spot_img
Wednesday, April 1, 2026
spot_img

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ.76.50 ರಷ್ಟು ಮತದಾನ !

ಜನಪ್ರತಿನಿಧಿ (ಮಂಗಳೂರು) : ಕರ್ನಾಟಕದಲ್ಲಿ ಇಂದು(ಶುಕ್ರವಾರ) ಮೊದಲನೇ ಹಂತದ ಮತದಾನದಲ್ಲಿ ಹದಿನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಆ ಪೈಕಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿಯೂ ಮತದಾನ ನಡೆದಿದೆ.

ಹಿಂದುತ್ವದ ಭದ್ರಕೋಟೆ ಎಂದು ಬಿಂಬಿತವಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಈ ಜಿದ್ದಾಜಿದ್ದಿನ ಹೋರಾಟ ಸೃಷ್ಟಿಯಾಗಿದೆ. ಹೇಗಾದರೂ ಮಾಡಿ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂಬ ದೃಷ್ಟಿಯಲ್ಲಿ ಕ್ಷೇತ್ರದ ನಿರ್ಣಾಯಕ ಸಮುದಾಯಗಳಲ್ಲಿ ಒಂದಾದ ಬಿಲ್ಲವ ಸಮುದಾಯದ ಪದ್ಮರಾಜ್‌ ಆರ್‌ ಪೂಜಾರಿ ಹಾಗೂ ಬಿಜೆಪಿಯಿಂದ ಬಂಟ ಸಮುದಾಯಕ್ಕೆ ಸೇರಿದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ನಡುವೆ ಬಾರಿ ದೊಡ್ಡ ಮಟ್ಟ ಪೈಪೋಟಿ ಎದುರಾಗಿದೆ. ಬಿಲ್ಲವ ಮತಗಳು ಈ ಬಾರಿ ಕಾಂಗ್ರೆಸ್‌ಗೆ ಲಾಭ ವಾಗಬಹುದೆಂಬ ರಾಜಕೀಯ ವಿಶ್ಲೇಷಣೆಗಳು ಕೇಳಿಬಂದಿದ್ದವು. ಬಿಜೆಪಿ ಇಲ್ಲಿ ಹಿಂದುತ್ವದ ನಿಷ್ಠಾವಂತ ಮತದಾರರು ತಮ್ಮ ಮತವನ್ನು ಬದಲಾಯಿಸಲ್ಲ ಎಂಬ ವಿಶ್ವಾಸದಲ್ಲೆ ಚುನಾವಣೆಯನ್ನು ಎದುರಿಸಿದೆ.

ಸದ್ಯ ಮತದಾನ ಪ್ರಕ್ರಿಯೆ ನಡೆದಿದ್ದು, ಮತದಾರ ಯಾರಿಗೆ ಒಲಿದಿದ್ದಾರೆ ಎಂಬುವುದನ್ನು ತಿಳಿಯಬೇಕಾದರೇ ಫಲಿತಾಂಶದವರೆಗೆ ಕಾಯಲೇಬೇಕಿದೆ.

ದಕ್ಷಿಣ ಕನ್ನಡದಲ್ಲಿ ವಿಧಾನಸಭಾ ಕ್ಷೇತ್ರವಾರು ಒಟ್ಟು ಮತ ಪ್ರಮಾಣ :

ಬಂಟ್ವಾಳ  – ಶೇ. 80.47

ಬೆಳ್ತಂಗಡಿ  – ಶೇ. 80.25

ಮಂಗಳೂರು – ಶೇ. 75.60

ಮಂಗಳೂರು ನಗರ ಉತ್ತರ – ಶೇ. 73.73

ಮಂಗಳೂರು ನಗರ ದಕ್ಷಿಣ – ಶೇ. 66.29

ಮೂಡುಬಿದಿರೆ -ಶೇ. 75.36

ಪುತ್ತೂರು – ಶೇ. 80.08

ಸುಳ್ಯ – ಶೇ. 82.00

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ.76.50 ರಷ್ಟು ಮತ ಚಲಾವಣೆಯಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!