spot_img
Tuesday, March 31, 2026
spot_img

ಅಡ್ಯಾರ್‌ ಬೊಂಡ ಫ್ಯಾಕ್ಟರಿಯ ಎಳನೀರನ್ನು ಸೇವಿಸಿ ಬರೋಬ್ಬರಿ 137 ಮಂದಿ ಅಸ್ವಸ್ಥ : ಫ್ಯಾಕ್ಟರಿ ಬಂದ್‌ಗೆ ಆದೇಶ

ಜನಪ್ರತಿನಿಧಿ (ಮಂಗಳೂರು) : ʼಅಡ್ಯಾರ್‌ ಎಳನೀರು ಹಾಗೂ ನ್ಯಾಚುರಲ್ ಐಸ್ ಕ್ರೀಂ ಮಾರಾಟ ಸಂಸ್ಥೆಯಾದ ಬೊಂಡ ಫ್ಯಾಕ್ಟರಿ’ಯ ಎಳನೀರನ್ನು ಸೇವಿಸಿ ಬರೋಬ್ಬರಿ 137 ಜನರು ಅನಾರೋಗ್ಯಕ್ಕೀಡಾಗಿರುವ ಪ್ರಕರಣಕ್ಕೆ ಸಂಬಂಧೀಸಿದಂತೆ ಫ್ಯಾಕ್ಟರಿ ಬಂದ್‌ ಮಾಡುವಂತೆ ಆದೇಶ ನೀಡಲಾಗಿದೆ. ಹೌದು ಫಾಕ್ಟರಿಯಲ್ಲಿ ಎಳನೀರನ್ನು ಸೇವಿಸಿ  137  ಮಂದಿ ಅಸ್ವಸ್ಥರಾದ ಬೆನ್ನಲ್ಲೇ ಫ್ಯಾಕ್ಟರಿಯನ್ನು ಬಂದ್ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಮ್ಮಯ್ಯ ಆದೇಶ ಮಾಡಿದ್ದಾರೆ.

ಎಪ್ರಿಲ್ 8ರಂದು ಬೊಂಡ ಫ್ಯಾಕ್ಟರಿ ಎಳನೀರು ಖರೀದಿಸಿದ ಕಣ್ಣೂರು ಹಾಗೂ ತುಂಬೆ ನಿವಾಸಿಗಳು ಮರುದಿನ ಬೆಳಿಗ್ಗೆ ವಾಂತಿ-ಭೇದಿಯಾಗಿ ತೀವ್ರವಾಗಿ ಅಸ್ವಸ್ಥರಾಗಿದ್ದರು. ಪ್ರತಿ ಲೀಟರ್‌ಗೆ 40 ರೂ. ಬೆಲೆಯಿದೆ. ಇತ್ತೀಚೆನ ವರ್ಷಗಳಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದ್ದ ಈ ಫ್ಯಾಕ್ಟರಿ ಜನರ ವಿಶ್ವಾಸವನ್ನು ಗಳಿಸಿತ್ತು. ಇಲ್ಲಿ ಸಿಗುವ ಎಳನೀರು ಹಾಗೂ ಎಳನೀರಿನಿಂದ ತಯಾರು ಮಾಡುತ್ತಿದ್ದ ಐಸ್‌ಕ್ರೀಂ ಗಾಗಿ ಸರಧಿ ಸಾಲಿನಲ್ಲಿ ನಿಂತು ಖರೀದಿಸುತ್ತಿದ್ದರು.

ಸದ್ಯ, ಈ ಫ್ಯಾಕ್ಟರಿಯ ಎಳನೀರು ಸೇವಿಸಿ 137 ಮಂದಿ ಪೈಕಿ 84 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದರೆ 53 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿಯವರೆಗೆ ಸುಮಾರು 23 ರೋಗಿಗಳನ್ನು ಡಿಸ್ಚಾರ್ಜ್ ಮಾಡಲಾಗಿದೆ. ಎಲ್ಲಾ ರೋಗಿಗಳ ಆರೋಗ್ಯ ಸ್ಥಿರವಾಗಿದ್ದು, ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯ ತನಿಖೆಯ ದೃಷ್ಟಿಯಿಂದ ಫ್ಯಾಕ್ಟರಿಯನ್ನು ಮುಚ್ಚಲಾಗಿದ್ದು ಆರೋಗ್ಯ ಅಧಿಕಾರಿಗಳು ಸಂತ್ರಸ್ತ ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!