spot_img
Saturday, December 7, 2024
spot_img

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಕಂಗೊಳಿಸಲಿರುವ ʼನಂದಿನಿʼ : ಸಿಎಂ, ಡಿಸಿಎಂ ಸಂತಸ

ಜನಪ್ರತಿನಿಧಿ (ಬೆಂಗಳೂರು) : ಜೂನ್‌ ನಲ್ಲಿ ನಡೆಯಲಿರುವ ಟಿ-ಟ್ವೆಂಟಿ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಕನ್ನಡಿಗರ ಹೆಮ್ಮೆಯ ನಂದಿನಿ ಬ್ರ್ಯಾಂಡ್‌ ಲಾಂಛನ ಐರ್ಲೆಂಡ್‌ ಹಾಗೂ ಸ್ಕಾಟ್ಲೆಂಡ್‌ ಆಟಗಾರರ ಜೆರ್ಸಿಯ ಮೇಲೆ ರಾರಾಜಿಸಲಿದೆ. ಜೆರ್ಸಿ ಬಿಡುಗಡೆ ಆಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಸಂತಸ ವ್ಯಕ್ತಪಡಿಸಿದ್ದಾರೆ.

ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ, ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ T20 ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ.

ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ ವಿಶ್ವಕ್ಕೆ ಪರಿಚಯಿಸುವ ಸಂಕಲ್ಪ ನಮ್ಮದು. ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ.  ಈ ಬಾರಿ ವಿಶ್ವಕಪ್‌ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು, ತಮ್ಮ ಎಕ್ಸ್‌ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಡಿಕೆಶಿ, ಇದು ರಾಜ್ಯದ ಜನತೆ ಹೆಮ್ಮೆ ಪಡುವ ಸುದ್ದಿ! ಕೋಟ್ಯಂತರ ಜನರ ನಂಬಿಕೆಯ ʼಬ್ರ್ಯಾಂಡ್‌ʼ ಆಗಿರುವ ನಮ್ಮ ನಂದಿನಿ ಲೋಗೋ T20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಕ್ರಿಕೆಟ್ ತಂಡದ ಜರ್ಸಿ ಮೇಲೆ ರಾರಾಜಿಸಲಿದೆ. ಕನ್ನಡಿಗರು ಹಾಗೂ ಕರ್ನಾಟಕದ ರೈತರು ಕಟ್ಟಿ ಬೆಳೆಸಿರುವ ನಂದಿನಿ ಬ್ರ್ಯಾಂಡ್‌ ಹೊಸ ಎತ್ತರ ತಲುಪುತ್ತಿರುವುದು ಖುಷಿ ಹಾಗೂ ಹೆಮ್ಮೆಯ ಸಂಗತಿ.

ಗೋವಿನಿಂದ ಗ್ರಾಹಕರವರೆಗೂ ಗುಣಮಟ್ಟದ ಉತ್ಕೃಷ್ಟತೆ ಕಾಪಾಡುತ್ತಾ ಬಂದಿರುವ ನಮ್ಮ ನಂದಿನಿಗೆ ಹೇಳೋಣ ಚೀರ್ಸ್‌! ಎಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!