Tuesday, April 30, 2024

ದಾಖಲೆ ನೋಡಿದರೆ, ಇಲ್ಲಿ ಯಾರು ಕೆಲಸ ಮಾಡಿದ್ದಾರೆಂದು ತಿಳಿಯುತ್ತದೆ : ಪರೋಕ್ಷವಾಗಿ ಬಿಜೆಪಿಗೆ ಟಾಂಗ್‌ ನೀಡಿದ ಜೆಪಿ ಹೆಗ್ಡೆ

ಜನಪ್ರತಿನಿಧಿ (ಬೀಜಾಡಿ) : ನಾನು ಮೀನುಗಾರಿಕಾ ಇಲಾಖೆಯ ಸಚಿವನಾಗಿದ್ದಾಗ ಮೀನುಗಾರರಿಗೆ ಅನುಕೂಲವಾಗುವ ಹಾಗೆ ಯೋಜನೆಗಳನ್ನು ಮಾಡಿದ್ದೇನೆ‌. ಸಚಿವನಾಗಿದ್ದಾಗಲೂ, ಸಚಿವನಾಗದೇ ಇದ್ದಾಗಲೂ ಮೀನುಗಾರರ ನಿರಂತರ ಸಂಪರ್ಕದಲ್ಲಿದ್ದು ಆ ಸಮುದಾಯದ ನೋವು, ಸಂಕಟಗಳಿಗೆ ಧ್ವನಿ ಆಗುವುದಕ್ಕೆ ಪ್ರಯತ್ನ ಮಾಡಿದ್ದೇನೆ. ನಾನು ಮಾಡಿದ ಕೆಲಸಗಳು, ಯೋಜನೆಗಳು ಉಪಕಾರ ಸ್ಮರಣೆಯಾಗಿ ಮತಗಳಾಗಿ ಪರಿವರ್ತನೆಯಾಗವ ವಿಶ್ವಾಸ ಇದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಬಿಜಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಯೋಚನೆ ಮಾಡಿದಾಗ ಯೋಜನೆಗಳು ಮೂಡುತ್ತವೆ. ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯೆಗಳ ಇತ್ಯರ್ಥ, ರೈಲ್ವೇ ಇಲಾಖೆಗೆ ಸಂಬಂಧಿಸಿದಂತೆ ಈ ಭಾಗಕ್ಕೆ ತಂದ ಯೋಜನೆಗಳು,  ಸಮುದ್ರದ ತಡೆಗೋಡೆ ಸೇರಿ ಅನೇಕ ಯೋಜನೆಗಳನ್ನು ಜಿಲ್ಲೆಗಳಿಗೆ ತಂದಿದ್ದೇನೆ. ಉಡುಪಿಯನ್ನು ಜಿಲ್ಲೆಯಾಗಿ ಪರಿವರ್ತಿಸುವಲ್ಲಿ ಶ್ರಮವಹಿಸಿ ಇಲ್ಲಿನ ಜನರಿಗೆ ಅನುಕೂಲವಾಗುವ ಹಾಗೆ ಕೆಲಸ ಮಾಡಿದ್ದೇನೆ. ಹಾಗಾಗಿ ನಾನು ಜಿಲ್ಲೆಗೆ ಕೊಟ್ಟ ಕೆಲಗಳನ್ನು ಜನ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಅದಕ್ಕಾಗಿ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಅವರು(ಬಿಜೆಪಿ) ನಾವು ಮಾಡಿದ್ದೇವೆ ಅಂತ ಹೇಳಿಕೊಳ್ಳಬಹುದು. ದಾಖಲೆ ನೋಡಿದರೇ ಯಾರು ಕೆಲಸ ಮಾಡಿದ್ದಾರೆ ಎನ್ನುವುದು ತಿಳಿಯುತ್ತದೆ. ಮಾಡಿದ ಕೆಲಸವನ್ನು ಜನರ ಮುಂದೆ ಇಟ್ಟು ಮುಂದುವರಿಯಬೇಕಾಗ್ತದೆ. ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಜನರನ್ನು ತಪುಪಿದೆ. ಕಾಂಗ್ರೆಸ್ ‌ಹಿಂದೆ ಜನರಿಗೆ ಅನುಕೂಲವಾಗುವ ಹಾಗೆ ತಂದ ಯೋಜನೆಗಳು, ಮುಂದೆ ತರಲಿರುವ ಯೋಜನೆಗಳನ್ನು ಮತದಾರರಿಗೆ ನೆನಪಿಸುವ ಅಗತ್ಯವಿದೆ. ನಾನು ನನ್ನ ಮುಖವನ್ನೇ ಇಟ್ಟುಕೊಂಡು ಮತ ಕೇಳುತ್ತಿದ್ದೇನೆ. ಬದಲಾವಣೆ ಅನಿವಾರ್ಯವಿದೆ. ಕೆಲಸ ಮಾಡಿದ್ದಕ್ಕೆ ನಿಮ್ಮ ಮತ ಚಲಾಯಿಸಿ ಎಂದು ಕೇಳುತ್ತೇನೆ ಎMದು ಅವರು ಮನವಿ ಮಾಡಿಕೊಂಡರು.

ಚುನಾವಣೆ ಬಂದಾಗ ಶ್ರೀನಿವಾಸ ಪೂಜಾರಿ ಅವರಿಗೆ ಬಿಲ್ಲವರ ನೆನಪಾಗಿದೆ : ಗೋಪಾಲ ಪೂಜಾರಿ ಆಕ್ರೋಶ

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಗೋಪಾಲ ಪೂಜಾರಿ, ಉಡುಪಿಯಲ್ಲಿ ಹೊಸ ಬದಲಾವಣೆ ಆಗಿದೆ. ಜಯಪ್ರಕಾಶ್ ಶೆಟ್ಟಿ ಅವರನ್ನು ಗೆಲ್ಲಿಸಬೇಕೆಂಬ ಭಾವನೆಯಲ್ಲಿ ಜನರಿದ್ದಾರೆ. ಶ್ರೀನಿವಾಸ ಪೂಜಾರಿ ಬೈಂದೂರಿನಲ್ಲಿ ಭಯೋತ್ಪಾದಕ ಎಂದು ಕರೆದರು. ಚುನಾವಣೆ ಬಂದಾಗ ಶ್ರೀನಿವಾಸ ಪೂಜಾರಿ ಅವರಿಗೆ ಬಿಲ್ಲವರ ನೆನಪಾಗಿದೆ. ಬಿಜೆಪಿ ಹಿಂದುಳಿದ ನಾಯಕತ್ವವನ್ನು ಎಂದೂ ಸಹಿಸುವುದಿಲ್ಲ. ಹಿಂದುಳಿದ ವರ್ಗದವರು ಇಲ್ಲಿ ಶ್ರೀನಿವಾಸ ಪೂಜಾರಿ ಅವರಿಗೆ ಸೋಲಿಸಬೇಕು‌ ಎಂದು ಒತ್ತಾಯಿಸಿದರು‌.

ಶ್ರೀನಿವಾಸ ಪೂಜಾರಿ ಅವರೇ ನಮ್ಮ ನವಿಲುಗರಿ ಮರಿ ಹಾಕಿದೆ. ಕಾಂಗ್ರೆಸ್ ನ ಐದು ಗ್ಯಾರಂಟಿಗಳು ಮನೆಮನೆಗೆ ತಲುಪಿವೆ. ಶ್ರೀನಿವಾಸ ಪೂಜಾರಿ ಅವರೇ, ನಿಮ್ಮ ಕುಚಲಕ್ಕಿ ಮರಿ ಹಾಕುವುದು ಯಾವಾಗ  ಹೇಳಿ ಎಂದು ಒತ್ತಾಯಿಸಿದ್ದಲ್ಲದೇ, ನಿಮ್ಮ ಮನೆ ಸಮಾಜ ಕಲ್ಯಾಣ ಇಲಾಖೆಯಿಂದ ಆಗಿದ್ದು ಎಂಬ ವಿಚಾರವನ್ನು ಯಾಕೆ ಗುಟ್ಟು ಮಾಡ್ತೀರಿ ? ಸುಳ್ಳು ಹೇಳುವುದನ್ನು ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಅವರು ಆಗ್ರಹಿಸಿದರು.

ಸಭೆಯಲ್ಲಿ  ಕಾಂಗ್ರೆಸ್‌ ಮುಖಂಡರಾದ, ದಿನೇಶ್‌ ಹೆಗ್ಡೆ ಮೊಳಹಳ್ಳಿ ಅಶೋಕ್ ಪೂಜಾರಿ, ಮಲ್ಯಾಡಿ ಶಿವರಾಮ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಜು ಪೂಜಾರಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ನ ಹರಿಪ್ರಾದ್ ಶೆಟ್ಟಿ ಕಾನ್ಮಕ್ಕಿ, ಮದನ್‌ ಕುಮಾರ್‌ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!