Saturday, October 12, 2024

ತೆಕ್ಕಟ್ಟೆಯಲ್ಲಿ ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘದ ಶಾಖೆ ಉದ್ಘಾಟನೆ

ಕುಂದಾಪುರ: ತೆಕ್ಜಟ್ಟೆಯ ಶ್ರೀ ಸಿದ್ದಿವಿನಾಯಕ ಕಾಂಪ್ಲೆಕ್ಸ್ ನಲ್ಲಿ ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘದ ಇದರ ನೂತನ ತೆಕ್ಕಟ್ಟೆ ಶಾಖೆ ಉದ್ಘಾಟನೆಗೊಂಡಿತು.

ತೆಕ್ಕಟ್ಟೆ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ ಕುಂದರ್,  ಪಾರದರ್ಶಕ ವ್ಯವಹಾರ, ಪ್ರಾಮಾಣಿಕ ಸೇವೆಯಿಂದ ಸಹಕಾರ ಕ್ಷೇತ್ರ ಬೆಳೆಯಲು ಸಾಧ್ಯ. ಜನರ ಸಹಕಾರ, ಷೇರುದಾರರ ಪ್ರೋತ್ಸಾಹ, ಆಡಳಿತ ಮಂಡಳಿ, ಸಿಬ್ಬಂದಿಗಳ ಶ್ರದ್ಧೆ, ಆಸಕ್ತಿಯಿಂದ ಸಹಕಾರಿ ಸಂಘಗಳು ಅಭಿವೃದ್ಧಿಯಾಗುತ್ತವೆ. ಕಳೆದ 31 ವರ್ಷಗಳ ಹಿಂದೆ ಆರಂಭಗೊಂಡ ಈ ಸಂಘ 31 ಕೋಟಿ ಠೇವಣಿ ಹೊಂದಿ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಸಂತೋಷದ ವಿಚಾರವಾಗಿದೆ. ಕರಾವಳಿ ಜಿಲ್ಲೆಯಲ್ಲಿ ಸಹಕಾರ ಚಳವಳಿ ಚೆನ್ನಾಗಿ ಬೆಳೆದಿದೆ. ಇಲ್ಲಿನ ಸಹಕಾರ ವ್ಯವಸ್ಥೆ ಕೂಡಾ ಜನರ ವಿಶ್ವಾಸ ಗಳಿಸಿಕೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಶೇಖರ್ ಕಾಂಚನ್ ವಹಿಸಿದ್ದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ.ಆರ್. ಗಣಕ ಯಂತ್ರ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತೆಕ್ಕಟ್ಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಎಮ್ ಶಿವರಾಮ್ ಶೆಟ್ಟಿ, ಸಂತೋಷ ನಾಯಕ್, ಉದ್ಯಮಿ ಸಂತೋಷ ನಾಯಕ್, ಕಟ್ಟಡ ಮಾಲಕರಾದ ಡಾ. ಕೃಷ್ಣಯ್ಯ ಶೆಟ್ಟಿ, ತೆಕ್ಕಟ್ಟೆ ಗ್ರಾ.ಪಂ. ಅಧ್ಯಕ್ಷ ಟಿ ಶೋಭನಾ, ಕುಂಭಾಶಿ ಗ್ರಾ.ಪಂ. ಅಧ್ಯಕ್ಷ ಆನಂದ ಪೂಜಾರಿ, ಉಪಾಧ್ಯಕ್ಷ ಕೃಷ್ಣ್ ಪೂಜಾರಿ ಹಾಗೂ ಸೊಸೈಟಿಯ ನಿರ್ದೇಶಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಮೆಸ್ಕಾಂ ಅಭಿಯಂತರರು ಟಿ. ಸತ್ಯನಾರಾಯಣ ಹೆಬ್ಬಾರ್ ಮತ್ತು ಕುಂದಾಪುರ ಸಹಕಾರ ಸಂಘಗಳ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ.ಇವರನ್ನು ಸನ್ಮಾನಿ, ಗೌರವಿಸಲಾಯಿತು. ಕೊಮೆ ಕೊರವಡಿ ಶಾಲೆಗೆ ಉಚಿತ ಪುಸ್ತಕವನ್ನು ವಿತರಿಸಲಾಯಿತು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋಪಾಲ ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಚಂದ್ರ ದೇವಾಡಿಗ ಪ್ರಾರ್ಥಿಸಿದರು. ಚಂದ್ರ ಮೊಗವೀರ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಗಣಪತಿ ಟಿ.ಶ್ರೀಯಾನ್ ವಂದಿಸಿದರು.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಶಸ್ವೀ ಕಲಾವೃಂದ ಕೊಮೆಯ ಸಿನ್ಸ್ 1999 ‘ಶ್ವೇತಯಾನ- 33’ ಕಾರ್ಯಕ್ರಮದಡಿಯಲ್ಲಿ ಯಕ್ಷ ಗಾನ ವೈಭವ ಜರಗಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!