Sunday, September 8, 2024

ಜೂನ್‌ 4ರಂದು ನೀರು ಇಟ್ಟುಕೊಂಡಿರಿ, ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ! | NDA ಗೆಲುವಿನ ಮುನ್ಸೂಚನೆ ನೀಡಿದರೇ ಪ್ರಶಾಂತ್‌ ಕಿಶೋರ್‌ ? : ಇಲ್ಲಿದೆ ಡಿಟೇಲ್ಸ್‌

ಜನಪ್ರತಿನಿಧಿ (ನವದೆಹಲಿ) : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಗೆಲುವಿನ ನಗೆ ಬೀರಲಿದೆ ಎಂದು ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಮುನ್ಸೂಚನೆ ನೀಡಿದ್ದಾರೆ.

ಜೂನ್ 4 ರಂದು ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಚುನಾವಣೆಯಲ್ಲಿ ಬಿಜೆಪಿ 303 ಅಥವಾ ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳುವ ಮೂಲಕ ಪ್ರಶಾಂತ್ ಕಿಶೋರ್ ತಮ್ಮ ಸಮೀಕ್ಷೆಯನ್ನು ಪ್ರಶ್ನಿಸಿದವರಿಗೆ ತಿರುಗೇಟು ನೀಡಿದ್ದಾರೆ.

ಜೂನ್‌ 4ರಂದು  ನಮ್ಮ ಸಮೀಕ್ಷೆಗಳನ್ನು ಪ್ರಶ್ನಿಸುತ್ತಿರುವವರು ಪಕ್ಕದಲ್ಲಿ ನೀರು ಇಟ್ಟುಕೊಂಡಿರಿ. ಕಾರಣ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರಶಾಂತ್ ಕಿಶೋರ್ ಪೋಸ್ಟ್‌ ಮಾಡಿದ್ದಾರೆ.

ಇನ್ನು, ರಾಷ್ಟ್ರೀಯ ಸುದ್ದಿ ವಾಹಿನಿ NDTVಯ ಪ್ರಧಾನ ಸಂಪಾದಕ ಸಂಜಯ್ ಪುಗ್ಲಿಯಾ ಅವರೊಂದಿಗಿನ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ ಪ್ರಶಾಂತ್‌ ಕಿಶೋರ್‌, ಪ್ರಸ್ತುತ ಪ್ರತಿಪಕ್ಷಗಳು ಹಾಗೂ ಸಾಮಾನ್ಯ ಜನರ ಮೌಲ್ಯಮಾಪನವು ಬಿಜೆಪಿ 370 ಸ್ಥಾನಗಳನ್ನು ಪಡೆಯುತ್ತದೆಯೋ ಇಲ್ಲವೋ ಎಂಬುದರ ಸುತ್ತ ಸುತ್ತುತ್ತಿದೆ ಎಂದು ಹೇಳಿದ್ದರು. 272 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ, ಆದರೆ ಬಹುಮತದ ಸಂಖ್ಯೆ 272 ಆಗಿದೆ. ಕಿಶೋರ್ ಪ್ರಕಾರ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ತಮಿಳುನಾಡು, ಕೇರಳದಂತಹ ಪೂರ್ವ ಮತ್ತು ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಹೊಂದಿರುವ ಸ್ಥಾನಗಳ ಸಂಖ್ಯೆ 15-20 ಸ್ಥಾನಗಳಷ್ಟು ಹೆಚ್ಚಾಗುತ್ತದೆ. ಈ ರಾಜ್ಯಗಳಲ್ಲಿ ಬಿಜೆಪಿಯ ಮತ ಪ್ರಮಾಣವೂ ಹೆಚ್ಚಲಿದೆ. ಅಂದರೆ ಎನ್‌ಡಿಎ ಪರಿಸ್ಥಿತಿ ಇವತ್ತಿಗಿಂತ ಚೆನ್ನಾಗಿರಬಹುದು. ಸೀಟು ಕಡಿಮೆಯಾಗುವ ಸಾಧ್ಯತೆ ತೀರಾ ಕಡಿಮೆ ಎನಿಸುತ್ತಿದೆ ಎಂದು ಅವರು ಹೇಳಿದರು.

ಎನ್‌ಡಿಟಿವಿ ಜೊತೆಗಿನ ವಿಶೇಷ ಸಂವಾದದಲ್ಲಿ ಪ್ರಶಾಂತ್ ಕಿಶೋರ್, ನಾಲ್ಕು ಪ್ರಮುಖ ಭವಿಷ್ಯ ನುಡಿದಿದ್ದರು. ಈ ಬಾರಿಯೂ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದರು.

ದೇಶದಲ್ಲಿ ಮೋದಿ ವಿರೋಧಿ ಅಲೆ ಕಾಣುತ್ತಿಲ್ಲ. ಮೋದಿ ಹೆಸರಲ್ಲಿ ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲಲಿದೆ. 2019ರಂತೆಯೇ ಎನ್‌ಡಿಎ 303 ಸ್ಥಾನಗಳೊಂದಿಗೆ ಅಥವಾ ಇನ್ನೂ ಹೆಚ್ಚು ಸ್ಥಾನಗಳೊಂದಿಗೆ ತೇರ್ಗಡೆಯಾಗಲಿದೆ. ಉತ್ತರ ಮತ್ತು ಪಶ್ಚಿಮದಲ್ಲಿ ಸುಮಾರು 325 ಲೋಕಸಭಾ ಸ್ಥಾನಗಳಿವೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು. 2014ರಿಂದ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿಯೂ ಪಶ್ಚಿಮ ಮತ್ತು ಉತ್ತರದಲ್ಲಿ ಬಿಜೆಪಿಗೆ ಯಾವುದೇ ಗಮನಾರ್ಹ ನಷ್ಟ ಕಂಡುಬರುತ್ತಿಲ್ಲ ಎಂದು ಅವರು ಹೇಳಿದ್ದರು.

ಇನ್ನು, ಪೂರ್ವ ಮತ್ತು ದಕ್ಷಿಣದಲ್ಲಿ ಸುಮಾರು 225 ಸ್ಥಾನಗಳಿವೆ. ಪ್ರಸ್ತುತ ಈ ರಾಜ್ಯಗಳಲ್ಲಿ ಬಿಜೆಪಿ 50ಕ್ಕಿಂತ ಕಡಿಮೆ ಸ್ಥಾನಗಳನ್ನು ಹೊಂದಿದೆ. ಈ ಹಿಂದೆ ಈ ಸ್ಥಳಗಳಲ್ಲಿ ಬಿಜೆಪಿಯ ಸಾಧನೆ ಚೆನ್ನಾಗಿರದಿದ್ದರೂ ಈ ಬಾರಿಯ ಚುನಾವಣೆಯಲ್ಲಿ ಕಡಿಮೆಯಾಗುವ ಬದಲು ಒಡಿಶಾ, ತೆಲಂಗಾಣ, ಬಿಹಾರ, ಆಂಧ್ರ, ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮುಂತಾದ ಆಗ್ನೇಯ ರಾಜ್ಯಗಳಲ್ಲಿ ಬಿಜೆಪಿಯ ಸ್ಥಾನಗಳು ಹೆಚ್ಚಾಗಲಿವೆ. ಇಲ್ಲಿ ಪಕ್ಷವು ಒಟ್ಟು ಸ್ಥಾನಗಳಲ್ಲಿ 15-20 ಸ್ಥಾನಗಳನ್ನು ಗಳಿಸುತ್ತಿದೆ ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!