spot_img
Wednesday, January 22, 2025
spot_img

ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆಯನ್ನು ಅನುಮತಿಸಿದ ಪಂಜಾಬ್‌ ವಿಶ್ವವಿದ್ಯಾಲಯ !

ಜನಪ್ರತಿನಿಧಿ (ನವ ದೆಹಲಿ) : ಛಂಡಿಗಢದಲ್ಲಿರುವ ಪಂಜಾಬ್‌ ವಿಶ್ವವಿದ್ಯಾಲಯವು ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡಲು ನಿಬಂಧನೆಗಳನ್ನು ಹೊರಡಿಸಿದೆ. ೨೦೨೪-೨೫ರ ಶೈಕ್ಷಣಿಕ ಅವಧಿಗೆ ಮುಂಬರುವ ಸೆಮಿಸ್ಟರ್‌ಗಳಿಂದ ಈ ರಜೆಯನ್ನು ಪಡೆಯಬಹುದು ಎಂದು ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.

ಪಂಜಾಬ್‌ ವಿಶ್ವವಿದ್ಯಾಲಯದ ಉಪಕುಲಪತಿ  ವಿದ್ಯಾರ್ಥಿನಿಯರಿಗೆ ಋತುಚಕ್ರದ ಸಂದರ್ಭದಲ್ಲಿ ರಜೆ ನೀಡುವ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ. ಸೆಮಿಸ್ಟರ್‌ ಒಂದರಲ್ಲಿ ವಿದ್ಯಾರ್ಥಿನಿಯರು ಈ ಸಮಸ್ಯೆ ಕಾರಣಕ್ಕೆ ನಾಲ್ಕು ದಿನಗಳ ರಜೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಡಿಪಾರ್ಟ್‌ಮೆಂಟ್‌ನ ಚೇರ್‌ ಪರ್ಸನ್‌ ಅನುಮತಿಯನ್ನು ಪಡೆದು ವಿದ್ಯಾರ್ಥಿನಿ ತಿಂಗಳಿಗೆ ಒಂದು ದಿನವನ್ನು ಈ ಸಮಸ್ಯೆಯ ಕಾರಣಕ್ಕೆ ಪಡೆದುಕೊಳ್ಳಬೇಕಾಗುತ್ತದೆ. ಈ ರಜಾ ದಿನ ಹಾಜರಾತಿಯಲ್ಲಿ ಗೈರು ಎಂದು ಪರಿಗಣಿಸಲ್ಪಡುವುದಿಲ್ಲ. ಒಂದು ವಿಶೇಷ ಫಾರ್ಮ್‌ ಮೂಲಕ ಡಿಪಾರ್ಟ್‌ಮೆಂಟ್‌ ನ ಚೇರ್‌ ಪರ್ಸನ್‌ ಅನುಮತಿ ಪಡೆದುಕೊಂಡರೇ ಆ ರಜಾ ಪಡೆದುಕೊಂಡ ದಿನವನ್ನು ಗೈರೆಂದು ಪರಿಗಣಿಸುವುದಿಲ್ಲ ಎಂದು ವಿಶ್ವವಿದ್ಯಾಲಯ ಎಂದು ಹೇಳಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!