spot_img
Wednesday, January 22, 2025
spot_img

ಪೂರ್ವ ಪ್ರಾಥಮಿಕದಿಂದ ಪಿಯುಸಿ ತನಕ ಗುಣಮಟ್ಟದ ಶಿಕ್ಷಣ: ಶೈಕ್ಷಣಿಕ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದ ಶಂಕರನಾರಾಯಣದ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಮತ್ತು ಪಿಯು ಕಾಲೇಜು

kundapura: (ಜನಪ್ರತಿನಿಧಿ ವಾರ್ತೆ) ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ರಾಜ್ಯದಲ್ಲಿಯೇ ಗಮನ ಸಳೆದಿದೆ. ಇಲ್ಲಿನ ಶೈಕ್ಷಣಿಕ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ತಮ್ಮದೆಯಾದ ಕೊಡುಗೆ ನೀಡುತ್ತಿವೆ. ಅದರಲ್ಲಿ ಕುಂದಾಪುರ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿ ಗುರುತಿಸಿ ಕೊಂಡಿರುವುದು ಶಂಕರನಾರಾಯಣದ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಹಾಗೂ ಮದರ್ ತೆರೇಸಾ ಪದವಿ ಪೂರ್ವ ಕಾಲೇಜು.

ಶಂಕರನಾರಾಯಣದಂತಹ ಗ್ರಾಮಾಂತರ ಪ್ರದೇಶದಲ್ಲಿ ಕಳೆದ 26 ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಶಿಕ್ಷಣ ಸಂಸ್ಥೆ ಇವತ್ತು ಬೃಹತ್ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದೆ. 25 ವರ್ಷಗಳ ಹಿಂದೆ ಶಂಕರನಾರಾಯಣ ಪ್ರದೇಶ ತೀರಾ ಗ್ರಾಮಾಂತರ ಪ್ರದೇಶಗಳನ್ನು ಒಳಗೊಂಡಿತು. ಆ ಸಂದರ್ಭದಲ್ಲಿ ಮದರ್ ತೆರೇಸಾ ಶಿಕ್ಷಣ ಸಂಸ್ಥೆ ಆರಂಭವಾಗುವ ಮೂಲಕ ಹೊಸ ಮನ್ವಂತರವೊಂದಕ್ಕೆ ಕಾರಣವಾಗಿತ್ತು. ಗುಣಮಟ್ಟದ ಶಿಕ್ಷಣ, ಚಟುವಟಿಕೆ ಆಧಾರಿತ ಶಿಕ್ಷಣ, ಕ್ರೀಡೆ, ಪಠ್ಯೇತರ ಚಟುವಟಿಕೆ, ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಕಟ್ಟಿಕೊಡುತ್ತಾ ಪಿಯುಸಿಯ ತನಕ ಒಂದೇ ಸೂರಿನಡಿ ಉತ್ಕೃಷ್ಠ ಮಟ್ಟದ ಶಿಕ್ಷಣ ನೀಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು.

ಶಂಕರನಾರಾಯಣದ ಸುತ್ತಮುತ್ತಲಿನ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಕಡಿಮೆ ವಾರ್ಷಿಕ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುವ ಮದರ್ ತೆರೇಸಾ ಶಿಕ್ಷಣ ಸಂಸ್ಥೆ ಈ ಭಾಗದ ಮನೆಮಾತಾಗಿದೆ. ಇತ್ತೀಚೆಗಷ್ಟೇ ಸಾರ್ಥಕ ರಜತ ಮಹೋತ್ಸವವನ್ನು ಆಚರಿಸಿಕೊಂಡಿರುವ ಸಂಸ್ಥೆ ಪ್ರಾಕ್ತನ ವಿದ್ಯಾರ್ಥಿಗಳ ಸಾಧನೆ, ಅವರ ಜೀವನ ಮಟ್ಟವನ್ನು ಕಂಡು ಸಾರ್ಥಕತೆ ಕಂಡಿದೆ.

ಶೈಕ್ಷಣಿಕ ಸಂಸ್ಥೆಗಳನ್ನು ಮುನ್ನೆಡೆಸುವುದು ಸರಳವಲ್ಲ, ಅದೊಂದು ಜವಬ್ದಾರಿಯ ತಪಸ್ಸು. ಮಹತ್ತರವಾದ ಜವಬ್ದಾರಿ ಹೊತ್ತು ಇಲ್ಲಿ ನಮಗಾಗಿ ಏನು ಇಲ್ಲ ಬಡಬಗ್ಗರಿಗಾಗಿ ಎಂಬ ಪರಹಿತಕಾಂಕ್ಷೆಯಿಂದ ಶಂಕರ ನಾರಾಯಣದಂತ ತೀರಾ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಪ್ರಾರಂಭಿಸಿ ಬಡ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ನೀಡುವ ಮಹೋನ್ನತ ಉದ್ದೇಶ ಹೊತ್ತವರು ಕುಮಾರಿ ಶಮಿತಾ ರಾವ್ ಹಾಗೂ ಕುಮಾರಿ ರೆನಿಟೋ ಲೋಬೊ. ಶಿಕ್ಷಣ ಕ್ಷೇತ್ರದ ತಮ್ಮ ಅವಿರತ ಸಾಧನೆಗಾಗಿ ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಅದಕ್ಕೆ ನ್ಯಾಯ ಒದಗಿಸುವಂತೆ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಯಾವುದೇ ಡೊನೇಷನ್ ಇಲ್ಲದೆ ಕಡಿಮೆ ವಾರ್ಷಿಕ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಕಳೆದ ಅನೇಕ ವರ್ಷಗಳಿಂದ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಗಳಲ್ಲಿ ನೂರಕ್ಕೆ ನೂರು ಫಲಿತಾಂಶವನ್ನು ದಾಖಲಿಸುವುದು ಮಾತ್ರವಲ್ಲದೆ ರಾಜ್ಯಮಟ್ಟದಲ್ಲಿ rank ಪಡೆಯುವ ಮೂಲಕ ಸಂಸ್ಥೆಯ ಹೆಸರನ್ನು ರಾಜ್ಯದೆಲ್ಲೆಡೆ ಗುರುತಿಸಿಕೊಂಡಿದೆ.

ಎಸ್.ಎಸ್.ಎಲ್.ಸಿ ಯಲ್ಲಿ ಗುಣಮಟ್ಟದ ಶಿಕ್ಷಣದಲ್ಲಿ ಇಡೀ ಉಡುಪಿ ಜಿಲ್ಲೆಯಲ್ಲೇ ಅತಿ ಹೆಚ್ಚು ಫಲಿತಾಂಶ ದಾಖಲಿಸುವ ಮೂಲಕ ಅಗ್ರಸ್ಥಾನವನ್ನು (ಮೊದಲ ಸ್ಥಾನ) ತನ್ನದಾಗಿಸಿಕೊಂಡಿದೆ.

ಪ್ರೌಢ ಶಾಲಾ ಹಾಗೂ ಪದವಿ ಪೂರ್ವ ವಿಭಾಗದಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಾ, ಅದರೊಂದಿಗೆ ಇಂದಿನ ಕಾಲಮಾನಕ್ಕೆ ಅತ್ಯಗತ್ಯವಾದ ಜೆ‌ಇ‌ಇ ಮೈನ್ಸ್, ಸಿ‌ಇಟಿ, ನೀಟ್, ತರಬೇತಿ ನೀಡಲಾಗುತ್ತಿದೆ. ಈ ವರ್ಷದಿಂದ ಜೆ.ಇ.ಇ ಮೈನ್ಸ್ ಅನ್ನು ವಿಶೇಷವಾಗಿ ಪರಿಚಯಿಸಲಾಗಿದೆ. ಎಳೆವೆಯಲ್ಲೇ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಗೊಳಿಸುವ ನಿಟ್ಟಿನಲ್ಲಿ ಒಂದನೇ ತರಗತಿಯಿಂದಲೇ ಒಲಿಂಪಿಯಾಡ್ ಪರೀಕ್ಷೆಯ ತರಬೇತಿಯನ್ನು ವಿಶೇಷವಾಗಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.

ಕೇವಲ ಪಠ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರದೆ ಪಠ್ಯೇತರವಾಗಿ ಭಿನ್ನ ವಿಭಿನ್ನ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಮಾಡಲು ಅಬಾಕಸ್, ವೇದಿಕ್ ಮಾಥ್ಸ್, ಯೋಗ, ಒಲಂಪಿಯಾಡ್, ಸ್ಕೌಟ್ ಮತ್ತು ಗೈಡ್ಸ್ , ಕರಾಟೆ ಮತ್ತು ಇಂಗ್ಲೀಷ್ ವಿಷಯದಲ್ಲಿ ವಿದ್ಯಾರ್ಥಿಗಳನ್ನು ಮತ್ತಷ್ಟು ಪರಿಣಿತರನ್ನಾಗಿಸಲು ಅತ್ಯಾಧುನಿಕ ಇಂಗ್ಲೀಷ್ ಸ್ಪೋಕನ್ ಲ್ಯಾಬ್ ಹೀಗೆ ಹತ್ತು ಹಲವಾರು ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.

ಮಗುವಿನಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಉತ್ತೇಜನ ನೀಡಲಾಗುತ್ತಿದೆ. ಕ್ರೀಡೆಯಲ್ಲಿ ಮಗು ಯಾವ ವಿಷಯದಲ್ಲಿ ಆಸಕ್ತಿ ಹಾಗೂ ಸಾಮರ್ಥ್ಯ ಹೊಂದಿದೆ ಎನ್ನುವ ಆಧಾರದಲ್ಲಿ ನುರಿತ ಕೋಚ್‌ಗಳ ಮೂಲಕ ತರಬೇತಿ ನೀಡಿ ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸಲಾಗುತ್ತದೆ. ಕ್ರೀಡಾ ಕ್ಷೇತ್ರದಲ್ಲಿಯೂ ಕೂಡಾ ಈ ಸಂಸ್ಥೆಯ ವಿದ್ಯಾರ್ಥಿಗಳು ಮಿಂಚುತ್ತಿದ್ದಾರೆ.

ಸಾಂಸ್ಕೃತಿಕವಾಗಿ ಸಂಗೀತ, ನೃತ್ಯ, ಚಿತ್ರಕಲೆ ಇತ್ಯಾದಿ ವಿಷಯಗಳಲ್ಲಿ ಸೂಕ್ತ ಪ್ರೋತ್ಸಾಹ ನೀಡಲಾಗುತ್ತದೆ. ಪ್ರತಿ ವರ್ಷ ವಾರ್ಷಿಕೋತ್ಸವದ ಭವ್ಯ ವೇದಿಕೆಯಲ್ಲಿ ಮಕ್ಕಳ ಸಾಂಸ್ಕೃತಿಕ ವೈಭವ ನೆರವೇರುತ್ತದೆ. ಮಕ್ಕಳಲ್ಲಿನ ಸಭಾಕಂಪನ ದೂರ ಮಾಡುವ ನಿಟ್ಟಿನಲ್ಲಿ ಭಾಷಣ ಕಲೆ, ಪ್ರಬಂಧ ಮಂಡನೆ, ವೇದಿಕೆಯಲ್ಲಿ ನಿರ್ಭಿತಿಯಿಂದ ಕಾರ್ಯಕ್ರಮ ನೀಡಬಹುದಾದ ಕಲೆಯನ್ನು ಕಲಿಸಲಾಗುತ್ತಿದೆ. ಒಟ್ಟಾರೆಯಾಗಿ ತಮ್ಮ ಸಂಸ್ಥೆಗೆ ದಾಖಲಾದ ಮಗು ಸರ್ವಾಂಗೀಣವಾಗಿ ವಿಕಸನ ಹೊಂದಬೇಕು ಎನ್ನುವುದು ಸಂಸ್ಥೆಯ ದ್ಯೇಯವಾಗಿದೆ.

ಆಂಗ್ಲಮಾಧ್ಯಮ ಶಿಕ್ಷಣ ಕ್ರಮದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದ್ದು ನುರಿತ ಅಧ್ಯಾಪಕ ವೃಂದ, ವಿಷಯ ತಜ್ಞ ಉಪನ್ಯಾಸಕ ವರ್ಗವನ್ನು ಸಂಸ್ಥೆ ಹೊಂದಿದೆ. ಶಂಕರನಾರಾಯಣ, ಸಿದ್ಧಾಪುರ, ಅಂಪಾರು, ಹಾಲಾಡಿ, ಗೋಳಿಯಂಗಡಿ, ಬಿದ್ಕಲ್‌ಕಟ್ಟೆ, ಅಮಾಸೆಬೈಲು, ಆಜ್ರಿ ಮೊದಲಾದ ಭಾಗದಿಂದ ಮಾತ್ರವಲ್ಲ ಕುಂದಾಪುರ, ಬೈಂದೂರು, ಬ್ರಹ್ಮಾವರ, ಹೆಬ್ರಿ ತಾಲೂಕಿನ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ.

ಎಲ್.ಕೆ.ಜಿ ಯಿಂದ ಪಿ.ಯು.ಸಿ ವರೆಗೆ ಎಲ್ಲ ವಿಭಾಗಗಳಲ್ಲಿ ತರಬೇತಿ ಹೊಂದಿದ ನುರಿತ ಅನುಭವಿ ಶಿಕ್ಷಕ ವೃಂದದಿಂದ ಉತ್ತಮ ಶಿಕ್ಷಣವನ್ನು ನೀಡುತ್ತಿದ್ದು, ಅದರೊಂದಿಗೆ ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಜೀವನವನ್ನು ರೂಪಿಸಿಕೊಳ್ಳಲು ಬದುಕಿನ ಶಿಕ್ಷಣವನ್ನು ಕಲ್ಪಿಸಿ ಕೊಡುವ ಕೈಂಕರ್ಯದಲ್ಲಿ ಶಿಕ್ಷಣ ಸಂಸ್ಥೆ ತನ್ನನ್ನು ತೊಡಗಿಸಿಕೊಂಡಿದೆ.

ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ನಿರಂತರ ಸಾಧನೆ:
ಮದರ್ ತೆರೆಸಾ ಶಿಕ್ಷಣ ಸಂಸ್ಥೆಯು ಶೈಕ್ಷಣಿಕವಾಗಿಯೂ ಉತ್ತಮ ಸಾಧನೆಯನ್ನು ಮಾಡಿದ್ದು ಸತತವಾಗಿ ಅನೇಕ ವರ್ಷಗಳಿಂದ ೧೦ನೇ ತರಗತಿ ಮತ್ತು ಪದವಿ ಪೂರ್ವ ವಿಭಾಗಗಳಲ್ಲಿ ದಾಖಲೆಯ ಫಲಿತಾಂಶವನ್ನು ಪಡೆಯುತ್ತಿದೆ.
2022-23ನೇ ಸಾಲಿನ ಪದವಿ ಪೂರ್ವ ವಿಭಾಗದಲ್ಲಿ ರಾಜ್ಯಮಟ್ಟದ 9ನೇ ರ್‍ಯಾಂಕ್ ಹಾಗೂ 2023-24ನೇ ಸಾಲಿನಲ್ಲಿ ರಾಜ್ಯಮಟ್ಟದ 7ನೇ ರ್‍ಯಾಂಕ್ ಅನ್ನು ಪಡೆದಿರುವುದು ಪದವಿಪೂರ್ವ ವಿಭಾಗದ ಹೆಗ್ಗಳಿಕೆಯಾಗಿದೆ.

2020-21ನೇ ಸಾಲಿನ 10ನೇ ತರಗತಿಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸುವುದರೊಂದಿಗೆ ಓರ್ವ ವಿದ್ಯಾರ್ಥಿನಿ ರಾಜ್ಯಕ್ಕೆ ಮೊದಲ ಸ್ಥಾನವನ್ನು ಹಾಗೂ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದಿದೆ. 2021-22ನೇ ಸಾಲಿನಲ್ಲಿ 624 ಅಂಕಗಳೊಂದಿಗೆ ಇರುವ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. 2022-23ನೇ ಸಾಲಿನಲ್ಲಿ ರಾಜ್ಯಮಟ್ಟದ ಆರನೇ ರ್‍ಯಾಂಕನ್ನು ಹತ್ತನೇ ತರಗತಿಯಲ್ಲಿ ತನ್ನದಾಗಿಸಿಕೊಂಡಿದೆ. 2023-24ನೇ ಸಾಲಿನಲ್ಲಿ 615  ಅಂಕಗಳನ್ನು ಗಳಿಸುವ ಮೂಲಕ ಪ್ರಣಮಿ  ರಾಜ್ಯಕ್ಕೆ ಹತ್ತನೇ RANK  ಪಡೆದಿರುತ್ತಾರೆ.

ಶಾಲಾ ವಾಹನ ವ್ಯವಸ್ಥೆ:
ಗ್ರಾಮಾಂತರ ಪ್ರದೇಶದ ಮೂಲೆ ಮೂಲೆಯ ವಿದ್ಯಾರ್ಥಿಗಳಿಗೂ ಸುರಕ್ಷಿತವಾದ ಶಾಲಾ ವಾಹನದ ಸೌಲಭ್ಯವಿದ್ದು ಈ ವರ್ಷ ವಿಶೇಷವಾಗಿ ಹೊಸ ಹೊಸ ಮಾರ್ಗಗಳಿಗೆ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ದೊಂಬದಗೊಳ್ಳಿ, ಶಾನಾಡಿ, ಕೆದೂರು ಉಳ್ತುರು ಕ್ರಾಸ್, ಹೊನ್ನಾರಿ ಕ್ರಾಸ್, ಬಡಾ ಬೆಟ್ಟು, ಬೇಳೂರು, ಮೊಗೆಬೆಟ್ಟು, ನೂಜಿ, ಹೆಸ್ಕುತ್ತೂರು, ಮೊಳಹಳ್ಳಿ, ಹುಣಸೆಮಕ್ಕಿ,ಜಪ್ತಿ, ಕಾಳಾವರ ಕೊಟೇಶ್ವರ, ಕಾಸಾಡಿ, ಹೈಕಾಡಿ, ಗೋಳಿಯಂಗಡಿ, ಹೆಂಗವಳ್ಳಿ ಕ್ರಾಸ್, ಬೆಳ್ವೆ ಗುಮ್ಮಹೊಲ, ಆರ್ಡಿ, ಬಿ. ಎಚ್, ಕಂಡ್ಲೂರು, ನೆಲ್ಲಿಕಟ್ಟೆ, ಮುಳ್ಳುಗುಡ್ಡೆ, ಅಂಪಾರು ಇತ್ಯಾದಿ ಭಾಗಗಳಿಂದ ಸುರಕ್ಷಿತವಾಗಿ ವಿದ್ಯಾರ್ಥಿಗಳನ್ನು ಕರೆತಂದು ಮರಳಿ ಮನೆ ತಲುಪಿಸಲು ಆಧ್ಯತೆ ನೀಡಲಾಗಿದೆ.

ಪಿಯುಸಿಯಲ್ಲಿ ಹೋಂ ಸೈನ್ಸ್:
ಪಿಯುನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿದ್ದು, ವಿಜ್ಞಾನ ಸಂಯೋಜನೆಯಲ್ಲಿ ಪಿಸಿ‌ಎಂಬಿ, ಪಿಸಿ‌ಎಂಸಿ, ಪಿಸಿ‌ಎಂಇ, ಹೋಂ ಸೈನ್ಸ್, ಬಯೋಲಜಿ, ಕಂಪ್ಯೂಟರ್ ಸೈನ್ಸ್ ಅವಕಾಶಗಳಿವೆ.
ವಿಜ್ಞಾನ ವಿಭಾಗದಲ್ಲಿ ವಿಶೇಷವಾಗಿ ಹೋಂ ಸೈನ್ಸ್ ವಿಭಾಗವಿದ್ದು ಇದರ ವಿಶೇಷತೆ ಎಂದರೆ ಹತ್ತನೇ ತರಗತಿಯಲ್ಲಿ ಗಣಿತದಲ್ಲಿ ಕಡಿಮೆ ಅಂಕ ಪಡೆದಿರುವ ಮತ್ತು ಗಣಿತ ವಿಷಯವನ್ನು ಕಬ್ಬಿಣದ ಕಡಲೆ ಎಂದು ಭಾವಿಸಿರುವ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗವನ್ನು ಗಣಿತವನ್ನು ಓದದೆ ಆಯ್ಕೆ ಮಾಡಿಕೊಳ್ಳಲು ಇರುವ ಅತ್ಯುತ್ತಮ ಅವಕಾಶ. ಹೋಂ ಸೈನ್ಸ್ ಮೂಲಕ ವಿದ್ಯಾರ್ಥಿಗಳು ಸುಲಭವಾಗಿ ಮೆಡಿಕಲ್, ಪ್ಯಾರ ಮೆಡಿಕಲ್ ಹೋಮಿಯೋಪತಿ, ನರ್ಸಿಂಗ್, ಫ್ಯಾಶನ್ ಡಿಸೈನಿಂಗ್ ನಂತಹ ಉತ್ತಮ ಕೋರ್ಸ್ ಗಳನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದು.

ವಾಣಿಜ್ಯ ವಿಭಾಗದಲ್ಲಿ ಸ್ಟಾಟಿಸ್ಟಿಕ್ಸ್ ಸೇರಿದಂತೆ ವಿವಿಧ ಸಂಯೋಜನೆಗಳು ಇವೆ. ಉತ್ತಮವಾದ ಪ್ರಯೋಗಾಲಯ, ವಿಷಯವಾರು ಅನುಭವ ಹೊಂದಿರುವ ಉಪನ್ಯಾಸಕರ ಬಳಗವನ್ನು ಸಂಸ್ಥೆ ಹೊಂದಿದೆ.

ಪ್ರವೇಶಾತಿ ಆರಂಭ:
ಮದರ್ ತೆರೇಸಾ ಪದವಿ ಪೂರ್ವ ಕಾಲೇಜು ಹಾಗೂ ಮದರ್ ತೆರೇಸಾ ಮೆಮೋರಿಯಲ್ ಶಾಲೆ ೨೦೨೪-೨೫ ನೇ ಸಾಲಿನ ಎಲ್. ಕೆ.ಜಿಯಿಂದ ಪದವಿ ಪೂರ್ವ ವಿಭಾಗದವರೆಗೆ ದಾಖಲಾತಿ ಪ್ರಕ್ರಿಯೆಗಳು ಆರಂಭಗೊಂಡಿದ್ದು ಆಸಕ್ತ ಪೋಷಕರು ಶಾಲಾ ಕಚೇರಿಗೆ ಭೇಟಿ ನೀಡಬಹುದು ಅಥವಾ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಶಾಲಾ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.
ದೂರವಾಣಿ:7259324484

 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!