spot_img
Wednesday, April 1, 2026
spot_img

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯ : ಒಟ್ಟು ಶೇ.68.47 ರಷ್ಟು ಮತದಾನ !

ಜನಪ್ರತಿನಿಧಿ (ಬೆಂಗಳೂರು) : ಇಂದು(ಶುಕ್ರವಾರ) ದೇಶದಾದ್ಯಂತ ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ಮತ್ತು ಕರ್ನಾಟಕದಲ್ಲಿ ಮೊದಲನೇ ಹಂತದ ಮತದಾನ ನಡೆದಿದ್ದು, ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾರ ತಮ್ಮ ತಮ್ಮ ಕ್ಷೇತ್ರದ ಸಂಸದ ಆಯ್ಕೆಗಾಗಿ ತಮ್ಮ ಮತ ಚಲಾವಣೆ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಮಂಡ್ಯ, ಮೈಸೂರು, ಹಾಸನ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಮತದಾನ ಪ್ರಕ್ರಿಯೆ ನಡೆದಿದೆ.

14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು ಮತ ಪ್ರಮಾಣ :

ಬೆಂಗಳೂರು ಕೇಂದ್ರ – ಶೇ. 53.33

ಬೆಂಗಳೂರು ಉತ್ತರ – ಶೇ. 53.66

ಬೆಂಗಳೂರು ಗ್ರಾಮಾಂತರ – ಶೇ.65.72

ಬೆಂಗಳೂರು ದಕ್ಷಿಣ – ಶೇ. 52.94

ಚಾಮರಾಜನಗರ -ಶೇ.73.10

ಚಿಕ್ಕಬಳ್ಳಾಪುರ -ಶೇ. 76.21

ಚಿತ್ರದುರ್ಗ- ಶೇ. 72.82

ದಕ್ಷಿಣ ಕನ್ನಡ – ಶೇ. 76.50

ಹಾಸನ – ಶೇ. 77.69

ಕೋಲಾರ – ಶೇ. 77.24

ಮಂಡ್ಯ – ಶೇ. 81.29

ಮೈಸೂರು – ಶೇ. 68.99

ತುಮಕೂರು – ಶೇ. 75.58

ಉಡುಪಿ ಚಿಕ್ಕಮಗಳೂರು – ಶೇ.76.06

ಕರ್ನಾಟಕದಲ್ಲಿ ಇಂದು(ಶುಕ್ರವಾರ) ಒಟ್ಟು ಹದಿನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಚಲಾವಣೆಯಾದ ಒಟ್ಟು ಮತ ಪ್ರಮಾಣ ಶೇ.68.47 ರಷ್ಟು ಆಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!