Sunday, September 8, 2024

ಭವಿಷ್ಯದ ಕುಡಿಗೆ ಸಂಸ್ಕಾರ ನೀಡುವ ಸಂಸ್ಥೆ ಯಶಸ್ವೀ ಕಲಾವೃಂದ- ಜನ್ಸಾಲೆ ರಾಘವೇಂದ್ರ ಆಚಾರ್ಯ

ತೆಕ್ಕಟ್ಟೆ:  ಅವಕಾಶಗಳಿಗಾಗಿ ಕಾಯವುದು ತರವಲ್ಲ. ಅವಕಾಶಗಳನ್ನು ನಾವು ಕಂಡುಕೊಳ್ಳಬೇಕು. ತೆಕ್ಕಟ್ಟೆ ಯಕ್ಷಗಾನ ಕೇಂದ್ರವು ಇತ್ತೀಚೆಗೆ ಅನೇಕ ಕಲಾವಿದರನ್ನು ಹುಟ್ಟು ಹಾಕುತ್ತಿರುವ ಸಂಸ್ಥೆ. ಮಕ್ಕಳಲ್ಲಿ ಕಲಾಭಿರುಚಿ ಮೂಡಿಸಿ, ಸಾಂಸ್ಕೃತಿಕ ಲೋಕಕ್ಕೆ ಕೊಡುಗೆಯಾಗುವ ಭವಿಷ್ಯದ ಕುಡಿಗೆ ಸಂಸ್ಕಾರ ನೀಡುವ ಕಾರ್ಯವನ್ನು ನಿರಂತರ ಮಾಡುತ್ತಿರುವ ಯಶಸ್ವಿ ಸಂಸ್ಥೆಯನ್ನು ಶ್ಲಾಘಿಸಲೇಬೇಕು ಎಂದು ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ  ನುಡಿದರು.

ಕೊಮೆ-ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘದ ತೆಕ್ಕಟ್ಟೆಯ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೂನ್ ೭ರಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಶಸ್ವೀ ಕಲಾವೃಂದ ಕೊಮೆಯ ಸಿನ್ಸ್ ೧೯೯೯ ಶ್ವೇತಯಾನ- ೩೩ ಕಾರ್ಯಕ್ರಮದಡಿಯಲ್ಲಿ ಯಕ್ಷ ಗಾನ ವೈಭವ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನ್ನಾಡಿದರು.

ದೇಶದಾದ್ಯಂತ ಹೆಸರಾಗಿರುವ ನಮ್ಮೂರ ಸಂಸ್ಥೆಯನ್ನು ಸ್ಥಳೀಯ ಸಂಸ್ಥೆಗಳು ಗುರುತಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಸಾಂಸ್ಕೃತಿಕ ವಲಯಕ್ಕೆ ಅಪಾರ ಕೊಡುಗೆ ನೀಡುತ್ತಾ ಜನಾನುರಾಗಿಯಾಗಿ ಬೆಳೆದು, ಇಪ್ಪತ್ತೈದರ ವರ್ಷಾಚರಣೆ ನಡೆಸಿಕೊಳ್ಳುತ್ತಿರುವಾಗ ಕಲಾಭಿಮಾನಿಗಳು ಪ್ರೋತ್ಸಾಹಿಸಬೇಕು. ಸಂಸ್ಥೆಯನ್ನು ಪ್ರೋತ್ಸಾಹಿಸಿದರೆ ನಮ್ಮೂರ ಕುಡಿಗಳನ್ನು ಪ್ರೋತ್ಸಾಹಿಸದ ಹಾಗೆ ಎಂದು ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಶೇಖರ ಕಾಂಚನ್ ಅಭಿಪ್ರಾಯ ಪಟ್ಟಿದ್ದಾರೆ.

ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಪಂಚಮಿ ವೈದ್ಯ, ಕಿಶನ್ ಪೂಜಾರಿ, ಸುನೀಲ್ ಭಂಡಾರಿ ಕಡತೋಕ, ಸುಜನ್ ಹಾಲಾಡಿ ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!