Sunday, September 8, 2024

ಶಾಂತಿ ಮತ್ತು ಪ್ರೀತಿಗಾಗಿ ನೃತ್ಯ ಕಾರ್ಯಕ್ರಮ | ಸಂವಿಧಾನ ಚಿನ್ನದ ಪೆಟ್ಟಿಗೆಯಲ್ಲಿ ಇಡುವ ಗ್ರಂಥವಲ್ಲ : ರಾಜು ಬೆಟ್ಟಿನಮನೆ

ಜನಪ್ರತಿನಿಧಿ (ಕಂದಾಪುರ) : ದೇಶದಲ್ಲಿರುವ ಎಲ್ಲಾ ಧರ್ಮಗ್ರಂಥಗಳಿಗಿಂತಲೂ ಸಂವಿಧಾನ ಗ್ರಂಥ ಹೆಚ್ಚು ಭಾರ ತೂಗುತ್ತದೆ. ಒಂದೊಂದು ಧರ್ಮಕ್ಕೆ ಒಂದೊಂದು ಧರ್ಮ ಗ್ರಂಥವಿದೆ. ಅಖಂಡ ಭಾರತಕ್ಕೆ ಸಂವಿಧಾನವೇ ಒಂದು ಧರ್ಮ ಗ್ರಂಥ. ಸಂವಿಧಾನ ನೀಡಿರುವ ಹಕ್ಕುಗಳೇ ನೆಮ್ಮದಿಯಿಂದ ಜೀವಿಸುವುದಕ್ಕೆ ಕಾರಣ ಎಂದು ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು ಘಟಕದ ಸಂಚಾಲಕ ರಾಜು ಬೆಟ್ಟಿನಮನೆ ಹೇಳಿದರು.

ಅಂಬೇಡ್ಕರ್ ಭವನ ಕುಂದಾಪುರದಲ್ಲಿ ಸಮುದಾಯ ಸಾಂಸ್ಕೃತಿಕ ಸಂಘಟನೆ (ರಿ.) ಕುಂದಾಪುರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕುಂದಾಪುರ ಘಟಕದ ಸಹಯೋಗದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಆಯೋಜಿಸಿದ, ʼಸಂವಿಧಾನ ಸಾಥಿʼಯ ಭಾಗವಾಗಿ ಸಹಚಾರಿ ಸಂಸ್ಥೆ ಪ್ರಸ್ತುತ ಪಡಿಸಿದ ಶಾಂತಿ ಮತ್ತು ಪ್ರೀತಿಗಾಗಿ ನೃತ್ಯ ಕಾರ್ಯಕ್ರಮಕ್ಕೂ ಮುನ್ನಾ ನಡೆದ ಸರಳ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭಾರತದಲ್ಲಿ ಅನೇಕ ಧರ್ಮಿಯರು, ಅನೇಕ ಜಾತೀಯರು, ಅನೇಕ ಸಂಸ್ಕೃತಿಯವರು ಒಂದಾಗಿ ಬದುಕುತ್ತಿದ್ದಾರೆ. ಇವೆಲ್ಲದಕ್ಕೂ ಮೂಲ ಕಾರಣ ಸಂವಿಧಾನ. ಸಂವಿಧಾನದ ಆಶಯ ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದೇವೆ ಎನ್ನುವುದು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಸಂವಿಧಾನಕ್ಕೆ ನೈಜ ಗೌರವ ನೀಡುವ ಮನಸ್ಸು ಆಳುವ ವರ್ಗಕ್ಕಿಲ್ಲ. ಸಂವಿಧಾನ ನಮಗೆ ತೆರೆದ ಪುಸ್ತಕವಾಗಬೇಕು. ಸಂವಿಧಾನ ಚಿನ್ನದ ಪೆಟ್ಟಿಗೆಯಲ್ಲಿ ಇಡುವ ಗ್ರಂಥವಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

‌ವಿದ್ಯುತ್‌ ಗುತ್ತಿಗೆದಾರ ಕೆ. ಆರ್.‌ ನಾಯಕ್ ಮಾತನಾಡಿ, ಸಂವಿಧಾನದ ಸಮರ್ಪಕ ಅನುಷ್ಠಾನದಲ್ಲಿ ವಿಫಲವಾಗಿರುವುದರಿಂದಲೇ ಸಮಸ್ಯೆಗಳು ಇನ್ನೂ ಮುಂದುವರಿದಿವೆ. ಸಂವಿಧಾನ ಮೂಲ ಆಶಯವನ್ನು ಹೊಸ ತಲೆಮಾರಿಗೆ ಸರಿಯಾದ ರೀತಿಯಲ್ಲಿ ತಲುಪಿಸುವಂತಹ ಕಾರ್ಯ ತುರ್ತಾಗಿ ಆಗಬೇಕಿದೆ ಎಂದರು.

ಸಮುದಾಯ ಕುಂದಾಪುರದ ಅಧ್ಯಕ್ಷ ಡಾ. ಸದಾನಂದ ಬೈಂದೂರು  ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ರಾಕೇಶ್ ವಕ್ವಾಡಿ ನಿರೂಪಿಸಿದರು. ಗಣೇಶ್‌ ಶೆಟ್ಟಿ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ಸಂವಾದ-ಬದುಕು ನೀಡುವ ಫೆಲೋಶಿಪ್‌ ʼಸಂವಿಧಾನ ಸಾಥಿʼಯ ಭಾಗವಾಗಿ ಸಹಚಾರಿ ಸಂಸ್ಥೆ ಪ್ರಸ್ತುತಪಡಿಸಿದ ಶಾಂತಿ ಮತ್ತು ಪ್ರೀತಿಗಾಗಿ ನೃತ್ಯ ಕಾರ್ಯಕ್ರಮವನ್ನು ಕೆ. ಶಾರದ ಆಚಾರ್ಯ ನಡೆಸಿಕೊಟ್ಟರು. ನಮ್ಮ ಸಂವಿಧಾನದಲ್ಲಿ ತಿಳಿಸಿರುವವ ಧರ್ಮ ನಿರಪೇಕ್ಷತೆ ಹಾಗೂ ಬಂಧುತ್ವ ಎಂಬ ಆದರರ್ಶಗಳನ್ನು ಭರತನಾಟ್ಯದ ಪ್ರಸ್ತುತಿಯ ಮೂಲಕ ಮನೋಜ್ಞವಾಗಿ ಪ್ರತಿಪಾದಿಸಿದರು.

(ಭರತನಾಟ್ಯ ಕಲಾವಿದೆ ಕೆ. ಶಾರದಾ ಆಚಾರ್ಯ, ಬೆಂಗಳೂರು)

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!