Saturday, October 12, 2024

ಮೇ.23: ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವರ ಶ್ರೀಮನ್ಮಹಾರಥೋತ್ಸವ

ಕಿರಿಮಂಜೇಶ್ವರ: ಕಿರಿಮಂಜೇಶ್ವರದ ಶ್ರೀ ಅಗಸ್ತ್ಯೇಶ್ವರ, ಶ್ರೀ ಮಹಾಗಣಪತಿ, ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕ ಶ್ರೀಮನ್ಮಹಾರಥೋತ್ಸವ ಮೇ 23 ಗುರುವಾರ ನಡೆಯಲಿದೆ.

ಶ್ರೀಮನ್ಮಹಾ ರಥೋತ್ಸವದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಮೇ 19ರಿಂದ ಆರಂಭಗೊಂಡು ಮೇ 25ರ ತನಕ ನಡೆಯಲಿದೆ.
ಮೇ 19ರಂದು ಧ್ವಜಾರೋಹಣ, ಬಲಿ, ಸಂಜೆ 5.30ಕ್ಕೆ ವಸಂತೋತ್ಸವ, ಸಂಜೆ 6.30ಕ್ಕೆ ಪುರಮೆರವಣಿಗೆ ಕಟ್ಟೆ ಉತ್ಸವ, ರಥಬೀದಿ ಕಟ್ಟೆಯಲ್ಲಿ ವಸಂತೋತ್ಸವ, ರಾತ್ರಿ 8ಕ್ಕೆ ಕೊಡೇರಿ ಜೋಗಿಮನೆ ಕಟ್ಟೆಯಲ್ಲಿ ವಸಂತೋತ್ಸವ ನಡೆಯಲಿದೆ.

ಮೇ 20ರಂದು ಪೂರ್ವಾಹ್ನ ಧಾರ್ಮಿಕ ಕಾರ್ಯಕ್ರಮಗಳು, ರುದ್ರಾಭಿಷೇಕ, ಕಲಶಾಭೀಷೇಕ, ಮಧ್ಯಾಹ್ನ 12.30ಕ್ಕೆ ನಿತ್ಯಬಲಿ, ಮಂಗಳಾರತಿ, ಸಂಜೆ 6ಕ್ಕೆ ದೇವರ ಸನ್ನಿಧಿಯಲ್ಲಿ ವಸಂತೋತ್ಸವ, ಪುರಮೆರವಣಿಗೆ ನಡೆಯಲಿದೆ.

ಮೇ 21ರಂದು ಪೂರ್ವಾಹ್ನ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ ಶ್ರೀ ದೇವರ ಸನ್ನಿಧಿಯಲ್ಲಿ ವಸಂತೋತ್ಸವ, ಪುರಮೆರವಣಿಗೆ, ಕಟ್ಟೆ ಉತ್ಸವ ನಡೆಯಲಿದೆ.

ಮೇ 22ರಂದು ಪೂರ್ವಾಹ್ನ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ 6ಕ್ಕೆ ಕೆರೆಕಟ್ಟೆ ಹನುಮಂತ ದೇವಸ್ಥಾನದಲ್ಲಿ ವಸಂತೋತ್ಸವ, ಸಂಜೆ 7ಕ್ಕೆ ದೇವರ ಸನ್ನಿಧಿಯಲ್ಲಿ ವಸಂತೋತ್ಸವ, ಹಿರೇರಂಗ ಪೂಜೆ, ಪುಷ್ಪ ರಥೋತ್ಸವ ನಡೆಯಲಿದೆ.
ಮೇ 23 ಬುದ್ಧ ಪೂರ್ಣೆಮಾ, ಪೂರ್ವಾಹ್ನ ನಿತ್ಯಬಲಿ, ಅಧಿವಾಸ ಹೋಮ, ರಥ ಶುದ್ಧಿ, ರಥ ಬಲಿ ಪೂರ್ವಾಹ್ನ 10ಕ್ಕೆ ರಥಾರೋಹಣ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಶ್ರೀಮನ್ಮಹಾರಥೋತ್ಸವ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಯಕ್ಷಗಾನ ನಾಟ್ಯ ವೈಭವ ನಡೆಯಲಿದೆ.

ಮೇ 24 ಶುಕ್ರವಾರ ಪ್ರಭೋಧೋತ್ಸವ ವಸಂತೋತ್ಸವ, ರಾತ್ರಿ 8ಕ್ಕೆ ಚೂರ್ಣೋತ್ಸವ (ಓಕುಳಿ) ಮೃಗಯಾವಿಹಾರ, ಅವಭೃತ ಸ್ನಾನ, ವರುಣ ಹೋಮ, ಪೂರ್ಣಾಹುತಿ, ಧ್ವಜಾವರೋಹಣ ನಡೆಯಲಿದೆ. ಮೇ 25ರಂದು ಮಧ್ಯಾಹ್ನ 12ಕ್ಕೆ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಮೂಡುಗಣಪತಿ ಸೇವೆ, ಸಂಜೆ ಹಿರೇ ರಂಗಪೂಜೆ, ಪುಷ್ಪ ರಥೋತ್ಸವ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎನ್.ವಿ.ಪ್ರಕಾಶ್ ಐತಾಳ್, ಸಮಿತಿ ಸದಸ್ಯರಾದ ರಾಮಕೃಷ್ಣ ಭಟ್, ಗೋಪಾಲ ಶೆಟ್ಟಿ ಹಳಗೇರಿ, ವಿಜಯ ಪೂಜಾರಿ ಕೊಡೇರಿ, ಲಕ್ಷ್ಮೀ ಮೊಗವೀರ ಹೊಸಹಿತ್ಲು, ಸರಸ್ವತಿ ನಾಯರಿ ಕಿರಿಮಂಜೇಶ್ವರ, ಕೆ.ಮಂಜುನಾಥ ಅರೆಹೊಳೆ ಬೈಪಾಸ್, ಲಕ್ಷ್ಮಣ ದೇವಾಡಿಗ ಆಕಳಬೈಲು, ಮಂಜುನಾಥ ಪಿ.ಗಂಗೆಬೈಲು ಹಾಗೂ ತಂತ್ರಿಗಳು, ಅರ್ಚಕವೃಂದ, ಉಪಾದಿವಂತರು, ಸಿಬ್ಬಂದಿವರ್ಗ, ವಾದ್ಯವೃಂದ ಹಾಗೂ ಊರ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!