spot_img
Saturday, December 7, 2024
spot_img

ಈ ಹಿಂದೆ ಮಂಗಳೂರಿಗೆ ಬಂದಾಗೆಲ್ಲಾ ಮೋದಿಗೆ ನಾರಾಯಣ ಗುರುಗಳ ನೆನಪಾಗಿಲ್ಲ ಯಾಕೆ ? : ಮಮತಾ ಗಟ್ಟಿ

ಜನಪ್ರತಿನಿಧಿ (ಮಂಗಳೂರು) : ಪ್ರಧಾನಿ ನರೇಂದ್ರ ಮೋದಿ ಅನೇಕ ಬಾರಿ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಆಗೆಲ್ಲಾ ನೆನಪಾಗದ ಬ್ರಹ್ಮಶ್ರೀ ನಾರಾಯಣ ಗುರುಗಳು, ಚುನಾವಣೆಯ ಹೊಸ್ತಿಲಲ್ಲಿ ಮಾತ್ರ ಅವರಿಗೆ ನೆನಪಾಗಿದ್ದು ಯಾಕೆ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಕಟುವಾಗಿ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾರಾಯಣ ಗರುಗಳ ತತ್ವ ಸಿದ್ಧಾಂತವನ್ನು ಆನುಸರಿಸುತ್ತಿರುವ ಆರ್.‌ ಪದ್ಮರಾಜ್‌ ಕಾಂಗ್ರೆಸ್‌ ಅಭ್ಯರ್ಥಿ, ಅವರು ಎಲ್ಲಾ ಜಾತಗಳ ನಾಯಕ. ಒಂದೇ ಜಾತಿಗೆ, ಧರ್ಮಕ್ಕೆ ಸೀಮಿತರಲ್ಲ. ಪದ್ಮರಾಜ್‌ ಅವರಿಗೆ ಸಿಗುತ್ತಿರುವ ಜನ ಬೆಂಬಲ ನೋಡಿ ಬಿಜೆಪಿ ವಿಚಲಿತವಾಗಿದೆ ಎಂದು ಅವರು ಹೇಳಿದರು.

ಜನಾರ್ಧನ ಪೂಜಾರಿ ಅವರು ಸಂಸದರಾಗಿದ್ದವರೆಗೆ ನಾವು ಜಿಲ್ಲೆಯಲ್ಲಿ ಅಭಿವೃದ್ಧಿ ಕಂಡಿದ್ದೇವೆ. ನಂತರ, ಧರ್ಮಗಳ ನಡುವೆ ದ್ವೇಷ ಬಿತ್ತಿ ಬಿಜೆಪಿಯವರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಬಿಜೆಪಿಯ ಸಂಸದರು ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿದ ಉದಾಹರಣೆಯೇ ಇಲ್ಲ. ಅವರು ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಕಂಡಿದ್ದು ಬರೀ ಮೋಸ.ಲೀಟರ್‌ಗೆ ಐವತ್ತಾರು ರೂ. ಇದ್ದ ಪೆಟ್ರೋಲ್‌ ದರ ಈಗ ತೊಂಬತ್ತೆಂಟಕ್ಕೆ ಏರಿಕೆಯಾಗಿದೆ. ಒಂದು ವಸ್ತುವನ್ನೂ ಬಿಡದೇ ಜಿಎಸ್‌ಟಿಯನ್ನು ವಿಧಿಸಲಾಗುತ್ತಿದೆ. ವಿದೇಶಿ ಬ್ಯಾಂಕ್‌ಗಳಿಂದ ಕಪ್ಪು ಹಣ ವಾಪಾಸ್‌ ತಂದು ಜನಧನ ಖಾತೆಗೆ ಹದಿನೈದು ಲಕ್ಷ ಜಮೆ ಮಾಡಲಾಗುವುದು ಎಂದು ಭರವಸೆಯನ್ನೂ ಈಡೇರಿಸದೇ ಜನರನ್ನು ಮೋಸಗೊಳಿಸಿದೆ. ನೋಟು ಅಮಾನ್ಯೀಕರಣದಿಂದ ಜನರು ಇನ್ನೂ ಸಮಸ್ಯೆ ಎದುರಿಸುತ್ತಿದ್ದಾರೆ. ಎರಡು ಸಾವಿರ ಮುಖಬೆಲೆಯ ನೋಟು ಮುದ್ರಿಸಿ, ಮೂರೇ ವರ್ಷಗಳಲ್ಲಿ ವಾಪಾಸ್‌ ಪಡೆದರು. ಚುನಾವಣಾ ಬಾಂಡ್‌ನಲ್ಲೂ ವ್ಯವಸ್ಥಿತ ಭ್ರಷ್ಟಾಚಾರ ನಡೆಸಿದ್ದರಾಎ. ಜನ ಎಚ್ಚೆತ್ತುಕೊಂಡಿದ್ದು, ಅವರ ಮೋಸಗಳಿಕೆ ತಕ್ಕ ಪಾಠ ಕಲಿಸಿಕೊಡಲಿದ್ದಾರೆ ಎಂದು ಅವರು ಹೇಳಿದರು.

ಮಹಿಳೆಯರಿಗೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಶೇ.೩೩ರಷ್ಟು ಮೀಸಲಾತಿ ಘೋಷಿಸಿರುವ ಬಿಜೆಪಿ ಅದನ್ನೂ ಈಡೇರಿಸಿಲ್ಲ. ಪ್ರಧಾನಿ ಮನಸ್ಸು ಮಾಡಿದ್ದರೇ ಈ ಚುನಾವಣೆಯಲ್ಲೇ ಅದನ್ನು ಜಾರಿಗೊಳಿಸಬಹುದಿತ್ತಿ. ಮಹಿಳೆಯರಿಗೆ ಪಂಚಾಯತ್‌ ರಾಜ್ಯ ಸಂಸ್ಥೆಗಳಲ್ಲಿ ಶೇ.೫೦ರಷ್ಟು ಮೀಸಲಾತಿ ಜಾರಿಗೊಳಿಸಿದ್ದು ಕಾಂಗ್ರೆಸ, ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಒಂದೇ ಒಂದು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಜಾರಿಗೊಳಿಸಿಲ್ಲ ಎಂದು ಅವರು ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!