾಡಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಜೂನ್ ೧೮ರಂದು ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ನೇತೃತ್ವದಲ್ಲಿ ಸಿನ್ಸ್ ೧೯೯೯ ಶ್ವೇತಯಾನ ಕಾರ್ಯಕ್ರಮದಡಿಯಲ್ಲಿ ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ಧಿಮ್ಸಾಲ್ ಫಿಲ್ಮ್ಸ್ ಸಹಕಾರದೊಂದಿಗೆ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಕೋಟ ಸುದರ್ಶನ ಉರಾಳರು, ಯಕ್ಷಗುರು ಕೃಷ್ಣಯ್ಯ ಆಚಾರ್ ಬಿದ್ಕಲ್‌ಕಟ್ಟೆ ಯಕ್ಷಗಾನದ ಹಿಮ್ಮೇಳದ ಪೇಟ ತೊಡಿಸಿದರು. ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ ಮದ್ದಳೆ, ರಾಹುಲ್ ಕುಂದರ್ ಕೋಡಿ ಚಂಡೆಯ ಸಾಥ್‌ನೊಂದಿಗೆ ಯಕ್ಷಗುರು ಲಂಬೋದರ ಹೆಗಡೆಯವರು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ ಸಾಹಿತ್ಯದಲ್ಲಿ ಗಾನಾಭಿನಂದನೆ ಸಲ್ಲಿಸಿದರು.

ಕೇವಲ ಕಲಿಕೆ ಪ್ರಧಾನವಲ್ಲ. ನಾವು ಸಮಾಜದಲ್ಲಿ ಬೆಳೆಯುವ ಮಟ್ಟವನ್ನು ನಮ್ಮ ಕಾರ್ಯವೈಖರಿಯಿಂದ ದ್ವಿಗುಣಗೊಳಿಸಿಕೊಳ್ಳಬೇಕು. ಆಗಲೇ ಬಹು ಎತ್ತರಕ್ಕೆ ಏರಲು ಸಾಧ್ಯ ಎಂದು ತೋರಿಸಿದವರು ಕೋಟ ಶ್ರೀನಿವಾಸ ಪೂಜಾರಿಯವರು. ಲೋಕ ಸಭೆಯಲ್ಲಿ ದೇಶವನ್ನು, ರಾಜ್ಯವನ್ನು, ಕ್ಷೇತ್ರವನ್ನು ಕಾಪಿಟ್ಟು ರಕ್ಷಿಸಿಕೊಳ್ಳುವ ನಾಯಕರಾಗಿ ವಿಜೃಂಬಿಸಲಿ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾಗಿರುವ ಗಣಪತಿ ಟಿ. ಶ್ರೀಯಾನ್ ಅಭಿನಂದಿಸಿದರು.

ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಉದ್ಯಮಿ ಸುಬ್ರಾಯ ಆಚಾರ್, ಯಕ್ಷಗುರು ಸೀತಾರಾಮ ಶೆಟ್ಟಿ ಕೊಕೂರು, ಉಪಸ್ಥಿತರಿದ್ದರು. ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಕೊಮೆ ಗೋಪಾಲ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು.

 

 

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!