spot_img
Wednesday, January 22, 2025
spot_img

ಪದವಿಧರರ ಕ್ಷೇತ್ರದಲ್ಲಿ ಸಾಧನೆಗಳೆ ಮಾತಾಡಬೇಕು !

ಈ ಬಾರಿಯ ನೈರುತ್ಯ ಪದವಿಧರರ ಕ್ಷೇತ್ರ ಅತ್ಯಂತ ಕುತೂಹಲಕಾರಿ ರಣರಂಗವಾಗಿ ಹೊರ ಹೊಮ್ಮಿರುವುದಂತು ಸತ್ಯ. ಈ ಬಾರಿಯ ಚುನಾವಣೆಯ ವಿಶೇಷ ವೈಶಿಷ್ಟ್ಯವೆಂದರೆ ಪಕ್ಷಗಳನ್ನೆ ಬದಿಗೆ ಸರಿಸಿ ನಿಂತ ಅಭ್ಯರ್ಥಿಗಳ ಹಿಂದಿನ ಸಾಧನೆ ಮುಂದಿನ ಕಾರ್ಯಶೀಲತೆಗಳೆ ಪದವಿಧರ ಮತದಾರರ ಗಮನ ಸೆಳೆಯುತ್ತಿರುವುದು ಇನ್ನೊಂದು ಹೊಸ ಬೆಳವಣಿಗೆಯೂ ಹೌದು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುಂದಾಗಿರುವ ಆಯನೂರು ಮಂಜುನಾಥ್ ಪಕ್ಷಕ್ಕಿಂತ ಅವರ  ಹಿಂದಿನ ಹೇೂರಾಟಗಳೇ ಅವರಿಗೆ ಶ್ರೀರಕ್ಷೆ ಎನ್ನುವುದು ಸತ್ಯ. ಪದವಿಧರರ ಸಮಸ್ಯೆಗಳಿರಬಹುದು ಶಿಕ್ಷಕರ ಸಮಸ್ಯೆಗಳಿರಬಹುದು ಬಿಜೆಪಿಯ ಸದಸ್ಯರಾಗಿದ್ದಾಗಲೂ ಸಹ ಹಳೆ ಪಿಂಚಣಿ ಪರ ಧ್ವನಿ ಎತ್ತುವುದರ ಮೂಲಕ ಸದನದಲ್ಲಿ ಸಂಚಲನ ಮೂಡಿಸಿರುವುದನ್ನು ಪಿಂಚಣಿ ವಂಚಿತ ನೌಕರರು ಮರೆಯಲು ಸಾಧ್ಯನೇ ಇಲ್ಲ. ಅನಂತರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಅನಂತರದಲ್ಲಿ ಹಳೆ ಪಿಂಚಣಿ ಜಾರಿಯ ಭರವಸೆ ಪ್ರಣಾಳಿಕೆಯಲ್ಲಿ ಸೇರಿಸುವುದರಲ್ಲಿ ಮಂಜುನಾಥರ ಪ್ರಯತ್ನವೂ ಇದೆ ಅನ್ನುವುದು ಅವರ ಸಾಧನೆಗಳು ಮಾತನಾಡಲೂ ಒಂದು ಕಾರಣವಾಗಿದೆ. ಇಲ್ಲಿ ಆಯನೂರರಿಗೆ ಇರುವ ಸಮಸ್ಯೆ ಅಂದರೆ ಅವರ ಸಾಧನೆಗಳನ್ನು ಕರಾವಳಿಯ ಮತದಾರರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಕಾಂಗ್ರೆಸ್‌ನ ಕೈ ಬಲ ಸಾಲದು ಎನ್ನುವುದು ಮೇಲ್ನೋಟಕ್ಕೆ  ಕಾಣಿಸುವ ವಾಸ್ತವಿಕತೆ.

> ಶಿಕ್ಷಣ ಕಲೆ ಸಂಸ್ಕೃತಿ ಕ್ರೀಡೆ ಹಾಗೂ ಕ್ಷೇತ್ರಾಭಿವೃಧಿ ಮತ್ತು ಪ್ರಯೇೂಗಶೀಲ ವ್ಯಕ್ತಿತ್ವ ಗುಣದ ಮೇಲೆ ಚಿರಪರಿತರಾದ ಹಿನ್ನೆಲೆಯಲ್ಲಿ ನೇೂಡುವಾಗ ಮಾಜಿ ಶಾಸಕರಾದ ರಘಪತಿ ಭಟ್ಟರು ಮತ್ತು ಆಯನೂರ ಮಂಜುನಾಥ ನಡುವೆ “ನೆಕ್ ಟು ನೆಕ್ ಫೈಟ್” ಆಗುವುದಂತೂ ನಿಶ್ಚಿತ ಎನ್ನುವ ವಾತಾವರಣ ಕರಾವಳಿ  ಮತ್ತು ಮಲೆನಾಡು ಪ್ರದೇಶದಲ್ಲಿ ಸೃಷ್ಟಿಯಾಗಿದೆ. ಪಕ್ಷೇತರ ಅಭ್ಯರ್ಥಿ ಕೆ. ರಘಪತಿ ಭಟ್ಟರು ಕೂಡಾ ಶಿಕ್ಷಕರ ಮತ್ತು ನೌಕರರ ಹಾಗೂ ಪದವಿಧರರ ಸಮಸ್ಯೆಗಳ ಕುರಿತಾಗಿಯೇ ತನ್ನ ಶಾಸಕತನವನ್ನು ಮೀಸಲಿಡುತ್ತೇನೆ ಮಾತ್ರವಲ್ಲ ವಿಧಾನಪರಿಷತ್ ಪ್ರತಿನಿಧಿಗಳು ಹೇಗೆ ಅಸಂಘಟಿತ ವರ್ಗದ ಮತದಾರನ್ನು ಒಂದೇ ವೇದಿಕೆಯಲ್ಲಿ ತರಬಹುದು ಎನ್ನುವುದನ್ನು ಸಾಧಿಸಿ ತೇೂರುತ್ತೇನೆ ಎನ್ನುವ ವಾಗ್ದಾನವನ್ನು ಪದವಿಧರರ ಒಡಲಿಗೆ ತುಂಬಿಸುವ ಮಾತಿಗೆ ಹೆಚ್ಚು ಧ್ವನಿ ತುಂಬಿದ್ಫಾರೆ. ಅದೇ ರೀತಿಯಲ್ಲಿ ನೌಕರರ ಬಹು ಮುಖ್ಯ ಬೇಡಿಕೆಯಾದ ಹಳೆ ಪಿಂಚಣಿ ಸಮಸ್ಯೆಯನ್ನು ಮೊದಲ ಆದ್ಯತೆಯಲ್ಲಿ ಪರಿಗಣಿಸಿ ಹೇೂರಾಡುತ್ತೇನೆ ಎನ್ನುವ ಭರವಸೆಯ ಮಾತುಗಳನ್ನು ಸರಕಾರಿ ನೌಕರರ ಮತ್ತು ಪಿಂಚಣಿ ವಂಚಿತ ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಖುದ್ದಾಗಿ ತಿಳಿಸಿದ್ದಾರೆ. ಇದು ರಘಪತಿ ಭಟ್ಟರ ಗೆಲುವಿಗೆ ಹೆಚ್ಚಿನ ಶಕ್ತಿ ನೀಡಬಹುದು ಎನ್ನುವುದು ಭಟ್ಟರ ಪಾಲಿಗೆ ಸಾಧನೆಗಳೇ ಮಾತನಾಡುತ್ತವೆ ಎನ್ನುವುದಕ್ಕೆ ಪುಷ್ಟಿ ನೀಡುವಂತಿದೆ.

 > ಬಿಜೆಪಿಯ ಕಡೆಯಿಂದ ಸ್ಪರ್ಧೆಯಲ್ಲಿರುವ ರಾಜಕೀಯ ಕ್ಷೇತ್ರಕ್ಕೆ ಹೊಸಬರು ಎನ್ನಿಸಿಕೊಂಡಿರುವ ಡಾ.ಧನಂಜಯ ಸರ್ಜಿ ಅವರು ಮಲೆನಾಡು ಪ್ರದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರುಗಳಿಸಿಬಹುದು ಆದರೆ ಕರಾವಳಿ ಜಿಲ್ಲೆಯಲ್ಲಿ ಅವರ ಹೆಸರನ್ನು ಮೊದಲ ಬಾರಿಗೆ ಕೇಳಿದವರೇ ಜಾಸ್ತಿ. ಬಿಜೆಪಿಯ ಹಿರಿಯ ನಾಯಕರ ಬೆಂಬಲದಿಂದಲೇ ಪರಿಚಯ ಮಾಡಿಸಿಕೊಳ್ಳುವುದರ ಜೊತೆಗೆ ತಮ್ಮ ಪಕ್ಷದ ವರ್ಚಸ್ಸು ಮತ್ತು ನಾಯಕರುಗಳ ಸಾಧನೆಯನ್ನು ಬಿಂಬಿಸಿಕೊಂಡು ಪದವಿಧರರಲ್ಲಿ ಮತಯಾಚನೆ ಮಾಡಬೇಕಾದ ಅನಿವಾರ್ಯತೆಯೂ ಇದೆ. ಪದವಿಧರರು ಮತ್ತು ನೌಕರರ ಸಮಸ್ಯೆಗಳ ಕುರಿತಾಗಿ ಗಮನಹರಿಸುತ್ತೇನೆ ಎನ್ನುವ ಭರವಸೆ ನೀಡಬಹುದೇ ಹೊರತು ನೌಕರರ ಜೀವನ ಮರಣ ಸಮಸ್ಯೆಯಾದ ಹಳೆ ಪಿಂಚಣಿ ಕುರಿತಾಗಿ ಮಾತನಾಡುವ ಪರಿಸ್ಥಿತಿಯಲ್ಲಿ ಅವರು ಇಲ್ಲ  ನಂಬಿಬಂದ ಪಕ್ಷದ ಕಡೆಯಿಂದಲೂ ಇಲ್ಲ. ಹಾಗಾಗಿ ಬಿಜೆಪಿ ಅಭ್ಯರ್ಥಿ ಸರ್ಜಿಯವರು ಕೂಡಾ ಪಿಂಚಣಿ ವಿಷಯದಲ್ಲಿ ತುಟಿ ಬಿಚ್ಚುವ ಪರಿಸ್ಥಿತಿಯಲ್ಲಿ ಇಲ್ಲ ಎನ್ನುವುದು ಪಿಂಚಣಿ ವಂಚಿತ ನೌಕರರ ಸಾರ್ವತ್ರಿಕ ಅಭಿಪ್ರಾಯವೂ ಹೌದು.

ಒಂದಂತೂ ಸತ್ಯ ವಿಧಾನಪರಿಷತ್ ಚುನಾವಣೆಯಲ್ಲಿ ಪದವಿಧರರು ಮತ್ತು ನೌಕರರ ಹಾಗೂ  ಶಿಕ್ಷಕರ ಸಮಸ್ಯೆಗಳಿಗೆ ಹೃದಯ ತುಂಬಿ ಸ್ಪಂದಿಸದಿದ್ದರೆ ಅವರ ಭಾವನೆಗಳು ಮತವಾಗಿ ಪರಿವರ್ತನೆಯಾಗಲಾರದು ಎನ್ನುವುದು ಹಿಂದಿನ ಅನೇಕ ಸಂದರ್ಭದಲ್ಲಿ ವೇದ್ಯವಾಗಿದೆ. ಉದಾಹರಣೆಗೆ ಕಳೆದ ಬಾರಿ ನಡೆದ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮಂಗಳೂರಿನ ಮೌಲ್ಯಮಾಪನ ಕೇಂದ್ರಕ್ಕೆ ಮತಯಾಚನೆಗೆ ಬಂದ ಸಂದರ್ಭದಲ್ಲಿ ಅಲ್ಲಿನ ಶಾಸಕರೊಬ್ಬರು ತಮ್ಮ ಅಭ್ಯರ್ಥಿಯ ಪರಯಾಚನೆ ಸಂದರ್ಭದಲ್ಲಿ ನಮ್ಮ ಪಕ್ಷದ ರಾಷ್ಟ್ರ ನಾಯಕರ ಸಾಧನೆ ಹೇಳಲು ಹೊರಟಾಗ ಅಲ್ಲಿನ ಉಪನ್ಯಾಸಕರು ಎದ್ದು ನಿಂತು ಕೇಳಿದ ಪ್ರಶ್ನೆ ಅಂದರೆ ನಿಮ್ಮ ನಾಯಕರ ಸಾಧನೆ ಸರಿ ನಿಮ್ಮ ಅಭ್ಯರ್ಥಿ ನಮ್ಮ ಸಮಸ್ಯೆಗೆ ಎಷ್ಟು ಸ್ಪಂದಿಸಿದ್ದಾರೆ ತಿಳಿಸಿ..?

ಒಂದಂತೂ ಸತ್ಯ ಪದವಿಧರರ ಮತ್ತು ಶಿಕ್ಷಕರ ಹೃದಯ ಗೆಲ್ಲಬೇಕಾದರೆ ಆವರ ಸಮಸ್ಯೆಗಳಿಗೆ ಉತ್ತರ ಸ್ಪರ್ಧಾಳುಗಳ ಹೃದಯದಲ್ಲಿ ತುಂಬಿಸಿಕೊಂಡುಬರಲೇಬೇಕು ಇದರ ಜೊತೆಗೆ ಸಾಧನೆಗಳ ಪ್ರೇೂಗ್ರೆಸ್ ರಿಪೇೂರ್ಟ್ ಹಿಡಿದುಕೊಂಡು ಬರಲೇಬೇಕು. ಈ ಮೂರರಲ್ಲಿ ಯಾರು ಹಿತವರು ಎನ್ನುವುದನ್ನು ಕಾದು ನೇೂಡೇೂಣ .

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!