Sunday, September 8, 2024

ʼಇಂಡಿಯಾʼ ಮೈತ್ರಿಕೂಟ ಅಧಿಕಾರಕ್ಕೆ ಬಂದರೇ, ವರ್ಷಕ್ಕೊಬ್ಬ ಪ್ರಧಾನಿ ಸೂತ್ರ : ಪ್ರಧಾನಿ ಮೋದಿ ವಾಗ್ದಾಳಿ

ಜನಪ್ರತಿನಿಧಿ (ಸೋಲಾಪುರ) : ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟ ಅಧಿಕಾರಕ್ಕೆ ಬಂದರೇ ಒಂದು ವರ್ಷ ಒಬ್ಬ ಪ್ರಧಾನಿ ಎಂಬ ಸೂತ್ರದಲ್ಲಿ ಆಡಳಿತ ಮಾಡಲು ಬಯಸುತ್ತಿದೆ. ಆಂತರಿಕವಾಗಿ ನಾಯಕನ ಆಯ್ಕೆಯ ಬಗ್ಗೆ ದೊಡ್ಡ ಯುದ್ಧವೇ ನಡೆಯುತ್ತಿದೆ. ನಾಯಕ ಯಾರೆಂದು ತಿಳಿಯದೇಯೇ ಈ ದೇಶದ ಅಧಿಕಾರವನ್ನು ಅವರಿಗೆ ಹಸ್ತಾಂತರಿಸಲಾಗುವುದೇ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು(ಸೋಮವಾರ) ಪ್ರಶ್ನಿಸಿದ್ದಾರೆ.

ಚುನಾವಣಾ ಪ್ರಚಾರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಐದು ವರ್ಷಗಳಲ್ಲಿ ಐದು ಪ್ರಧಾನಿಗಳನ್ನು ದೇಶಕ್ಕೆ ಪರಿಚಯಿಸಲು ಇಂಡಿಯಾ ಮೈತ್ರಿಕೂಟ ಯೋಚಿಸಿದೆ. ಇಂತಹ ಪರಿಕಲ್ಪನೆಯನ್ನು ನೀವು ಬೆಂಬಲಿಸುತ್ತೀರಾ ಎಂದು ಅವರು ಸೇರಿದ ಜನರಲ್ಲಿ ಪ್ರಶ್ನೆ ಮಾಡಿದ್ದಾರೆ.

ಇಂಡಿಯಾ ಮೈತ್ರಿಕೂಟ ಒಂದು ವರ್ಷ, ಒಬ್ಬ ಪ್ರಧಾನಿ ಕಲ್ಪನೆಯೊಂದಿಗೆ ಅಧಿಕಾರ ಹಿಡಿಯುವ ಆಲೋಚನೆಯೊಂದಿಗೆ ದೇಶವನ್ನು ವಿಭಜಿಸುವ ಪ್ರಯತ್ನದಲ್ಲಿ ಇದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ನಮ್ಮ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಸಾಮಾಜಿಕ ನ್ಯಾಯ ಒದಗಿಸಿದೆ. ಈ ಮೂಲಕ ಇಡೀ ದೇಶದಲ್ಲಿ ಏಕತೆಯನ್ನು ಕಾಪಾಡಿದೆ. ದೇಶದಲ್ಲಿ ಇಪ್ಪತ್ತೈದು ಕೋಟಿ ಜನಎನ್ನು ಬಡತನ ರೇಖೆಯಿಂದ ಮೇಲೆ ತಂದಿದ್ದೇವೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಸಂವಿಧಾನವನ್ನು ಕಾಶ್ಮೀರದಲ್ಲಿ ಜಾರಿಗೆ ತರಲು ಕಾಂಗ್ರೆಸ್‌ ಅವಕಾಶ ಕೊಟ್ಟಿರಲಿಲ್ಲ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.೧೦ರಷ್ಟು ಮೀಸಲಾತಿಯನ್ನು ಒದಗಿಸಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!