Tuesday, October 8, 2024

ಶಿರೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು


ಬೈಂದೂರು: ಶಿರೂರು ಗ್ರಾಮದ ಹಡವಿನಕೋಣೆ ನಿವಾಸಿ, ಮೀನುಗಾರ ಮನೆಯ ಹತ್ತಿರ ತುಂಡಾಗಿ ಬಿದ್ದ ವಿದ್ಯುತ್ ತಂತಿ ಗೊತ್ತಾಗದೆ ಸ್ಪರ್ಶಿಸಿ ಸಾವನ್ನಪ್ಪಿದಘಟನೆ ರವಿವಾರ ನಡೆದಿದೆ. ಕುರುಡಿ ಇರ್ಷಾದ್ (೫೨ ವರ್ಷ) ಮೃತ ದುರ್ಧೈವಿ.

ಇರ್ಷಾದ್ ಶಿರೂರು ಗ್ರಾಮದ ಹಡವಿನ ಕೋಣೆ ಎಂಬಲ್ಲಿ ವಾಸ ಮಾಡಿಕೊಂಡಿದ್ದು ಅವರ ತಂದೆ ಕುರುಡಿ ಇರ್ಷಾದ್ ರವರು ಮೀನುಗಾರಿಕೆ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ ೧೯-೦೫-೨೦೨೪ ರಂದು ಬೆಳಿಗ್ಗೆ ೬:೩೦ ಗಂಟೆಗೆ ಕುರುಡಿ ಇರ್ಷಾದ್ ರವರು ಅವರ ಮನೆಯಲ್ಲಿ ಸತ್ತು ಬಿದ್ದಿದ್ದ ಹೆಗ್ಗಣವನ್ನು ಬಿಸಾಡಲು ಮನೆಯ ಕಂಪೌಡ್ ಹೊರಗಡೆ ಹೋಗುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಅವರನ್ನು ಕೋಲಿನಿಂದ ಬದಿಗೆ ಸರಿಸಿ ಉಪಚರಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ೧೦೮ ಅಂಬುಲೆನ್ಸ್ ನಲ್ಲಿ ಬೈಂದೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋದಾಗ ಕುರುಡಿ ಇರ್ಷಾದ್ ರವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇವರ ಮನೆಯ ಮುಂಭಾಗ ಮೆಸ್ಕಾಂ ಕಂಪೆನಿಯವರು ಅಳವಡಿಸಿದ ವಿದ್ಯುತ್ ತಂತಿಗಳು ತುಂಬಾ ಹಳೆಯದಾಗಿದ್ದು ಮನೆಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಟ್ರಾನ್ಸ್ ಫಾರ್ಮರ್ ಕಂಬದಿಂದ ಇನ್ನೊಂದು ಕಂಬಕ್ಕೆ ಹಾದು ಹೋದ ಎಲ್.ಟಿ ವಿದ್ಯುತ್ ಕೇಬಲ್ ಹಳೇಯದಾಗಿದ್ದು ಅದನ್ನು ಬದಲಾಯಿಸದ ಕಾರಣ ವಿದ್ಯುತ್ ಕೇಬಲ್ ತುಂಡಾಗಿ ಬಿದ್ದು ಬಿದ್ದಿರುವ ವಿದ್ಯುತ್ ಕೇಬಲ್ ಕುರುಡಿ ಇರ್ಷಾದ್ ರವರಿಗೆ ತಗುಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದು ಈ ಘಟನೆಗೆ ಮೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿಯವರ ನಿರ್ಲಕ್ಷತನವೇ ಕಾರಣವಾಗಿದೆ ಎಂದು ಬೈಂದೂರು ಠಾಣೆಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!