Saturday, September 14, 2024

ದೇಶದಲ್ಲಿ ಎರಡನೇ ಹಂತದ ಚುನಾವಣೆ ಮುಕ್ತಾಯ : ರಾಜ್ಯದ ಮೊದಲನೇ ಹಂತದ ಚುನಾವಣೆಯಲ್ಲಿ ಶೇ. 68.47 ರಷ್ಟು ಮತ ಚಲಾವಣೆ !

ಜನಪ್ರತಿನಿಧಿ (ನವ ದೆಹಲಿ) : ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಕರ್ನಾಕದ ಹದಿನಾಲ್ಕು ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಇಂದು(ಶುಕ್ರವಾರ) ಮತದಾನ ನಡೆದಿದೆ.

ಆಡಳಿತ ವಿರೋಧಿ ಅಲೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಂಡು ಬಂದಿದೆ. ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟ ಒಂದೆಡೆಯಾದರೇ, ಇನ್ನೊಂದೆಡೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ. ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇ ಬೇಕು ಎಂಬ ದೃಷ್ಟಿಯಲ್ಲಿ ಶತಾಯ ಗತಾಯ ಉಭಯ ಮೈತ್ರಿಕೂಟದ ಪಕ್ಷಗಳು ಪ್ರಯತ್ನಿಸುತ್ತಿವೆ.

ʼಕಾಂಗ್ರೆಸ್‌ ಗ್ಯಾರಂಟಿʼ ಯೋಜನೆಗಳು ಮತ್ತು ʼಮೋದಿ ಗ್ಯಾರಂಟಿʼ ನಡುವೆ ದೊಡ್ಡ ಮಟ್ಟದ ಪೈಪೋಟಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಣಿಸುತ್ತಿದೆ. ರಾಜಕೀಯ ನಾಯಕರ ಹೇಳಿಕೆಗಳು ತೀವ್ರ ಚರ್ಚೆಗೂ ಕಾರಣವಾಗಿವೆ. ಆರ್ಥಿಕ ಬಿಕ್ಕಟ್ಟು, ರೈತರ ಪ್ರತಿಭಟನೆ, ವಿವಾದಿತ ಕೃಷಿ ಕಾನೂನುಗಳು, ರಾಮ ಮಂದಿರ, ಜಮ್ಮ ಮತ್ತು ಕಾಶ್ಮೀರ ವಿಶೇಷ ಹಕ್ಕು ರದ್ದು, ಚುನಾವಣಾ ಬಾಂಡ್‌ ರದ್ದು, ಹಣದುಬ್ಬರ, ಬೆಲೆ ಏರಿಕೆ, ಹಿಂದುತ್ವ, ಜಾತಿ ಗಣತಿ, ಸಂವಿಧಾನ, ಗಡಿ ವಿವಾದ, ಸಿಎಎ ಸೇರಿ ಹತ್ತು ಹಲವಾರು ವಿಚಾರಗಳು ದೇಶದಾದ್ಯಂತ ಬಾರಿ ದೊಡ್ಡ ಮಟ್ಟದ ಪರ ವಿರೋಧದ ಚರ್ಚೆಗೆ, ಟೀಕೆಗೆ ಕಾರಣವಾಗಿವೆ. ಈ ನಡುವೆ ಎರಡನೇ ಹಂತದಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಇಂದಿಗೆ ಕೊನೆಗೊಂಡಿದೆ.

ಎರಡನೇ ಹಂತದಲ್ಲಿ ಅಸ್ಸಾಂ, ಬಿಹಾರ್‌, ಛತ್ತೀಸ್‌ಗಢ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ್‌, ತ್ರಿಪುರಾ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಒಟ್ಟು 88 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆದಿದೆ.

13 ರಾಜ್ಯಗಳಲ್ಲಿ ಇಂದು ನಡೆದ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತ ಪ್ರಮಾಣ :

ಅಸ್ಸಾಂ – ಶೇ. 77.35

ಬಿಹಾರ್‌ – ಶೇ. 57.81

ಛತ್ತೀಸ್‌ಗಡ – ಶೇ. 75.16

ಜಮ್ಮು ಮತ್ತು ಕಾಶ್ಮೀರ – ಶೇ.72.32

ಕರ್ನಾಟಕ – ಶೇ. 68.47

ಕೇರಳ – ಶೇ. 70.21

ಮಧ್ಯ ಪ್ರದೇಶ – ಶೇ.58.26

ಮಹಾರಾಷ್ಟ್ರ – ಶೇ.59.63

ಮಣಿಪುರ – ಶೇ. 78.78

ರಾಜಸ್ಥಾನ್‌ – ಶೇ. 64.07

ತ್ರಿಪುರಾ – ಶೇ.79.66

ಉತ್ತರಪ್ರದೇಶ – ಶೇ.54.85

ಪಶ್ಚಿಮ ಬಂಗಾಳ – ಶೇ.  73.78

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!