Sunday, September 8, 2024

ಪ್ರಸಂಗಕರ್ತೆ ಶಾಂತ ವಾಸುದೇವ ಪೂಜಾರಿ ಅವರಿಗೆ “ಶ್ರೀಮಿತ್ರ ಪ್ರಶಸ್ತಿ” ಪ್ರದಾನ

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣಮಠ ಉಡುಪಿ ಇದರ ಆಶ್ರಯದಲ್ಲಿ ಶ್ರೀ ಮಿತ್ರ ಯಕ್ಷಗಾನ ಮಂಡಳಿ ಸರಳೇಬೆಟ್ಟು ಮಣಿಪಾಲ, ಶ್ರೀ ಮಿತ್ರ ಕಲಾನಿಕೇತನ ಟ್ರಷ್ಟ್ (ರಿ) ಸರಳೇಬೆಟ್ಟು ಮಣಿಪಾಲ, ಶ್ರೀ ಯಕ್ಷಮಿತ್ರ ಯಕ್ಷಗಾನ ತರಬೇತಿ ಕೇಂದ್ರ ಸರಳೇಬೆಟ್ಟು ಮಣಿಪಾಲ. ರಸಿಕರತ್ನ ವಿಟ್ಲ ಗೋಪಾಲಕೃಷ್ಣ ಜೋಶಿ ಪ್ರತಿಷ್ಠಾನ (ರಿ) ಪರ್ಕಳ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಂಸ್ಥೆಗಳ ಸಹಯೋಗದೊಂದಿಗೆ ಯಕ್ಷರಂಗಕಲಾ ಸಂಸ್ಥೆ, ಇದರ ೪೧ನೇ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜೂ.೧೬ರಂದು ಉಡುಪಿ ಶ್ರೀ ಕೃಷ್ಣ ಮಠ ರಾಜಾಂಗಣದಲ್ಲಿ ಜರಗಿತು.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹತ್ತು ಜನ ಕಲಾಸಾಧಕರಿಗೆ ಪ್ರಶಸ್ತಿ ಪ್ರದಾನವು ಪುತ್ತಿಗೆ ಮಠದ ಪರ್ಯಾಯ ಯತಿವರ್ಯರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳರವರಿಂದ ನೆರವೇರಿತು.

ಈ ಹತ್ತು ಜನ ಸಾಧಕರ ಪೈಕಿ ಮಹಿಳಾ ಯಕ್ಷಗಾನ ಪ್ರಸಂಗಕರ್ತರಾದ ಶಾಂತ ವಾಸುದೇವ ಪೂಜಾರಿ ಆನಗಳ್ಳಿ ಕುಂದಾಪುರ ಇವರಿಗೆ ಕೃಷಿಕ ಉದ್ಯಮಿ ಜಡ್ಡುಮನೆ ರಂಗಪ್ಪ ಪ್ರಭು ಸ್ಮಾರಕ “ಶ್ರೀಮಿತ್ರ ಪ್ರಶಸ್ತಿ” ಯನ್ನು ಪ್ರದಾನ ಮಾಡಲಾಯಿತು.

ಇವರ ಅಚ್ಚೋದ ಸರಸಿ, ಮೇಘ ಮಂಜರಿ, ಕಾವ್ಯತರಂಗಿಣಿ, ವಿಧಿವಂಚಿತೆ, ಅಂಬರತಾರೆ, ಅಮೋಘಚಂದ್ರಿಕೆ, ಸ್ವಾಹಾಗ್ನಿನಂದನ, ಮಧುರಸಿಂಚನ, ಶ್ರೀಕೃಷ್ಣಕಾರುಣ್ಯ ಮತ್ತು ” ’ರಸ ಪೌರ್ಣಮಿ’ ಮುಂತಾದ ಪ್ರಸಂಗಗಳು. ಡೇರೆ ಮೇಳಗಳಾದ ಶಿರಸಿ, ಪೆರ್ಡೂರು, ಸಾಲಿಗ್ರಾಮ ಹಾಗೂ ಬಯಲಾಟ ಮೇಳಗಳಾದ ಗೋಳಿಗರಡಿ , ನೀಲಾವರ, ಹಾಲಾಡಿ , ಮಡಾಮಕ್ಕಿ, ಸೌಕೂರು ಮೇಳಗಳಲ್ಲಿ. ಯಶಸ್ವಿ ಪ್ರದರ್ಶನ ಕಂಡು ಜನ ಮೆಚ್ಚುಗೆ ಗಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!