spot_img
Monday, March 24, 2025
spot_img

ಇವಿಎಂಗಳನ್ನು ಟ್ಯಾಂಪರಿಂಗ್ ಮಾಡದೆ ಇದ್ದರೇ ಬಿಜೆಪಿ 180ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವುದಿಲ್ಲ : ಪ್ರಿಯಾಂಕ ಗಾಂಧಿ

ಜನಪ್ರತಿನಿಧಿ (ಸಹರಾನ್‌ಪುರ) : ನ್ಯಾಯಯುತ ಚುನಾವಣೆ ನಡೆಸಿದರೆ, ಇವಿಎಂಗಳನ್ನು ಟ್ಯಾಂಪರಿಂಗ್ ಮಾಡದೆ ಇದ್ದರೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ 180ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಹೇಳಿದ್ದಾರೆ.

ಇಂದು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕಿ, ಯಾವ ಆಧಾರದ ಮೇಲೆ ಬಿಜೆಪಿ 400 ಕ್ಕೂ ಹೆಚ್ಚು ಕ್ಷೇತ್ರಗಳನ್ನು ಪಡೆಯುವ ಹೇಳಿಕೆ ನೀಡುತ್ತಿದೆ? ಎಂದು ಪ್ರಶ್ನಿಸಿದರು.

400 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಯಾವ ಆಧಾರದಲ್ಲಿ ಹೇಳುತ್ತಿದ್ದಾರೆ. ಅವರು ಜ್ಯೋತಿಷಿಗಳೇ?, ಒಂದೋ ಅವರು ಮೊದಲಿನಿಂದಲೂ ಏನೇನೋ ಮಾಡಿದ್ದಾರೆ. ಹೀಗಾಗಿಯೇ 400 ಹೆಚ್ಚು ಬರುತ್ತೆ ಅಂತ ಹೇಳುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಲ್ಲದೇ, ಇಂದು ದೇಶದಲ್ಲಿ ಚುನಾವಣೆ ನಡೆದರೆ, ಇವಿಎಂ ಟ್ಯಾಂಪರಿಂಗ್ ಆಗದೇ ಇದ್ದಲ್ಲಿ, ಅವರು 180 ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗಳಿಸಲು ಸಾಧ್ಯವೇ ಇಲ್ಲ ಎಂದು ನಾನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ ಎಂದು ಹೇಳಿದ್ದಾರೆ.

ನಾನು ಈ ಚುನಾವಣೆಯನ್ನು ಜನರ ದೃಷ್ಟಿಕೋನದಿಂದ ನೋಡುತ್ತೇನೆ ಎಂದ ಅವರು, ಜನರ ಸಮಸ್ಯೆಗಳ ಆಧಾರದ ಮೇಲೆ ಚುನಾವಣೆ ನಡೆಸಬೇಕು ಎಂದು ಒತ್ತಿ ಹೇಳಿದರು.

“ಈ ಚುನಾವಣೆಯು ಜನರ ಚುನಾವಣೆಯಾಗಬೇಕು, ಇದು ಜನರ ಸಮಸ್ಯೆಗಳ ಮೇಲೆ ನಡೆಯಬೇಕು ಎಂದು ನಾನು ಜನರಿಗೆ ಎಲ್ಲೆಡೆ ಹೇಳುತ್ತಿದ್ದೇನೆ” ಎಂದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕ, ಬಿಜೆಪಿ ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಮಾತನಾಡುತ್ತಿಲ್ಲ. “ಅವರು ನಿರುದ್ಯೋಗ, ಹಣದುಬ್ಬರದ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ರೈತರು ಹಾಗೂ ಮಹಿಳೆಯರು ಎದುರಿಸುತ್ತಿರುವ ನೈಜ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಅವರ ಎಲ್ಲಾ ಸಂಭಾಷಣೆಗಳು ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಮಾತ್ರ ಯತ್ನಿಸುತ್ತಿವೆ” ಎಂದರು.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!