Sunday, October 13, 2024

S.V.M.S ಬಸ್ ನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೈಂದೂರು-ಕೊಲ್ಲೂರು ರೂಟ್ ನಲ್ಲಿ ಉಚಿತ ಪ್ರಯಾಣ

ಶಾಸಕ ಗುರುರಾಜ ಗಂಟಿಹೊಳೆ ಅವರ ಮನವಿಗೆ ಸ್ಪಂದಿಸಿದ ಖಾಸಗಿ ಬಸ್ ಮಾಲಕರು

ಬೈಂದೂರು : ಹಲವೆಡೆ ಶಾಲಾ ಮಕ್ಕಳಿಗೆ ಬಸ್ ಸೇವೆ ಅಲಭ್ಯವಾಗುತ್ತಿರುವುದನ್ನು ಮನಗಂಡು ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆಯವರು ಖಾಸಗಿ ಬಸ್ ಮಾಲಕರೊಂದಿಗೆ ಹೆಚ್ಚುವರಿ ಬಸ್ ಸೇವೆಗೂ ಮಾತುಕತೆ ನಡೆಸಿದ್ದರು. ಮತ್ತು ಸರ್ಕಾರಿ ಬಸ್ ಸೇವೆ ಎಲ್ಲ ಕಡೆಗಳಿಗೂ ಒದಗಿಸುವಂತೆ ಕೆ‌ಎಸ್ಸಾರ್ಟಿಸಿ ಅಧಿಕಾರಿಗಳಿಗೂ ಸೂಚಿಸಿದ್ದರು. ಈ ಮಧ್ಯೆ ಶಾಸಕರ ಮನವಿಗೆ ಸ್ಪಂದಿಸಿ ಎಸ್.ವಿ.ಎಂ.ಎಸ್. ಬಸ್ ಮಾಲಕರು ಬೈಂದೂರಿನಿಂದ ಕೊಲ್ಲೂರು ಕಡೆಗೆ ಹೋಗುವ ಎಲ್ಲ ರೂಟ್ ಗಳಲ್ಲೂ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ಸೇವೆ ಒದಗಿಸಲು ಮುಂದಾಗಿದ್ದಾರೆ.

ಕೆಲವು ರೂಟ್ ಗಳಲ್ಲಿ ಸರಿಯಾದ ಬಸ್ ಸೇವೆ ಇಲ್ಲದೇ ಶಾಲಾ ಕಾಲೇಜು ಮಕ್ಕಳಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಶಾಸಕರಾದ ಗುರುರಾಜ ಗಂಟಿಹೊಳೆಯವರು ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಬೈಂದೂರಿನಿಂದ ಕೊಲ್ಲೂರಿಗೆ ಹೋಗಿವ ಎಲ್ಲ ರೂಟ್ ಗಳಲ್ಲೂ ಎಸ್.ವಿ.ಎಂ.ಎಸ್. ಬಸ್ ನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪ್ರಯಾಣ ಒದಗಿಸಲಿದ್ದೇವೆ ಎಂದು ಎಸ್.ವಿ.ಎಂ.ಎಸ್ ಬಸ್ ಮಾಲಕರಾದ ಶಿವಾನಂದ ಗಾಣಿಗ ಅವರು ತಿಳಿಸಿದ್ದಾರೆ.

ಶಾಸಕರಿಂದ ಅಭಿನಂದನೆ:
ಬೈಂದೂರು-ಕೊಲ್ಲೂರು ರೂಟ್ ನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಸೇವೆ ಒದಗಿಸಲು ಮುಂದಾಗಿವರು ಎಸ್.ವಿ.ಎಂ.ಎಸ್. ಬಸ್ ಮಾಲಕರಾದ ಶಿವನಂದ ಗಾಣಿಗ ಅವರ ನಿರ್ಧಾರ ನಿಜಕ್ಕೂ ಶ್ಲಾಘನೀಯ. ಕ್ಷೇತ್ರದ ಅನೇಕ ಕಡೆಗಳಲ್ಲಿ ಸರಿಯಾಗಿ ಬಸ್ ಸೇವೆ ಇಲ್ಲದೇ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಎಲ್ಲ ರೂಟ್ ಗಳಿಗೂ ಬಸ್ ಒದಗಿಸುವ ಪ್ರಯತ್ನವೂ ನಡೆಯುತ್ತಿದೆ. ಈ ಮಧ್ಯೆ ಬಸ್ ಮಾಲಕರಾಗಿ ಶಿವಾನಂದ ಗಾಣಿಗರು ತೆಗೆದುಕೊಂಡ ನಿರ್ಧಾರ ಅಭಿನಂದನೆಗೆ ಗ ಅರ್ಹವಾಗಿದೆ ಎಂದು ಶಾಸಕರಾದ ಗುರುರಾಜ ಗಂಟಿಹೊಳೆ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!