Thursday, November 21, 2024

“ಸಂವಿಧಾನದ ರಕ್ಷಣೆ ಮತ್ತು ಅಪಾಯ ” ಒಂದು ಸಕಾಲಿಕ ಚಿಂತನೆ

ಸಂವಿಧಾನದ ರಕ್ಷಣೆ ಮತ್ತು ಅಪಾಯದ ಕುರಿತಾಗಿ ದೇಶದ ಉದ್ದಗಲಕ್ಕೂ ಪರ ವಿರೇೂಧ ಚರ್ಚೆಗಳು ನಡೆಯತ್ತಿದೆ. ನಡೆಯುವುದು ಕೂಡಾ ಉತ್ತಮ ಲಕ್ಷಣ. ಕನಿಷ್ಠ ಪಕ್ಷ ಭಾರತ ದೇಶದ ಸಂವಿಧಾನದ ಕುರಿತಾಗಿ ಸ್ವಲ್ಪ ಮಾಹಿತಿ ಜನ ಸಾಮಾನ್ಯರಿಗೆ ತಿಳಿಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ಭಾರತೀಯ ಸಂವಿಧಾನ ಬರೇ  ತರಗತಿಗಳ ನಾಲ್ಕು ಗೇೂಡೆಗಳ ನಡುವಿನ ಅಧ್ಯಯನದ ವಿಷಯಕ್ಕೆ ಸೀಮಿತವಾಗಿ ಬಿಡುತ್ತದೆ.

ಇದುವರೆಗೂ ಈ ಸಂವಿಧಾನವನ್ನು ಬರೇ ಪಠ್ಯದ ವಿಷಯವಾಗಿ ಪಾಠ ಮಾಡಿಕೊಂಡಿದ್ದ ನಮ್ಮಂತಹ ಮೇಷ್ಟ್ರುಗಳು ನಾಲ್ಕು ಗೇೂಡೆಯಿಂದ ಹೊರಗೆ ಬಂದು ಸಾವ೯ಜನಿಕವಾಗಿ ತಿಳಿಯ ಹೇಳಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಇದು ನಮ್ಮೆಲ್ಲರ ಕರ್ತವ್ಯವೂ ಹೌದು.

ಇತ್ತೀಚಿನ ವರುಷಗಳಲ್ಲಿ ಸಂವಿಧಾನದ ತಿದ್ದುಪಡಿ, ಬದಲಾವಣೆ ಪದ ಪ್ರಯೋಗದ ಕುರಿತಾಗಿ ಸಾಕಷ್ಟು ಚರ್ಚೆ ನಡೆದಿದೆ ನಡೆಯುತ್ತಿದೆ. ಸಂವಿಧಾನಿಕ ಪರಿ ಭಾಷೆಯಲ್ಲಿಯೇ ಹೇಳ ಬೇಕಾದರೆ ಇಲ್ಲಿ ಬದಲಾವಣೆ ಮತ್ತು ತಿದ್ದುಪಡಿ ಈ ಎರಡು ಶಬ್ದಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಸಂವಿಧಾನದ ಅನುಚ್ಛೇದ 368ರಲ್ಲಿ ಬಳಸಿರುವ ನಿಖರವಾದ ಪದವೆಂದರೆ ತಿದ್ದುಪಡಿ (mode of amendment )ಇಲ್ಲಿ ಕೂಡಾ ಮೂರು ತರದಲ್ಲಿ ಸಂವಿಧಾನದ ತಿದ್ದುಪಡಿ ಮಾಡುವ ವಿಧಿ ವಿಧಾನಗಳ ಬಗ್ಗೆ ಸ್ವಷ್ಟವಾದ ವಿವರಣೆ ಇದೆ. ಈ ನೆಲೆಯಲ್ಲಿ ನಮ್ಮ ಅಗತ್ಯಕ್ಕೆ ತಕ್ಕಂತೆ ನಮ್ಮ ಸಂವಿಧಾನ 104 ಬಾರಿ (ಅಂದರೆ 1/7/2021)ತಿದ್ದುಪಡಿಗೆ ಒಳಗಾಗಿದೆ. ಕೆಲವು ಬಾರಿ ಹೆಚ್ಚು ಆಗಿದೆ ಕಡಿಮೆಯೂ ಆಗಿದೆ. ಅತೀ ಹೆಚ್ಚಿನ ಸಂದರ್ಭದಲ್ಲಿ ಈ ತಿದ್ದುಪಡಿಗಳು ಸುಪ್ರೀಂ ಕೇೂಟಿ೯ನ ಪೀಠದಲ್ಲೂ ನ್ಯಾಯಾಂಗದ ಪರಾಮರ್ಶೆಗೂ ಒಳ ಪಟ್ಟಿದೆ. ಕೆಲವೊಂದು ಸಂವಿಧಾನ ಬಾಹಿರವೆಂತಲೂ ಹಾಗೇ ಕೆಲವೊಂದು ಕೇೂರ್ಟಿನ ಎಚ್ಚರಿಕೆಯ ನಿರ್ದೇಶನದೊಂದಿಗೆ ಒಪ್ಪಿಗೆ ಕೊಟ್ಟಿದ್ದು ಇದೆ. ಉದಾ : 42ನೇ ತಿದ್ದುಪಡಿಯಲ್ಲಿ ಆಸ್ತಿ ಹಕ್ಕು (ಅನುಚ್ಛೇದ 31)ಮೂಲಭೂತ ಹಕ್ಕಿನಿಂದ ಮುಕ್ತಿಗೊಳಿಸುವ ಸಂದರ್ಭದಲ್ಲಿ ಸುಪ್ರೀಂ ಕೇೂರ್ಟ್ ಅಂದಿನ ಇಂದಿರಾ ಗಾಂಧಿಯವರ ಸರ್ಕಾರಕ್ಕೆ ನೀಡಿದ ಎಚ್ಚರಿಕೆ ಅಂದರೆ ಸಂವಿಧಾನದ ಮೂಲ ಚೌಕಟ್ಟಿಗೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಅನ್ನುವ ಮಾತಿನೊಂದಿಗೆ ಪ್ರಸ್ತುತ ಮಾಡಿರುವ ತಿದ್ದುಪಡಿ ಸಾಮಾಜಿಕ ಆರ್ಥಿಕ ನ್ಯಾಯ ನೀಡುವ ದೃಷ್ಟಿಯಿಂದ ಸರಿ ಅನ್ನುವ ತೀರ್ಪು ನೀಡಿದೆ. ಅದೇ ಇತ್ತೀಚಿನ ಉದಾಹರಣೆ ನೀಡುವುದಿದ್ದರೆ ಮೇಾದಿಯವರ ಸರ್ಕಾರ  ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ   ಸಂವಿಧಾನದ 370  ಮತ್ತು 35A ವಿಧಿಯನ್ನು ಸಂವಿಧಾನದಿಂದ ತೆಗೆದು ಹಾಕಿದ ಸಂದರ್ಭದಲ್ಲಿ ಕೂಡಾ ಸುಪ್ರೀಂ ತನ್ನ ತೀಪು೯ ಸರಕಾರದ ಪರವಾಗಿ ನೀಡಿದೆ.ಅದೇರೀತಿ ಚುನಾವಣಾ ಬಾಂಡ್ ಕುರಿತಾಗಿ ಸ್ವಷ್ಟವಾದ ಆಕ್ಷೇಪವನ್ನು ಎತ್ತಿದೆ.

ಇಲ್ಲಿ ನಾವು ಪ್ರಮುಖವಾಗಿ ಗಮನಿಸ ಬೇಕಾದ ವಿಚಾರವೆಂದರೆ ಸರಕಾರ ಸಂವಿಧಾನಕ್ಕೆ ತಂದ ತಿದ್ದುಪಡಿ ಸಂವಿಧಾನ ಬಾಹಿರವೊ ಅಥವಾ ಅನುಸಾರವೊ ಅನ್ನುವುದನ್ನು ನಿಷ್ಪಕ್ಷಪಾತವಾಗಿ ವಿಮಶಿ೯ಸುವ ನ್ಯಾಯಾಂಗ ಪ್ರಬುದ್ಧತೆಯಿಂದ ಮತ್ತು ಸ್ವಾತಂತ್ರ್ಯ ವಾಗಿರ ಬೇಕು .ಈ ಸ್ವಾಯತ್ತತೆ ಪ್ರಾಮಾಣಿಕತೆ ನ್ಯಾಯಾಂಗ ವ್ಯವಸ್ಥೆ ಮೂಡಿ ಬರುವಂತೆ ಪರಿಸರ ಸೃಷ್ಟಿ ಮಾಡುವುದು ನಮ್ಮ ಸರ್ಕಾರದ ಆದ್ಯ ಕತ೯ವ್ಯ.ಅಲ್ಲಿ ಯಾವುದೇ ತರದಲ್ಲಿ ಕಾರ್ಯಾಂಗದ ಅಥವಾ ಶಾಸಕಾಂಗಗ ಹಸ್ತಕ್ಷೇಪ ಇರ ಬಾರದು ಅನ್ನುವುದು ನಮ್ಮೆಲ್ಲರ ಧ್ವನಿ ಅನ್ನುವುದನ್ನು ಮರೆಯಬಾರದು. ಸುಮಾರು 70ರ ದಶಕದಲ್ಲಿ ಇಂದಿರಾ ಗಾಂಧಿಯವರು ಸುಪ್ರೀಂ ಕೇೂಟಿ೯ನ ಮುಖ್ಯ ನ್ಯಾಯಾಧೀಶರ ನೇಮಕಾತಿ ಸಂದರ್ಭದಲ್ಲಿ ಸೇವಾ ಹಿರಿತನ ಗಾಳಿಗೆ ತೂರಿ ಕಿರಿಯ ನ್ಯಾಯಾದೀಶರನ್ನು ನೇಮಕಾತಿ  ಮಾಡಿದಾದ ಜಸ್ಟೀಸ್ ಕೆ.ಎಸ್.ಹೆಗ್ಡೆ ಅಂತಹ ಹಿರಿಯ ನ್ಯಾಯಾಧೀಶರು ರಾಜೀನಾಮೆ ಕೊಟ್ಟು ಹೊರಗೆ ಬಂದಿರುವುದನ್ನು ನಾವಿಂದೂ ಮರೆತಿಲ್ಲ..ಇದನ್ನು ಬಿಜೆಪಿಗರು ಖಂಡಿತವಾಗಿಯೂ ಮರೆಯಲಾರರು.ಅದೇ ಇಂದು ನ್ಯಾಯಾಧೀಶರ ನೇಮಕಾತಿ ಕೇೂಲಿಜಿಯಂ ನಲ್ಲಿ  ಕೇಂದ್ರ ಸರ್ಕಾರ ಪ್ರವೇಶ ಮಾಡುವುದುಕೂಡಾ ಅಷ್ಟೇ  ಆಕ್ಷೇಪಾಹ೯ ಬೆಳವಣಿಗೆ.ಒಂದು ವೇಳೆ ಈ ನ್ಯಾಯಾಂಗದ ನೇಮಕಾತಿಯಲ್ಲಿ ಸ್ವಾಯತ್ತತೆಯನ್ನು ಕಾಪಾಡದೇ ಹೇುಾದರೆ ನಮ್ಮ ಸಂವಿಧಾನ  ಎಷ್ಟೇ ಲಿಖಿತ ವಾಗಿರಲಿ ಕಠಿಣ ವಾಗಿಲಿ ನಮ್ಮ ಸಂವಿಧಾನಕ್ಕೆ ಯಾವುದೇ ರಕ್ಷಣೆ ಇಲ್ಲದೆ ಹೇೂಗ ಬಹುದು.ಇದು ಅತಿ ದೊಡ್ಡ ಅಪಾಯ ನಮ್ಮ ಸಂವಿಧಾನಕ್ಕೆ ಮಾತ್ರವಲ್ಲ  ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೂ ಹೌದು.ಹಾಗಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಮೂಗು ತೂರಿಸದಂತೆ ನೇೂಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಜವಾಬ್ದಾರಿಯೂ ಹೌದು.

ಪಾಕಿಸ್ತಾನದಂತಹ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಲು ಅಲ್ಲಿನ ಸರಕಾರಗಳು ಮಾಡಿದ ಮೊದಲ ಕೆಲಸವೆಂದರೆ ಅಲ್ಲಿನ ನ್ಯಾಯಾಂಗದ ಹಲ್ಲುಗಳನ್ನು ಮೊದಲು ಮುರಿದು ಹಾಕಿ ಮತ್ತೆ ಸಂವಿಧಾನವನ್ನು ಕೈಯಲ್ಲಿ ಮುಟ್ಟದೆ ಕಸದ ಬುಟ್ಟಿಗೆ ಬಿಸಾಡಿದ್ದು ಅನ್ನುವುದನ್ನು ನಾವು  ಮರೆಯಲೇ ಬಾರದು.

ಹಾಗಾಗಿ ತಿದ್ದುಪಡಿ ಮಾಡುವುದರಿಂದ ಸಂವಿಧಾನಕ್ಕೆ ಅಪಾಯವಲ್ಲ ಸಂವಿಧಾನದ ಸಂರಕ್ಷಣೆಗಾಗಿರುವ ಸಂವಿಧಾನದ ರಕ್ಷಣೆ ಮತ್ತು ಪರಿಹಾರದ (32 ರಿಂದ 35 ರ ಅನುಚ್ಛೇದ ) ಸಂರಕ್ಷಣೆಗಾಗಿರುವ ಸ್ವಾಯತ್ತತೆಯ ಸಂಸ್ಥೆಗಳ ಮೇಲೆ  ಕೇಂದ್ರ ಸರ್ಕಾರ ಯಾವುದೇ ಗದಾಪ್ರಹಾರ ಮಾಡದಂತೆ ನೇೂಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಅನ್ನುವುದನ್ನುನಾವುಮರೆಯಲೇ ಬಾರದು.ನಮ್ಮ  ನಿಮ್ಮ ಪ್ರೀತಿಯ ಸರ್ಕಾರ ಯಾವುದೇ ಅಧಿಕಾರಕ್ಕೆ ಬರಲಿ ಈ ಎಚ್ಚರಿಕೆ ನಾವು ವಹಿಸದೇ ಹೇೂದರೆ ಮುಂದಿನ ದಿನಗಳಲ್ಲಿ  ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯ ಕಟ್ಟಿಟ ಬುತ್ತಿ..ಅನ್ನುವುದನ್ನು ಮರೆಯದಿರಿ.

ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ರಾಜಕೀಯ ವಿಶ್ಲೇಷಕರು

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!