Saturday, October 12, 2024

ಕಂಚಗೋಡು ಶ್ರೀ ರಾಮ ದೇವಸ್ಥಾನ ಸುವರ್ಣ ಮಹೋತ್ಸವ: ಶ್ರೀ ಸೀತಾರಾಮ ಕಲ್ಯಾಣೋತ್ಸವ ಸಂಪನ್ನ

ಕುಂದಾಪುರ: ಕಂಚಗೋಡು ಶ್ರೀ ರಾಮ ದೇವಸ್ಥಾನ ಇದರ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಐತಿಹಾಸಿಕ ವೈಭವದ ಶ್ರೀ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಸಂಪನ್ನಗೊಂಡಿತು.

ಬೆಳಿಗ್ಗೆ ೬ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಆನಗಳ್ಳಿಯ ಶ್ರೀ ಚೆನ್ನಕೇಶವ ಗಾಯತ್ರಿ ಭಟ್ ರವರ ಮಾರ್ಗದರ್ಶನದಲ್ಲಿ ಸೀತಾ ರಾಮ ಕಲ್ಯಾಣೋತ್ಸವವೂ ಪವಿತ್ರ ಧಾರ್ಮಿಕ ಸಂಭ್ರಮದ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಈ ಸಂದಂರ್ಭದಲ್ಲಿ ಪೇಜಾವರ ಮಠದ ಶ್ರೀಗಳಾದ ವಿಶ್ವ ಪ್ರಸನ್ನ ಸ್ವಾಮಿಗಳು ಆರ್ಶೀವಚನ ನೀಡಿ ಪ್ರತಿಯೊಬ್ಬರಲ್ಲಿ ಶ್ರೀ ರಾಮಚಂದ್ರರ ಪ್ರಭುವಿನ ಆರಾಧನೆಯ ದಿವ್ಯಾನುಭೂತಿ ಭಕ್ತಿಪ್ರದವಾಯಿತು. ಇಡೀ ಊರು ಸೀತಾರಾಮ ಕಲ್ಯಾಣೋತ್ಸವದ ದಿವ್ಯಸ್ಮೃತಿಯಲ್ಲಿ ಪರಮ ಪಾವನವಾಯಿತು ಎಂದರು.

ಸುಮಾರು ಹದಿನೈದು ಸಾವಿರಕ್ಕೂ ಮಿಕ್ಕಿ ಜನರು ಅನ್ನಸಂತರ್ಪಣೆಯಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಶ್ರೀ ರಾಮ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಕಂಚುಗೋಡು ನಾಗೇಶ್ ಖಾರ್ವಿ, ಸುವರ್ಣ ಮಹೋತ್ಸವದ ಅಧ್ಯಕ್ಷರಾದ ಚೌಕಿ ಸಂತೋಷ ಖಾರ್ವಿ, ಶ್ರೀ ರಾಮ ದೇವಸ್ಥಾನ ಮಹಿಳಾ ಸಮಿತಿಯ ಅಧ್ಯಕ್ಷೆ ಯಶೋಧ ನಾರಾಯಣ ಖಾರ್ವಿ, ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಊರಿನ ಸಮಾಜಬಾಂಧವರು ಹಾಗೂ ಮಹಿಳಾ ಭಜಕ ವೃಂದದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!