spot_img
Wednesday, April 1, 2026
spot_img

ನಿಮ್ಮ ಹಣೇಬರಹವನ್ನು ಈಶ್ವರಪ್ಪ ಬೀದಿಯಲ್ಲಿಟ್ಟು ಹರಾಜು ಹಾಕುತ್ತಿದ್ದಾರೆ : ಬಿ.ವೈ.ರಾಘವೇಂದ್ರಗೆ ಮಧು ಬಂಗಾರಪ್ಪ ಲೇವಡಿ

ಜನಪ್ರತಿನಿಧಿ (ಶಿವಮೊಗ್ಗ) : ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕೆ.ಎಸ್. ಈಶ್ವರಪ್ಪ ಅವರ ಸ್ಪರ್ಧೆಯಿಂದ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ ಆಗುವುದಿಲ್ಲ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಇಂದು(ಶುಕ್ರವಾರ) ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಧು ಬಂಗಾರಪ್ಪ, ‘ತಮ್ಮನ್ನು ರಾಜಕೀಯವಾಗಿ ಹಾಳು ಮಾಡಿದವರ ವಿರುದ್ಧ ಈಶ್ವರಪ್ಪ ಹೋರಾಡುತ್ತಿದ್ದಾರೆ. ಅದು ಬಿಜೆಪಿಯೊಳಗಿನ ಆಂತರಿಕ ಕಲಹ. ಈಶ್ವರಪ್ಪ ಬಿಜೆಪಿಯ ಬಿ ಟೀಂ. ಈಶ್ವರಪ್ಪ ಅವರನ್ನು ವ್ಯಕ್ತಿಗತವಾಗಿ ನೊಡಿದರೆ ಬೇಸರವಾಗುತ್ತದೆ. ಆದರೆ ಅವರ ಸಿದ್ದಾಂತ ನೋಡಿ ಮರುಕ ಹುಟ್ಟುತ್ತಿಲ್ಲ’ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ವಿರುದ್ಧ ಹಗುರವಾಗಿ ಮಾತಾಡುವುದು, ಟೀಕೆ ಮಾಡುವುದು ನಿಲ್ಲಿಸಿ. ಗೀತಾ ವಿಷಯಕ್ಕೆ ಬರಬೇಡಿ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ತಾಕೀತು ಮಾಡಿದ ಮಧು ಬಂಗಾರಪ್ಪ, ‘ನಿಮ್ಮ ಹಣೇಬರಹವನ್ನು ಈಶ್ವರಪ್ಪ ಬೀದಿಯಲ್ಲಿಟ್ಟು ಹರಾಜು ಹಾಕುತ್ತಿದ್ದಾರೆ. ಮೊದಲು ಅವರಿಗೆ ಉತ್ತರಕೊಡಿ ಎಂದು ಲೇವಡಿ ಮಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!