spot_img
Tuesday, March 31, 2026
spot_img

ದ್ವಿತೀಯ ಪಿಯುಸಿ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಹೆಬ್ಬಾರ್  ರಾಜ್ಯಕ್ಕೆ ದ್ವಿತೀಯ

ಜನಪ್ರತಿನಿಧಿ (ಕುಂದಾಪುರ) : ದ್ವಿತೀಯ ಪಿಯುಸಿ 2 ನೇ ಹಂತದ ವಾರ್ಷಿಕ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಹೆಬ್ಬಾರ್  ವಿಜ್ಞಾನ ವಿಭಾಗದಲ್ಲಿ 597  ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು,ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ  ಅಗ್ರ ಗಣ್ಯ ಸಾಧನೆ ಮೆರೆದಿದ್ದಾಳೆ.

ದ್ವಿತೀಯ ಪಿಯುಸಿ ಪರೀಕ್ಷಾ 2 ರಲ್ಲಿ ಭೌತಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ ನಲ್ಲಿ ತಲಾ ಎರಡು ಅಂಕಗಳು ಹೆಚ್ಚು ಪಡೆಯುವುದರೊಂದಿಗೆ ಶ್ರೀಲಕ್ಷ್ಮೀ ಹೆಬ್ಬಾರ್ ಗೆ ಒಟ್ಟು ನಾಲ್ಕು ಅಂಕಗಳು ಹೆಚ್ಚುವರಿಯಾಗಿ ದೊರೆತಿವೆ. ಹಾಗಾಗಿ ವಿಜ್ಞಾನ ವಿಭಾಗದಲ್ಲಿ ಶ್ರೀಲಕ್ಷ್ಮಿಗೆ ರಾಜ್ಯದಲ್ಲಿ ಎರಡನೇ ರ‍್ಯಾಂಕ್‌ ಲಭಿಸಿದೆ.

ಪಿಯುಸಿ ಫಲಿತಾಂಶ ಪ್ರಕಟವಾದಾಗ ಶ್ರೀಲಕ್ಷ್ಮೀಗೆ 588 ಅಂಕ ಲಿಭಿಸಿತ್ತು. ಇಂಗ್ಲಿಷ್ ಪತ್ರಿಕೆಯ ಮರುಮೌಲ್ಯಪಾನಕ್ಕೆ ಅರ್ಜಿ ಸಲ್ಲಿಸಿದ್ದರು. ಮೊದಲು ಇಂಗ್ಲಿಷ್ ನಲ್ಲಿ ಶ್ರೀಲಕ್ಷ್ಮೀ ಗೆ 94 ಅಂಕ ದೊರೆತಿತ್ತು. ಮರುಮೌಲ್ಯಮಾಪನದ ಬಳಿಕ 5 ಅಂಕಗಳ ಹೆಚ್ಚಳದೊಂದಿಗೆ  99 ಅಂಕ ಪಡೆದಿದ್ದಾರೆ. ಇದರಿಂದ ಒಟ್ಟು ಅಂಕಗಳು 593ಕ್ಕೆ ಏರಿಕೆಯಾಗಿತ್ತು. ಈಗ ಪರೀಕ್ಷಾ 2 ರಲ್ಲಿ ಮತ್ತೆ ನಾಲ್ಕು ಅಂಕಗಳು ಹೆಚ್ಚಳ ಪಡೆಯುವುದರ ಮೂಲಕ ಶ್ರೀಲಕ್ಷ್ಮೀ ರಾಜ್ಯಕ್ಕೆ ಎರಡನೇ ರ‍್ಯಾಂಕ್‌ ಪಡೆದಿದ್ದಾರೆ.

ವಿದ್ಯಾರ್ಥಿನಿಯ ಅಪೂರ್ವ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ- ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!