Sunday, September 8, 2024

ಮತದಾನದ ಪ್ರಮಾಣ ಹೆಚ್ಚಿಸಲು ಮಾಡಬೇಕಾದ ಸರಳ ವಿಧಾನಗಳು

ಪ್ರತಿ ಬಾರಿ ಚುನಾವಣೆ ಮುಗಿದ ಅನಂತರ ಬಹು ಚರ್ಚೆಯಾಗುವ ವಿಷಯವೆಂದರೆ ಮತದಾನದಪ್ರಮಾಣ ಯಾಕೆ ಕಡಿಮೆಯಾಯಿತು ಅನ್ನುವುದು. ಇದಕ್ಕೆ ಹಲವು ಕಾರಣಗಳಿವೆ.

  1. ಬಹು ಮುಖ್ಯವಾಗಿನಮ್ಮ ಮತದಾರರ ಪಟ್ಟಿ ನಿಖರವಾಗಿಲ್ಲ ಅನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಅದೆಷ್ಟೋ ಮಂದಿ ಸ್ಥಳ ವಿಳಾಸ ಬದಲಾಯಿಸಿರಬಹುದು ನಿಧನರಾಗಿರಬಹುದು, ಕೆಲವರ ಹೆಸರು ಎರಡು ಕಡೆ ಕಾಣಿಸಿರುವುದು ಇದೆ. ಅಂದರೆ ಮತದಾರರ ಪಟ್ಟಿಯನ್ನು ಅಪ್ ಡೇಟ್ ಮಾಡುವ ವ್ಯವಸ್ಥೆ ನಮ್ಮಿಲಿಲ್ಲ. ಅಂದರೆ ನಮ್ಮ ಮತದಾರರ ಪಟ್ಟಿ ನಿಖರತೆಯಿಂದ ಕೂಡಿಲ್ಲ ಅನ್ನುವುದು ಸ್ವಷ್ಟ.

2.ನಮ್ಮ ಸರ್ಕಾರ ಆಧಾರ ಕಾರ್ಡ್‌ಗೆ ಕೊಟ್ಟ ಪ್ರಾಮುಖ್ಯತೆಯನ್ನು  ವೇೂಟರ್ ಕಾರ್ಡ್ ಅಂದರೆ ಎಪಿಕ್ ಕಾರ್ಡ್‌ಗೆ ಕೊಟ್ಟಿಲ್ಲ. ಎಲ್ಲಿಯೂ ಎಪಿಕ್ ಕಾರ್ಡ್‌ ಅನ್ನು ಒಂದು ಕಡ್ಡಾಯ ದಾಖಲೆಯ ಪ್ರಮಾಣವಾಗಿ ಪರಿಗಣಿಸಿಲ್ಲ. ಮತ ಚಲಾಯಿಸುವಾಗ ಕೂಡಾ ಎಪಿಕ್ ಕಾರ್ಡ್ ಇಲ್ಲದಿದ್ದರೂ ಸಹ ಇನ್ನಿತರ ದಾಖಲಾತಿ ನೀಡಿ ಮತ ಚಲಾಯಿಸುವ ಅವಕಾಶವನ್ನು  ನೀಡಿದೆ.‌ ಇದು ಚುನಾವಣಾ ಆಯೇೂಗದ ನಿರ್ಲಕ್ಷತನವೂ ಹೌದು. ಅವರಿಗೂ ಅಷ್ಟೇ ಮತದಾನ ಮುಗಿದರೆ ಸಾಕಪ್ಪ ಎನ್ನುವ ಮನಸ್ಥಿತಿ.

  1. ಒಂದು ವೇಳೆ ಯಾವುದೇ ಮತದಾರ ತನ್ನ ಎಪಿಕ್ ಕಾರ್ಡ್ ಅನ್ನು ಕನಿಷ್ಠ ಪಕ್ಷ ಎರಡು ಬಾರಿ ತನ್ನ ಮತದಾನಕ್ಕೆ ಬಳಸದೇ ಹೇೂದರೆ ಅದನ್ನು ಕ್ಯಾನ್ಸಲ್ ಮಾಡುವ ಅಧಿಕಾರ ಚುನಾವಣಾ ಆಯೇೂಗಕ್ಕೆ ನೀಡಬೇಕು.

4.ಇನ್ನೂ ಒಂದು ವಿಶೇಷ ಅಂಶವೆಂದರೆ ನಮ್ಮ ಚುನಾವಣಾ ಆಯೇೂಗಕ್ಕೆ ತನ್ನದೇ ಸಿಬ್ಬಂದಿಗಳಿಲ್ಲ..ಬೇರೆ ಇಲಾಖೆಗಳ ಎರವಲು ಸೇವೆಯಿಂದಲೇ ಚುನಾವಣೆ  ನಡೆಸ ಬೇಕಾದ ಪರಿಸ್ಥಿತಿ..ಇದುಕೂಡಾವಿವಿಧ ಇಲಾಖೆಗಳು ಚುನಾವಣೆ ಶುರುವಾದಾಗ ಚುರುಕುಗೊಳ್ಳ ಬೇಕಾದ ಸ್ಥಿತಿ.

5.ಇಂದು ವಿದ್ಯಾವಂತ ಮತದಾರರು ಖಂಡಿತವಾಗಿಯೂ ಒಂದೇ ಪ್ರದೇಶದಲ್ಲಿ ನೆಲೆ ನಿಂತಿರುವುದಿಲ್ಲ. ಇಂತಹ ಮತದಾರರ  ಹೆಸರು ಅವರ ಊರಿನಲ್ಲಿ ಖಂಡಿತವಾಗಿಯೂ  ದಾಖಲೆಯಾಗಿರುತ್ತದೆ. ಆದರೆ ಇವರು ಬೇರೆ ರಾಜ್ಯ ದೇಶದಲ್ಲಿ ಉದ್ಯೋಗ ನಿಮಿತ್ತ ನೆಲ ನಿಂತಿರುತ್ತಾರೆ. ಹಾಗಾಗಿ ಇಂತವರಿಗೆ ಆನ್‌ಲೈನ್ ವೇೂಟಿಂಗ್ ಸಿಸ್ಟಮ್‌ ಯಾಕೆ ಅನುಷ್ಠಾನ ಮಾಡ ಬಾರದು? ಹಣಕಾಸು ವ್ಯವಹಾರಗಳನ್ನು  ಅತ್ಯಂತ ವಿಶ್ವಾಸ ಗೌಪ್ಯತೆ ಯಿಂದ ರವಾನಿಸುವ ವ್ಯವಸ್ಥೆ  ನಮ್ಮಲಿದೆ. ಹಾಗೆನ್ನುವಾಗ ಮತದಾನಕ್ಕೆ ಈ ಸಿಸ್ಟಮ್‌ ತರಲು ಚುನಾವಣಾ ಆಯೇೂಗ ಯಾಕೆ ಗಮನ ಹರಿಸ ಬಾರದು.?

6.ಬೆಂಗಳೂರಿನಲ್ಲಿ ನೊಂದಾಯಿಸಿ ಕೊಂಡಿರುವ ಮತದಾರ ಉದ್ಯೋಗಿಗಳು ಬೆಂಗಳೂರಿನಲ್ಲಿಯೇ ಮತಕಟ್ಟೆ ಇದ್ದರೂ ಕೂಡಾ  ಮತ ಚಲಾಯಿಸಲು ಉದಾಸೀನ ತೇೂರಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಲ್ಲ ಬೇಕಲ್ಲ ಅನ್ನುವ ಮನಸ್ಥಿತಿ . ಅಂದರೆ ಇಲ್ಲಿ ಅವರಿಗೆ ಉದ್ಯೋಗ ನೀಡಿದ ಸಂಸ್ಥೆಗಳು ವೇತನ ಸಹಿತ ರಜೆ ನೀಡಿದರೆ ಸಾಲದು ಅವರು ಮತದಾನ ಮಾಡಿದ ದಾಖಲಾತಿ ಯನ್ನು ತಮ್ಮ ಕಚೇರಿಗೆ ಕಡ್ಡಾಯವಾಗಿ ನೀಡಬೇಕು ಅನ್ನುವ  ಅಂಶವನ್ನು ಸಂಸ್ಥೆಗಳು ರಜೆ ಕೊಡುವಾಗ ಸೇರಿಸಿ ವೇತನ ಕೊಡುವ ಅಂಶವನ್ನು ಸೇರಿಸ ಬೇಕು.ಮಾತ್ರವಲ್ಲ ಚುನಾವಣಾ ಆಯೇೂಗ ಕೂಡಾ ಶುಕ್ರವಾರ ಚುನಾವಣೆ ನಡೆಸಿದರೆ ಇಂತಹ ಬೇಜವಾಬ್ದಾರಿ ನೌಕರರು ಈ ಮೂರು ದಿನಗಳ ರಜೆಯನ್ನು ಇನ್ನಿತರ ಕೆಲಸಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳು ಇದೆ. ಕಳೆದ ಬಾರಿ ವಿಧಾನಸಭಾ ಚುನಾವಣಾ  ಸಂದರ್ಭದಲ್ಲಿ ಇದೇ ಕಾರಣಕೇೂಸ್ಕರ ವಾರದ ಮಧ್ಯದ ದಿನದಂದು ಚುನಾವಣೆ ನಡೆಸಿದ ಉದಾಹರಣೆ ನಮ್ಮ  ಮುಂದಿದೆ.

ಅಂತೂ ಸರಿ ಸುಮಾರು ಶೇ 70ರಷ್ಟು ಮತದಾನ ನಡೆದಿದೆ ಅಂದರೆ ಸ್ವಲ್ಪ ಮಟ್ಟಿಗೆ ನಾವು ತೃಪ್ತಿ ಪಡ ಬಹುದಾದ ಮತದಾನ ಅನ್ನುವುದನ್ನು ಈ ಎಲ್ಲಾ ಇತಿ ಮಿತಿಗಳ ನಡುವೆ ನಾವು ಖುಷಿ ಪಡಲೇಬೇಕಾದ ಅಂಶ ಅನ್ನುವುದು  ನನ್ನ ಅನಿಸಿಕೆ.

-ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!