spot_img
Tuesday, March 31, 2026
spot_img

ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್‌ : ನನ್ನ ಹೆಸರು ಹೇಳದಿದ್ದರೇ ಕುಮಾರಣ್ಣಂಗೆ ಮಾರ್ಕೇಟ್‌ ಇರಲ್ಲ : ಡಿಕೆಶಿ ತಿರುಗೇಟು

ಜನಪ್ರತಿನಿಧಿ (ಚಿಕ್ಕಮಗಳೂರು) : ಪೆನ್‌ಡ್ರೈವ್‌ ಪ್ರಕರಣವನ್ನು ಇಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರ ಮೇಲೆ ನಿರಂತರ ಆರೋಪ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.

ನಗರದ ಹೆಲಿಪ್ಯಾಡ್‌ನಲ್ಲಿ ವರದಿಗಾರರಿಗೆ ಸ್ಪಂದಿಸಿದ ಅವರು, ʼಒಕ್ಕಲಿಗ ನಾಯಕತ್ವಕ್ಕೆ ಪೈಪೋಟಿಯಂತೆ, ಕುಮಾರಣ್ಣನಿಗೆ ನನ್ನ ರಾಜೀನಾಮೆ ಬೇಕಂತೆ, ಕೊಡೋಣ. ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಹೆದರಿಸುವುದು, ಮುಗಿಸುವುದೇ ಅವರ ಕೆಲಸ. ಪಾಯಿಂಟ್‌ ಬೈ ಮಾಹಿತಿ ಇದೆಯಂತೆ. ಮಾಹಿತಿ ಇದ್ದ ಮೇಲೆ ನ್ಯಾಯಾಲಯಕ್ಕೆ ಹೋಗಿ ವಾದ ಮಾಡಲಿ ಎಂದು ಅವರು ಲೇವಡಿ ಮಾಡಿದರು.

ʼಕಥಾ ನಾಯಕ, ನಿರ್ದೇಶಕ, ನಿರ್ಮಾಪಕ ಎಲ್ಲಾ ಕುಮಾರಣ್ಣನೇ ಎಲ್ಲಾ ವಿಷಯ ಅವರಿಗೇ ಗೊತ್ತಿದೆ. ಉಪ್ಪು ತಿಂದವನು ನೀರು ಕುಡಿಯುತ್ತಾರೆ ಎಂದಿದ್ದರು. ಈಗ್ಯಾಕೆ ಉರಿ ಎದ್ದಿದೆ. ರೇವಣ್ಣ ಕುಟುಂಬವೇ ಬೇರೆ, ನನ್ನ ಮತ್ತು ದೇವೇಗೌಡರ ಕುಟುಂಬವೇ ಬೇರೆ ಎಂದಿದ್ದ ಹೇಳಿಕೆಗೆ ಅವರು ಬದ್ಧವಾಗಲಿ. ವಿಧಾನಸಭಭೆಗೆ ಬರಲಿ ಚರ್ಚೆ ಮಾಡೋಣ ಎಂದು ಅವರು ಹೇಳಿದರು.

ಸಂತ್ರಸ್ತರು ಅವರ ಪಕ್ಷದ ಕಾರ್ಕರ್ತರಂತೆ, ಮರ್ಯಾದೆ ಇದ್ದರೆ ಹೋಗಿ ಅವರಿಗೆ ಧೈರ್ಯ ತುಂಬಲಿ. ನನ್ನ ವಿರುದ್ಧ ಮಾತನಾಡದಿದ್ದರೇ ಅವರಿಗೆ ನಿದ್ರೆ ಬರುವುದಿಲ್ಲ. ನನ್ನ ಹೆಸರು ಹೇಳದಿದ್ದರೇ ಕುಮಾರಣ್ಣಂಗೆ ಮಾರ್ಕೇಟ್‌ ಇರಲ್ಲ ಎಂದು ವ್ಯಂಗ್ಯವಾಡಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!