spot_img
Wednesday, January 22, 2025
spot_img

ಹರೀಶ್‌ ಪೂಂಜಾ ಪ್ರಕರಣ : ಅನಾಗರಿಕ ಪದಗಳು ಶಾಖೆಯಲ್ಲಿ ಹೇಳಿಕೊಟ್ಟಿದ್ದೋ? ಜಗನ್ನಾಥ ಭವನದ ಪಾಠವೋ? : ಕಾಂಗ್ರೆಸ್‌ ಹೇಳಿದ್ದೇನು.?

ಜನಪ್ರತಿನಿಧಿ (ಬೆಂಗಳೂರು) : ಕಾನೂನು ಪಾಲನೆಯ ತಮ್ಮ ಕರ್ತವ್ಯ ಮಾಡುವ ಅಧಿಕಾರಿಗಳಿಗೆ ಬಿಜೆಪಿಯ ಶಾಸಕ ಹರೀಶ್ ಪೂಂಜಾ ಪ್ರಾಯೋಗಿಸಿದ ಅಶ್ಲೀಲ ಬೈಗುಳಗಳು ಹೀಗಿವೆ ಎಂದು ಹರೀಶ್‌ ಪೂಂಜಾ ಮಾತಾಡಿರುವ ಒಂದು ವೀಡಿಯೋ ತುಣುಕನ್ನು ಹಂಚಿಕೊಳ್ಳುವುದರೊಂದಿಗೆ ಬಿಜೆಪಿಯನ್ನು ಟೀಕಿಸಿದೆ.

ತಮ್ಮ ಅಧಿಕೃತ ʼಎಕ್ಸ್‌ʼ ಖಾತೆಯಲ್ಲಿ ಬಿಜೆಪಿ ಹಾಗೂ ಹರೀಶ್‌ ಪೂಂಜಾ ಅವರನ್ನು ಟೀಕಿಸಿದ ಕಾಂಗ್ರೆಸ್‌, ಸಭ್ಯ ಸಮಾಜ ಕೇಳಿಸಿಕೊಳ್ಳಲು ನಾಚಿಕೆಪಡುವ ಇಂತಹ ಅನಾಗರಿಕ ಪದಗಳು ಶಾಖೆಯಲ್ಲಿ ಹೇಳಿಕೊಟ್ಟಿದ್ದೋ? ಜಗನ್ನಾಥ ಭವನದ ಪಾಠವೋ? ಪ್ರಶ್ನಿಸಿದೆ.

ಸಾರ್ವಜನಿಕ ಸಭ್ಯತೆಯ ಬಗ್ಗೆ ಅರಿಯದ ರಾಜ್ಯ ಬಿಜೆಪಿ ಪಕ್ಷದವರ ನೈಜ ಸಂಸ್ಕೃತಿ, ಪರಂಪರೆ ಇದು. ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಲು ಬಿಡದೆ ದೌರ್ಜನ್ಯ ಎಸಗುವ ಬಿಜೆಪಿ ನಾಯಕರು ಕಾನೂನು ಸುವ್ಯವಸ್ಥೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ನೈತಿಕತೆ ಇಲ್ಲ. ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನಾಗಿ ಆರ್.‌ ಅಶೋಕ್ ಅವರು ತಮ್ಮ ಶಾಸಕನ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ ಹೇಳಬೇಕು ಎಂದು ಕಾಂಗ್ರೆಸ್‌ ಒತ್ತಾಯ ಮಾಡಿದೆ.

https://x.com/INCKarnataka/status/1792814264702370282?t=hKC8PlcBuP1pq0jqdYVh_A&s=08

ಇನ್ನು, ಪೊಲೀಸರಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಕಲ್ಲು ಕ್ವಾರಿ ಹಾಗೂ ಸ್ಪೋಟ ಚಟುವಟಿಕೆ ಕೇಸ್ ನಲ್ಲಿ ರೌಡಿ ಶೀಟರ್ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿದ ವೇಳೆ ಠಾಣೆಗೆ ಬಂದ ಶಾಸಕರು, ತಮ್ಮ ಪಕ್ಷದ ಕಾರ್ಯಕರ್ತನಾದ ಶಶಿರಾಜ್ ಶೆಟ್ಟಿಯನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಅವಾಚ್ಯವಾಗಿ ಬೈದು ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಐಪಿಸಿ ಕಲಂ 353,504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆ ಕಳಂಜೆದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ ವೇಳೆ ಅದನ್ನು ತಡೆದ ಘಟನೆ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!