Tuesday, October 8, 2024

ಬೆಳ್ವೆ: ಅಶಕ್ತರಿಗೆ ಸಹಾಯಧನ ಹಸ್ತಾಂತರ ಹಾಗೂ ಅಭಿನಂದನಾ ಕಾರ್ಯಕ್ರಮ

belve: ಟೀಮ್ ಮಲೆನಾಡು ಹ್ಯೂಮೆನೀಟೇರಿಯನ್ ಟ್ರಸ್ಟ್ (ರಿ) ಬೆಳ್ವೆ ಇದರ ಆಶ್ರಯದಲ್ಲಿ ಅಶಕ್ತರಿಗೆ ಸಹಾಯಧನ ಹಸ್ತಾಂತರ ಹಾಗೂ ಅಭಿನಂದನಾ ಕಾರ್ಯಕ್ರಮ ಇತ್ತೀಚೆಗೆ ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಟೀಮ್ ಮಲೆನಾಡು ಹ್ಯೂಮೆನೀಟೇರಿಯನ್ ಟ್ರಸ್ಟ್ (ರಿ) ಬೆಳ್ವೆ ಇದರ ಅಧ್ಯಕ್ಷರಾದ ಮುಸ್ತಾಕ್ ಅಹಮದ್ ಬೆಳ್ವೆ ವಹಿಸಿದ್ದರು. ಬಸ್ರೂರು ಸರ್ಕಾರಿ ಉರ್ದು ಶಾಲೆಗೆ ಹಾಗೂ ಅಪಘಾತ ಗಾಯಾಳು ಗಂಗೊಳ್ಳಿಯ ನಿವಾಸಿ ನಿಸಾರ್ ಅಹಮದ್, ಸಗೀರ್ ಹೈಕಾಡಿ ಬೆಳ್ವೆ ,ಇಸ್ತ್ರಿ ಗೋಪಾಲ ಮಡಿವಾಳ , ನಜ್ಮಾ ಬಾನು ಗೋಳಿಯಂಗಡಿಯ ಯವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಲಾಯಿತು.

೨೦೨೩- ೨೪ನೆ ಯ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿ ಶೀಫಾ ಇವರನ್ನು ಅಭಿನಂದಿಸಲಾಯಿತು.

ಮುಖ್ಯ ಅಥಿತಿಗಳಾಗಿ ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕದ ಪ್ರದಾನ ಕಾರ್ಯದರ್ಶಿ , ಎನ್.ಎನ್.ಒ ಕರ್ನಾಟಕ ಪರ್ಯವರಣ ಸಮಿತಿ ಅಧ್ಯಕ್ಷ ಶೈಖ್ ಅಬ್ದುಲ್ ವಾಹೀದ್ ಉಡುಪಿ , ಜುಮ್ಮಾ ಮಸೀದಿ ಬೆಳ್ವೆಯ ಖತೀಬ್ ಮೌಲಾನ ಮೊಹಮ್ಮದ್ ರಫಿಕ್,ಕುವೈಟ್ ಅಂತಾರಾಷ್ಟ್ರೀಯ ಬ್ಯಾಂಕ್ ಕಾರ್ಯನಿರ್ವಾಹಕ ವ್ಯವಸ್ಥಾಪಕರಾದ ಸರ್ಫರಾಜ್ ಸುಲೈಮಾನ್ , ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ಟ್ರಸ್ಟೀ ಫಿರು ಸಾಹೇಬ್ ಉಡುಪಿ , ಟೀಮ್ ಮಲೆನಾಡು ಟ್ರಸ್ಟ್ ಟ್ರಸ್ಟಿ ನಝೀರ್ ಶಾ , ಅರಾಫತ್ ಆಲ್ಬಾಡಿ , ನಮ್ಮ ನಾಡ ಒಕ್ಕೂಟ ಜಿಲ್ಲಾ ಯುವ ಸಂಯೋಜಕ ಅಬ್ದುಲ್ ಖಾದರ್ ,ಬೆಳ್ವೆ ಸರ್ಕಾರಿ ಶಾಲೆ ಎಸ್.ಡಿ ಎಂ.ಸಿ ಅಧ್ಯಕ್ಷ ಅನ್ವರ್ ಹುಸೈನ್ , ಮೊದಲಾದವರು ಉಪಸ್ಥಿತರಿದ್ದರು.

ಟೀಮ್ ಮಲೆನಾಡು ಟ್ರಸ್ಟ್ ಟ್ರಸ್ಟಿ ಹುಸೈನ್ ಹೈಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲಾನ ಮೊಹಮ್ಮದ್ ರಫೀಕ್ ಕಿರಾತ ಪಠಿಸಿದರು. ಉಪಾಧ್ಯಕ್ಷರಾದ ಅಬ್ದುಲ್ ಶುಕುರ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೋಶಾಧಿಕಾರಿ ಮೊಹಮ್ಮದ್ ಆಸಿಫ್ ಅಲ್ಬಾಡಿ ಸ್ವಾಗತಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!