Saturday, October 12, 2024

ಪ್ರಜ್ವಲ್ ಗೆ ಮತ ನೀಡಿದರೆ ನನಗೆ ಶಕ್ತಿ ಸಿಕ್ಕಂತೆ ಎಂದು ಮೋದಿ ಹೇಳಿದ್ದೇಕೆ? ಇದಕ್ಕೆ ಉತ್ತರ ನೀಡುವಿರಾ ರಾಜ್ಯ ಬಿಜೆಪಿಯ ಬೃಹಸ್ಪತಿಗಳೇ? : ಕಾಂಗ್ರೆಸ್‌

ಜನಪ್ರತಿನಿಧಿ (ಬೆಂಗಳೂರು) :  “ಹಿರಿತನವು ಹೇಡಿಂಗೆ ಗುರುತನವು ಮೂಢಂಗೆ, ದೊರೆತನವು ನಾಡ ನೀಚಂಗೆ-ದೊರೆದಿಹರೆ, ಧರೆಯೆಲ್ಲ ಕೆಡುಗು ಸರ್ವಜ್ಞ…” ಸರ್ವಜ್ಞನ ಈ ವಚನವು ಬಿಜೆಪಿಯವರಿಗೆ ಅತ್ಯಂತ ಸೂಕ್ತವಾಗಿ ಹೊಂದುತ್ತದೆ! ಎಂದು ರಾಜ್ಯ ಕಾಂಗ್ರೆಸ್‌ ಹೇಳಿದೆ.

ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯನ್ನು ಕಟುವಾಗಿ ಟೀಕಿಸಿದ ಕಾಂಗ್ರೆಸ್‌, ಬಿಜೆಪಿಯ ಮೂಡರಿಗೆ ತಾವೇನು ಮಾಡುತ್ತಿದ್ದೇವೆ, ಏನು ಮಾತಾಡುತ್ತಿದ್ದೇವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ನಾಡಿನ ನಂ1 ಮಾನಗೇಡಿಗಳಾಗಿದ್ದಾರೆ! ಎಂದು ಜರೆದಿದೆ.

ಆರ್.‌ ಅಶೋಕ್‌ ಅವರೇ, ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಪಕ್ಷದವನಾ? ಕಾಂಗ್ರೆಸ್ ಟಿಕೆಟ್ ಕೊಡಲು ಹೇಗೆ ಸಾಧ್ಯ? ಯಾವುದೇ ಮೈತ್ರಿ ಪಕ್ಷಕ್ಕೆ ಕ್ಷೇತ್ರ ಬಿಟ್ಟುಕೊಡಲು ಸಾಧ್ಯವೇ ಹೊರತು ಟಿಕೆಟ್ ಕೊಡಲು ಸಾಧ್ಯವೇ? ಇಷ್ಟಕ್ಕೂ ಜೆಡಿಎಸ್ ಜೊತೆಗಿನ ನಮ್ಮ ಕರಾಳ ಮೈತ್ರಿಯ ದಿನಗಳ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನ ಈ ಕರ್ಮಕಾಂಡಗಳು ಬೆಳಕಿಗೆ ಬಂದಿತ್ತೇ? ಆದರೆ ಬಿಜೆಪಿ ಸೀಟು ಹಂಚಿಕೆ ಮಾಡಿಕೊಳ್ಳುವ ಮುಂಚೆಯೇ 2023ರ ಡಿಸೆಂಬರ್ ರಲ್ಲಿ ಪ್ರಜ್ವಲ್ ಬಗ್ಗೆ ಪೂರ್ಣ ಮಾಹಿತಿ ನಿಮಗಿತ್ತಲ್ಲವೇ? ನೀವೇಕೆ ಟಿಕೆಟ್ ನೀಡಿದಿರಿ (ನಿಮ್ಮದೇ ಲಾಜಿಕ್ ಪ್ರಕಾರ) ಎಂದು ಆರ್‌. ಅಶೋಕ್‌ ಅವರಿಗೆ ತಿರುಗೇಟು ನೀಡುವುದರ ಮೂಲಕ ತಿವಿದಿದೆ.

2023ರ ಡಿಸೆಂಬರ್ ನಲ್ಲೇ ಪ್ರಜ್ವಲ್ ರೇವಣ್ಣ ತಮ್ಮ ಅಶ್ಲೀಲ ವಿಡಿಯೋಗಳಿಗೆ ತಡೆಯಾಜ್ಞೆ ತಂದಿದ್ದರಲ್ಲವೇ? ಅದರ ಮಾಹಿತಿ ನಿಮಗಿದ್ದರೂ ಏಕೆ ಬೆಂಬಲಿಸಿದಿರಿ? ಏಕೆ ಟಿಕೆಟ್ ನೀಡಿದಿರಿ? ಪ್ರಜ್ವಲ್ ಗೆ ಮತ ನೀಡಿದರೆ ನನಗೆ ಶಕ್ತಿ ಸಿಕ್ಕಂತೆ ಎಂದು ಮೋದಿ ಹೇಳಿದ್ದೇಕೆ? ಇದಕ್ಕೆ ಉತ್ತರ ನೀಡುವಿರಾ ರಾಜ್ಯ ಬಿಜೆಪಿಯ ಬೃಹಸ್ಪತಿಗಳೇ? ಎಂದು ಪ್ರಶ್ನೆಗಳ ಮೂಲಕ ಟೀಕಿಸಿದೆ.

https://x.com/INCKarnataka/status/1785626697154601444

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!