spot_img
Saturday, December 7, 2024
spot_img

ಭಂಡಾರ್ಕಾರ್ಸ್ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಗಳ ವಿಶೇಷ ಮಾಹಿತಿ

ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ
Etra Marks ಕೋಚಿಂಗ್ ಟೀಮ್ ನ ನುರಿತ ಅನುಭವಸ್ಥ ಉಪನ್ಯಾಸಕ ವ್ರಂದದವರಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ
ಗಳಾದ CET, NEET, JEE, ಹಾಗೂ MET ಈ ಸ್ಪರ್ಧಾತ್ಮಕ ಪರೀಕ್ಷೆ ಗಳ ಕುರಿತಾಗಿ ವಿಶೇಷ ಮಾಹಿತಿ ನೀಡುವ ಕಾರ್ಯ
ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಸ್ಯಶಾಸ್ತ್ರ ವಿಭಾಗದ ತರಬೇತುದಾರರಾದ ಸುನಂದಾ ಇವರು ಮಾಹೆ ವಿಶ್ವವಿದ್ಯಾನಿಲಯದ ಬಗ್ಗೆ ಸಮಗ್ರ ಪರಿಚಯ ನೀಡುತ್ತಾ ಅಲ್ಲಿ ಲಭಿಸುವ ವಿವಿಧ ಕೋರ್ಸ್ ಗಳ ಬಗ್ಗೆ ವಿಶೇಷ ಮಾಹಿತಿ ನೀಡಿದರು.

ಪ್ರಾಣಿಶಾಸ್ತ್ರ ವಿಭಾಗದ ನುರಿತ ತರಬೇತುದಾರರಾದ ಶ್ರೀಮತಿ ಗಾರ್ಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಸಫಲತೆ ಗಳಿಸುವುದರ ಬಗ್ಗೆ ವಿಶೇಷ ಮಾಹಿತಿ ನೀಡಿದರು. ರಸಾಯನಶಾಸ್ತ್ರ ವಿಭಾಗದ ಅನುಭವಸ್ಥ ತರಬೇತುದಾರರಾದ ಅಭಿಷೇಕ್ ಸ್ಪರ್ಧಾತ್ಮಕ ಪರೀಕ್ಷೆ ಗಳ ಕುರಿತಾಗಿ ಮಾತನಾಡಿದರು.

ಗಣಿತಶಾಸ್ತ್ರ ವಿಭಾಗದ ತರಬೇತುದಾರರಾದ ಚೇತನ್ ಉಪಸ್ಥಿತರಿದ್ದರು.ಪ್ರಾಂಶುಪಾಲರಾದ ಡಾ.ಜಿ.ಎಂ ಗೊಂಡ ಸರ್ವರನ್ನು ಸ್ವಾಗತಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!