spot_img
Friday, January 17, 2025
spot_img

ಕಾಂಗ್ರೆಸ್, ಬಿಆರ್‌ಎಸ್‌ಗೆ ‘ಕುಟುಂಬ ಮೊದಲು’ | ಈಗ ಇಂಡಿಯಾ ಮೈತ್ರಿಕೂಟದ ಫ್ಯೂಸ್‌ ಆಫ್‌ ಆಗಿದೆ : ಮೋದಿ ವಾಗ್ದಾಳಿ

ಜನಪ್ರತಿನಿಧಿ (ಹೈದರಾಬಾದ್) : ದೇಶದಲ್ಲಿ ಮೂರನೇ ಹಂತದ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಮೂರನೇ ‘ಫ್ಯೂಸ್’ ಆಫ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು(ಬುಧವಾರ) ವ್ಯಂಗ್ಯವಾಡಿದ್ದಾರೆ.

ವೇಮುಲವಾಡದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದೇಶದಲ್ಲಿ ನಾಲ್ಕು ಹಂತದ ಮತದಾನ ಬಾಕಿ ಉಳಿದಿದ್ದು, ಜನರ ಆಶೀರ್ವಾದದಿಂದ ಬಿಜೆಪಿ ಹಾಗೂ ಎನ್‌ಡಿಎ ಗೆಲುವಿನತ್ತ ಸಾಗುತ್ತಿದೆ. ದೇಶದಲ್ಲಿ ನಡೆದ ಮೂರನೇ ಹಂತದ ಚುನಾವಣೆಯ ಬಳಿಕ, ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟದ ಮೂರನೇ ಫ್ಯೂಸ್ ಆಫ್ ಆಗಿದೆ’ ಎಂದು ಮೋದಿ ವಿರೋಧ ಪಕ್ಷಗಳನ್ನು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಹಾಗೂ ಬಿಆರ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಬಿಜೆಪಿ ‘ರಾಷ್ಟ್ರ ಮೊದಲು’ ತತ್ವವನ್ನು ನಂಬಿದರೆ, ಕಾಂಗ್ರೆಸ್ ಹಾಗೂ ಬಿಆರ್‌ಎಸ್‌ಗೆ ‘ಕುಟುಂಬ ಮೊದಲು’ ಎನ್ನುವುದೇ ತತ್ವವಾಗಿದೆ ಎಂದು ಹೇಳಿದ್ದಾರೆ.

ಬಿಆರ್‌ಎಸ್‌ ಹಾಗೂ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಪರಸ್ಪರ ಟೀಕಿಸಿಕೊಳ್ಳುತ್ತವೆ. ಆದರೆ, ಇದು ಈ ಪಕ್ಷಗಳ ನಡುವಿನ ಸಾಮಾನ್ಯ ಅಂಶವಾಗಿದೆ. ಕಾಂಗ್ರೆಸ್ ಐದು ವರ್ಷಗಳಿಂದ ಅದಾನಿ ಹಾಗೂ ಅಂಬಾನಿ ಹೆಸರನ್ನು ಜಪಿಸುತ್ತಿದೆ. ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಅದನ್ನು ನಿಲ್ಲಿಸಿದೆ ಎಂದು ಆರೋಪಿಸಿದ ಮೋದಿ, ಕಾಂಗ್ರೆಸ್‌ ದೇಶಕ್ಕೆ ಈ ಬಗ್ಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಡಬಲ್ ಆರ್ (ಆರ್‌ಆರ್) ತೆರಿಗೆ ಕುರಿತು ದೆಹಲಿಯವರೆಗೂ ಸಾಕಷ್ಟು ಚರ್ಚೆ ನಡೆಯುತ್ತಿದೆ ಎಂದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!