spot_img
Thursday, December 5, 2024
spot_img

ಮಾನವೀಯ ಸೇವೆಯಿಂದ ಆತ್ಮ ಸಂತೃಪ್ತಿ-ವಿ.ಜಿ. ಶೆಟ್ಟಿ

ಉಡುಪಿ: ಸಮಾಜದಿಂದ ಪ್ರತಿ ಕ್ಷಣವೂ ಲಾಭ ಪಡೆಯುವ ನಾವು ಸಮಾಜಕ್ಕೆ ಮರಳಿ ನೀಡುವ ಅಗತ್ಯವಿದೆ. ಅದು ಸೇವೆಯಿಂದ ಸಾಧ್ಯ, ಮಾನವೀಯ ಸೇವೆಯು ನಮಗೆ ಆತ್ಮ ಸಂತೃಪ್ತಿಯನ್ನು ನೀಡುತ್ತದೆ ಎಂದು ಕರ್ನಾಟಕ ರೆಡ್ ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ವಿ.ಜಿ. ಶೆಟ್ಟಿ ಹೇಳಿದರು.

ಅವರು ಡಾ. ಟಿ. ಎಂ. ಎ ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ರೆಡ್ ಕ್ರಾಸ್ ಘಟಕ ಹಾಗೂ ಪ್ರೊ. ಒ.ಎಸ್. ಅಂಚನ್ ಸ್ಮಾರಕ ಉಪನ್ಯಾಸವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ಅವರಿಗೆ ರೆಡ್ ಕ್ರಾಸ್ ಪುಸ್ತಕವನ್ನು ಹಸ್ತಾಂತರಿಸುವ ಮೂಲಕ ಅವರು ಘಟಕವನ್ನು ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ. ಒ.ಎಸ್. ಅಂಚನ್ ಸ್ಮಾರಕ ಉಪನ್ಯಾಸ ನೀಡಿದ ರೆಡ್ ಕ್ರಾಸ್ ಗೌರವ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆಗೆ ಹೆಸರಾಗಿರುವ ರೆಡ್ ಕ್ರಾಸ್‌ನ ಮಾನವೀಯ ಸೇವೆಗೆ ನಾಲ್ಕು ಬಾರಿ ನೊಬೆಲ್ ಪ್ರಶಸ್ತಿ ಬಂದಿರುವುದನ್ನು ನೆನಪಿಸಿದರು. ರೆಡ್ ಕ್ರಾಸ್‌ನ ಇತಿಹಾಸ ಮತ್ತು ತತ್ವಗಳನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಮಹಾಬಲೇಶ್ವರ ರಾವ್ ಅವರು ರೆಡ್ ಕ್ರಾಸ್ ಚಟುವಟಿಕೆಗಳಿಂದ ಮಹಾತ್ಮ ಗಾಂಧೀಜಿಯವರು ಉತ್ತೇಜಿತರಾಗಿದ್ದರು. ಕಾಲೇಜಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಾಲೇಜು ಗೀತೆಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಕ ವಿದ್ಯಾರ್ಥಿನಿ ದೀಪಿಕಾ ಅವರು ಸ್ವಾಗತಿಸಿದರು. ರೆಡ್ ಕ್ರಾಸ್ ಸಂಯೋಜಕಿ ಮಮತಾ ಸಾಮಂತ್ ವಂದಿಸಿದರು. ಕು. ಅಶ್ವಿಜಾ ಮತ್ತು ಕಿಶನ್ ನಾಯಕ್ ಕಾರ್ಯಕ್ರಮ ನಿರೂಪಸಿದರು.

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!