Saturday, September 14, 2024

ವಾಯುಮಾಲಿನ್ಯದಿಂದ 2.1 ಮಿಲಿಯನ್ ಭಾರತೀಯರ ಸಾವು : ಆತಂಕಕಾರಿ ವರದಿ

ಜನಪ್ರತಿನಿಧಿ (ನವದೆಹಲಿ) :  ವಾಯು ಮಾಲಿನ್ಯದ ಕಾರಣದಿಂದಾಗಿ 2021ರಲ್ಲಿ ವಿಶ್ವಾದ್ಯಂತ 8.1 ಮಿಲಿಯನ್ ಜನರು ಮರಣ ಹೊಂದಿರುವುದಾಗಿ ಒಂದು ಆತಂಕಕಾರಿ ವರದಿ ಹೊರಗೆ ಬಂದಿದೆ. ಭಾರತ ಹಾಗೂ ಚೀನಾದಲ್ಲಿ ಕ್ರಮವಾಗಿ 2.1 ಮಿಲಿಯನ್ ಹಾಗೂ 2.3 ಮಿಲಿಯನ್ ಜನರ ಸಾವಿಗೆ ಕಾರಣವಾಗಿದೆ ಎಂದು ಇಂದು(ಬುಧವಾರ) ಬಿಡುಗಡೆಯಾದ ವರದಿಯೊಂದು ತಿಳಿಸಿದೆ.

UNICEF ಸಹಭಾಗಿತ್ವದಲ್ಲಿ US ಮೂಲದ ಪ್ರೈವೇಟ್ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಹೆಲ್ತ್ ಎಫೆಕ್ಟ್ಸ್ ಇನ್‌ಸ್ಟಿಟ್ಯೂಟ್(HEI) ಬಿಡುಗಡೆಗೊಳಿಸಿದ ವರದಿಯಲ್ಲಿ 2021 ರಲ್ಲಿ ಭಾರತದಲ್ಲಿ ಐದು ವರ್ಷದೊಳಗಿನ 1,69,400 ಮಕ್ಕಳ ಸಾವಿಗೆ ವಾಯು ಮಾಲಿನ್ಯ ಕಾರಣವಾಗಿದೆ ಎಂದು ಹೇಳಿದೆ.

ಇನ್ನು, ನೈಜೀರಿಯಾದಲ್ಲಿ 1,14,100 ಮಕ್ಕಳ ಸಾವು, ಪಾಕಿಸ್ತಾನದಲ್ಲಿ 68,100, ಇಥಿಯೋಪಿಯಾದಲ್ಲಿ 31,100 ಹಾಗೂ ಬಾಂಗ್ಲಾದೇಶದಲ್ಲಿ 19,100 ಮಕ್ಕಳ ಸಾವಿಗೆ ವಾಯು ಮಾಲಿನ್ಯ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದಕ್ಷಿಣ ಏಷ್ಯಾದಲ್ಲಿ ಜನರ ಸಾವಿಗೆ ವಾಯು ಮಾಲಿನ್ಯ ಪ್ರಮುಖ ಅಪಾಯಕಾರಿ ಅಂಶವಾಗಿದೆ ಎಂದು ವರದಿ ಹೇಳಿದೆ. ವಾಯು ಮಾಲಿನ್ಯದ ನಂತರ ಅಧಿಕ ರಕ್ತದೊತ್ತಡ, ಆಹಾರ ಹಾಗೂ ತಂಬಾಕು ಜನರ ಸಾವಿಗೆ ಇತರ ಕಾರಣಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

“ತಲಾ 1 ಶತಕೋಟಿ ಜನಸಂಖ್ಯೆಯೊಂದಿಗೆ, ಭಾರತ (2.1 ಮಿಲಿಯನ್ ಸಾವುಗಳು) ಮತ್ತು ಚೀನಾ (2.3 ಮಿಲಿಯನ್ ಸಾವುಗಳು)ದಲ್ಲಿಯೇ ಜಗತ್ತಿನ ಶೇ. 54 ರಷ್ಟು ಜನರ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿದೆ. 2021 ರಲ್ಲಿ ಈ ಹಿಂದಿನ ವರ್ಷಗಳಿಗಿಂತ ಅತಿ ಹೆಚ್ಚಿನ ಸಾವುಗಳು ವಾಯುಮಾಲಿನ್ಯಕ್ಕೆ ಸಂಬಂಧಿಸಿವೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!