spot_img
Friday, April 25, 2025
spot_img

ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ: ಸಿಎ/ ಸಿಎಸ್ ಆಸಕ್ತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ

ಕುಂದಾಪುರ: ಪಿಯುಸಿ ನಂತರ ಪ್ರೊಫೆಷನಲ್ ಕೋರ್ಸುಗಳಾದ ಸಿಎ /ಸಿಎಸ್ ಕೋರ್ಸುಗಳನ್ನು ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ ಕಳೆದ ಕೆಲವು ವರ್ಷಗಳಿಂದ ಗುಣಮಟ್ಟದ ತರಬೇತಿ ನೀಡುತ್ತ ಬಂದಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) , ಆಸಕ್ತ ವಿದ್ಯಾರ್ಥಿಗಳಿಗಾಗಿ ನೂತನ ಬ್ಯಾಚ್ ಆರಂಭಿಸುತ್ತಿದ್ದು, ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಪದವಿ ಜೊತೆಗೆ ಸಿಎ/ಸಿಎಸ್ ಪರೀಕ್ಷೆಯನ್ನು ಪೂರೈಸಲು ಅನುಕೂಲವಾಗುವ ರೀತಿಯಲ್ಲಿ ತರಗತಿಗಳನ್ನು ಸಂಸ್ಥೆ ನೆಡೆಸುತ್ತಿದ್ದು ವಿದ್ಯಾರ್ಥಿಗಳು ಪದವಿಯೊಂದಿಗೆ ಸಿಎ/ಸಿಎಸ್ ಪರೀಕ್ಷೆಯನ್ನು ತೇರ್ಗಡೆಹೊಂದಲು ಸಹಕಾರಿಯಾಗುತ್ತದೆ.

ಅಖಿಲ ಭಾರತ ಮಟ್ಟದ ರ‍್ಯಾಂಕ್‌ಗಳು: ಶಿಕ್ಷ ಪ್ರಭ ಸಂಸ್ಥೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಎ /ಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗು ವುದಲ್ಲದೆ ಅಖಿಲ ಭಾರತಕ್ಕೆ ರ‍್ಯಾಂಕ್ಗಳಿಸುವುದರ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿದ್ದಾರೆ ಸಂಸ್ಥೆಯ ಪ್ರಥಮ ಬ್ಯಾಚ್ನಲ್ಲೇ ಸಿಎ ಫೌಂಡೇಶನ್ ಪರೀಕ್ಷೆಗೆ ಅಖಿಲ ಭಾರತಕ್ಕೆ 21ನೇ ಮತ್ತು 27ನೇ ರ‍್ಯಾಂಕ್ ಜೊತೆಗೆ ಕರ್ನಾಟಕಕ್ಕೆ ಪ್ರಥಮ ರ‍್ಯಾಂಕ್ಗಳಿಸಿದ ಹೆಗ್ಗಳಿಕೆ ಸಂಸ್ಥೆಗೆ ಇದೆ. ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅಖಿಲ ಭಾರತಕ್ಕೆ 29ನೇ ರ‍್ಯಾಂಕ್ ಗಳಿಸಿ ಸಂಸ್ಥೆ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲೂ ರಾಷ್ಟ್ರಮಟ್ಟದ ಸಾಧನೆ ತೋರಿದೆ. ಶಿಕ್ಷ ಪ್ರಭ ಸಂಸ್ಥೆಯ ಸಿಎಸ್  ಫೌಂಡೇಶನ್ ಬ್ಯಾಚ್ ಸತತ ಎರಡು ಬಾರಿ ಶೇಕಡ 100 ಫಲಿತಾಂಶ ಪಡೆಯುವುದರ ಮೂಲಕ ದಾಖಲೆ ಸೃಷ್ಟಿಸಿದೆ. 2023-24ರ ಸಿಎಸ್‌ ಎಕ್ಸಿಕ್ಯೂಟಿವ್‌ ಪರೀಕ್ಷೆಯಲ್ಲಿ 7 ವಿದ್ಯಾರ್ಥಿಗಳು ತೇರ್ಗಡೆ ಹೊಂದುವುದರ ಮೂಲಕ ಉಡುಪಿ ಜಿಲ್ಲೆಯಲ್ಲಿ ದಾಖಲೆಯ ಫಲಿತಾಂಶಕ್ಕೆ ಕಾರಣರಾದರು. ಸಂಸ್ಥೆಯಲ್ಲಿ ಭೋಧಕ ಸಿಬ್ಬಂಧಿಗಳಾಗಿ ಅನುಭವಿ ಲೆಕ್ಕಪರಿಶೋಧಕರು ಮತ್ತು ಕಂಪೆನಿ ಸೆಕ್ರೆಟರಿಯವರು ಆಗಮಿಸುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆತು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯಲು ಸಹಕಾರಿಯಾಗಿದೆ. ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೇಶದ ನಾನಾ
ಭಾಗಗಳಲ್ಲಿ ಉನ್ನತವಾದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪದವಿಯೊಂದಿಗೆ ಸಿಎ/ಸಿಎಸ್:
ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳು ಸಿಎ/ಸಿಎಸ್‌ ಕೋರ್ಸುಗಳನ್ನು ಪದವಿ ಶಿಕ್ಷಣದ ಜೊತೆಗೆ ಪೂರ್ಣಗೊಳಿಸುವ ಅವಕಾಶವಿದ್ದು, ಸಂಸ್ಥೆಯಲ್ಲಿ ಅದಕ್ಕೆ ತಕ್ಕಂತೆ ಬ್ಯಾಚ್‌ಗಳ ಸಮಯ ಮತ್ತು ತರಗತಿಗಳನ್ನು ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಪದವಿಯೊಂದಿಗೆ ಸಿಎ/ಸಿಎಸ್‌ ಕೋರ್ಸುಗಳನ್ನು ಯಾವುದೇ ಒತ್ತಡವಿಲ್ಲದೆ ಪೂರ್ಣಗೊಳಿಸಲು ಸಹಕಾರಿಯಾಗಲಿದೆ. ದೂರ ಶಿಕ್ಷಣ ಮತು ಸಂಧ್ಯಾ ಕಾಲೇಜಿನಲ್ಲಿ ಪದವಿ ಓದುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬ್ಯಾಚ್‌ಗಳು ಲಭ್ಯವಿದ್ದು ಅವರ ಅನುಕೂಲಕ್ಕೆ ಸರಿಯಾಗಿ ತರಗತಿಗಳನ್ನು ನಿಗದಿಪಡಿಸಲಾಗಿದೆ.

ನೊಂದಣಿ ಆರಂಭ: ಶಿಕ್ಷ ಪ್ರಭ ಸಂಸ್ಥೆಯಲ್ಲಿ ಈಗಾಗಲೇ ಸಿಎ ಫೌಂಡೇಶನ್ ಮತ್ತು ಸಿಎಸ್ಇಇಟಿ(ಫೌಂಡೇಶನ್) ತರಗತಿಗಳಿಗೆ ನೋಂದಣಿ
ಆರಂಭವಾಗಿದ್ದು ಏಪ್ರಿಲ್ 25ರಿಂದ ತರಗತಿಗಳು ಆರಂಭವಾಗಲಿದೆ. ಈ ಬ್ಯಾಚ್ನ ವಿದ್ಯಾರ್ಥಿಗಳನ್ನು ಡಿಸೆಂಬರ್‌ನಲ್ಲಿ ನಡೆಯುವ ಸಿಎ ಫೌಂಡೇಶನ್‌  ಪರೀಕ್ಷೆಗೆ ಮತ್ತು ನವೆಂಬರ್‌ನಲ್ಲಿ ನೆಡೆಯುವ ಸಿಎಸ್ ಫೌಂಡೇಶನ್ ಪರೀಕ್ಷೆಗೆ ತರಬೇತಿ ನೀಡಿ ಸಿದ್ಧಗೊಳಿಸಲಾಗುವುದು. ಕೆಲವೇ ಸೀಟುಗಳು ಮಾತ್ರ ಲಭ್ಯವಿದ್ದು ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡರೆ ಪದವಿ ಜೊತೆಗೆ ಸಿಎ /ಸಿಎಸ್ ಪರೀಕ್ಷೆಯ ತರಬೇತಿ ಪಡೆದು ಉತ್ತೀರ್ಣರಾಗಬಹುದು. ಸಂಸ್ಥೆಯಲ್ಲಿ ರಾಷ್ಟ್ರ ಹಾಗೂ ರಾಜ್ಯದ ನಾನಾ ಭಾಗಗಳಿಂದ ಅನುಭವಿ ತರಬೇತುದಾರರಿಂದ ನಿರಂತರ ತರಬೇತಿ ವಿದ್ಯಾರ್ಥಿಗಳಿಗೆ ದೊರಕುವುದರಿಂದ ಅತ್ಯುತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಲಿದೆ. ಸಿಎ/ಸಿಎಸ್ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ ನಿರಂತರ ಪ್ರೋತ್ಸಾಹ ಮತ್ತು ತರಬೇತಿ ನೀಡಿದ ರಾಜ್ಯದ ಕೆಲವೇ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಶಿಕ್ಷ ಪ್ರಭ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಮನ್ನಣೆ ನೀಡುತ್ತಿದೆ.

ಕೋರ್ಸುಗಳ ಕುರಿತಾದ ಮಾಹಿತಿಗಾಗಿ ಕುಂದಾಪುರ ಕುಂದೇಶ್ವರ ರಸ್ತೆಯ ಸಿರಿ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ
ಪ್ರಭ ಅಕಾಡೆಮಿಯ ಕಚೇರಿಗೆ ಭೇಟಿ ನೀಡಬಹುದು ಅಥವಾ WWW.SHIKSHAPRABHA.COM ಗೆ ಲಾಗಿನ್ ಆಗಬಹುದು ಎಂದು ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!