Wednesday, September 11, 2024

ಲೋಕಸಭಾ ಚುನಾವಣೆ : ಸಂವಿಧಾನದ 370ನೇ ವಿಧಿಯು ಭಯೋತ್ಪಾದನೆಗೆ ಮೂಲ : ಕಾಂಗ್ರೆಸ್‌ ವಿರುದ್ಧ ಯೋಗಿ ವಾಗ್ದಾಳಿ

ಜನಪ್ರತಿನಿಧಿ (ಲಖ್ನೌ) : ಸ್ವಾತಂತ್ರ್ಯಾನಂತರ ಗುರಿ ಇಲ್ಲದಂತಾಗಿದ್ದ ಕಾಂಗ್ರೆಸ್‌, ಇದೀಗ ನಾಯಕನಿಲ್ಲದಂತಾಗಿದೆ. ಆ ಪಕ್ಷದ ನಾಯಕರು ದೇಶದ ಸಂಸ್ಕೃತಿ ಮತ್ತು ನಾಗರಿಕತೆಗೆ ಮಸಿ ಬಳಿಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಾಗ್ದಾಳಿ ಮಾಡಿದ್ದಾರೆ.

ವರದಿಗಾರರೊಂದಿಗೆ ಮಾತನಾಡಿದ ಯೋಗಿ, ಕಾಂಗ್ರೆಸ್‌ ನಾಯಕರು ದೇಶದ ಸಂಸ್ಕೃತಿಯನ್ನು ನಿರಂತರವಾಗಿ ದೂಷಿಸುತ್ತಿದ್ದಾರೆ. ಸನಾತನ ಧರ್ಮವನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಕೇಸರಿ ಭಯೋತ್ಪಾದನೆ ಹೆಸರಿನಲ್ಲಿ ಸನಾತನ ಸಂಸ್ಕೃತಿಯ ಅವಹೇಳನ ಮಾಡಿದ್ದರು ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ನೀತಿಗಳೇ ನಕ್ಸಲಿಸಂ ಹಾಗೂ ಭಯೋತ್ಪಾದನೆಗೆ ಕಾರಣ ಎಂದು ದೂರು ಹೇಳಿರುವ ಅವರು, ಕೇಂದ್ರ ಸರ್ಕಾರ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿನ ಹೋರಾಟಗಳನ್ನು ನಿಯಂತ್ರಿಸಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದಲ್ಲಿ ಇಂದು ಭಯೋತ್ಪಾದನೆ,ನಕ್ಸಲಿಸಂ ಮಾತ್ರವಲ್ಲ ಈಶಾನ್ಯ ರಾಜ್ಯಗಳಲ್ಲಿನ ಉಗ್ರವಾದ, ಅರಾಜಕತೆ ಶಮನ ಆಗಿದೆ ಎಂದು ಅವರು ಪ್ರತಿಪಾದಿಸಿಕೊಂಡಿದ್ದಾರೆ.

ಸಂವಿಧಾನದ 370ನೇ ವಿಧಿಯು ಭಯೋತ್ಪಾದನೆಗೆ ಮೂಲ ಎಂದು ಹೇಳಿರುವ ಯೋಗಿ, ಈ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನಗಳನ್ನು ರದ್ದು ಮಾಡುವ ಮೂಲಕ ಮೋದಿ ಸರ್ಕಾರವು ಜಮ್ಮು ಹಾಗೂ ಕಾಶ್ಮೀರವನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ಕರೆತಂದಿದೆ ಎಂದಿದ್ದಾರೆ. ಮಾತ್ರವಲ್ಲದೇ, ಕಾಂಗ್ರೆಸ್‌ ಮುಸ್ಲೀಮರ ಓಲೈಕೆ ರಾಜಕಾರಣ ಮಾಡುವ ಮೂಲಕ ವಿಭಜನೆಯ ಬೀಜ ಬಿತ್ತುತ್ತಿದೆ ಎಂದೂ ಅವರು ಕಾಂಗ್ರೆಸ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!