Saturday, October 12, 2024

ಡಿಎಂಕೆ ರಾಜಕೀಯ ಅಜೆಂಡಾ ʼಡಿವೈಡ್‌ ಡಿವೈಡ್‌ ಡಿವೈಡ್‌ʼ : ಪ್ರಧಾನಿ ನರೇಂದ್ರ ಮೋದಿ ಟೀಕೆ

ಜನಪ್ರತಿನಿಧಿ (ಚೆನ್ನೈ) : ಡಿಎಂಕೆ ರಾಜಕೀಯ ಅಜೆಂಡಾ ಡಿವೈಡ್‌ ಡಿವೈಡ್‌ ಡಿವೈಡ್‌ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಡಿಎಂಕೆ ಭ್ರಷ್ಟಾಚಾರದ ಹಕ್ಕುಸ್ವಾಮ್ಯ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿದ್ದಾರೆ.

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಡಿಎಂಕೆ ತಮಿಳು ವಿರೋಧಿ ಸಂಸ್ಕೃತಿಯನ್ನು ಒತ್ತಾಯ ಪೂರ್ವಕವಾಗಿ ಹೇರುತ್ತಿದೆ ಎಂದು ಆರೋಪಿಸಿದ್ದಾರೆ.

ಯುವಜನರ ಅವಕಾಶಗಳನ್ನು ಡಿಎಂಕೆ ನಿರಾಕರಿಸುತ್ತಿದೆ. ಕುಟುಂಬ ರಾಜಕಾರಣದ ಬಲೆಯಲ್ಲೇ ತಮಿಳುನಾಡನ್ನು ಸಿಲುಕಿಸಲು ಡಿಎಂಕೆ ಪ್ರಯತ್ನಿಸುತ್ತಿದೆ. ಡಿಎಂಕೆ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಮೂರು ಮಾನದಂಡಗಳಿವೆ. ಕುಟುಂಬ ರಾಜಕಾರಣ, ತಮಿಳು ವಿರೋಧಿ ಸಂಸ್ಕೃತಿ ಹಾಗೂ ಭ್ರಷ್ಟಾಚಾರ. ಈ ಮೂರು ಮಾನದಂಡಗಳಿದ್ದರೇ, ಡಿಎಂಕೆ ಇಂದ ಸ್ಪರ್ಧಿಸಬಹುದು ಎಂದು ಮೋದಿ ಕಟುವಾಗಿ ಟೀಕಿಸಿದರು.

ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿದೆ ಎಂದು ಡಿಎಂಕೆ ಹಾಗೂ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದ ಮೋದಿ, ಮೀನುಗಾರರ ಬಗ್ಗೆ ಡಿಎಂಕೆಯ ಸಹಾನುಭೂತಿ ನಕಲಿ ಎಂದು ಹೇಳಿದ್ದಾರೆ. ಎನ್‌ಡಿಎ ಸರ್ಕಾರವು ಮೀನುಗಾರರಿಗೆ ಸಹಾಯಹಸ್ತ ಚಾಚಿದೆ ಎಂದು ಹೇಳಿದ್ದಾರೆ.

ಇನ್ನು ಎನ್‌ಸಿಬಿಯಿಂದ ಬಂಧಿತರಾಗಿದ್ದ ಡ್ರಗ್ಸ್‌ ಸರಬರಾಜುದಾರರು ಯಾರ ಕುಟುಂಬದ ಆಪ್ತ ಬಳಗಕ್ಕೆ ಸೇರಿದವರು  ಎನ್ನುವುದು ಗೊತ್ತಿರುವ ವಿಷಯ ಎಂದು ಮೋದಿ ಪರೋಕ್ಷವಾಗಿ ಸಿಎಂ ಸ್ಟ್ಯಾಲಿನ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!