Wednesday, September 11, 2024

ಬಿಜೆಪಿ ಉಚ್ಛಾಟಿತ ನಾಯಕ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಈಶ್ವರಪ್ಪ ಅವರ ಒಟ್ಟು ಆಸ್ತಿ 33.5 ಕೋಟಿ ರೂ. !

ಬಿಜೆಪಿ ಉಚ್ಛಾಟಿತ ನಾಯಕ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆಎಸ್‌ ಈಶ್ವರಪ್ಪ ಅವರು ತಮ್ಮಲ್ಲಿ 33.5 ಕೋಟಿ ರೂ. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ತಮ್ಮ ಚರಾಸ್ತಿ 4.28 ಕೋಟಿ ರೂ., ಸ್ಥಿರಾಸ್ತಿ 22.35 ಕೋಟಿ ರೂ., ಪತ್ನಿ ಚರಾಸ್ತಿ 3.77 ಕೋಟಿ ರೂ. ಹಾಗೂ ಸ್ಥಿರಾಸ್ತಿ 3.10 ಕೋಟಿ ರೂ. ಸೇರಿ ಒಟ್ಟು 33.5 ಕೋಟಿ ರೂ. ಆಸ್ತಿಯನ್ನು ಕೆಎಸ್‌ ಈಶ್ವರಪ್ಪ ಘೋಷಿಸಿದ್ದಾರೆ.

ವಾರ್ಷಿಕ ಆದಾಯ ಹತ್ತಿರ ಹತ್ತಿರ 1 ಕೋಟಿ ರೂ.!

2022-23ರಲ್ಲಿ ತಮ್ಮ ವಾರ್ಷಿಕ ಆದಾಯ 98.92 ಲಕ್ಷ ರೂ. ಎಂದು ಈಶ್ವರಪ್ಪ ಅಫಿಡವಿಟ್‌ನಲ್ಲಿ ಹೇಳಿದ್ದು, ಪತ್ನಿ ಜಯಲಕ್ಷ್ಮೀ ಆದಾಯ 32.50 ಲಕ್ಷ ರೂ. ಎಂದು ತಿಳಿಸಿದ್ದಾರೆ. ಇನ್ನು ತಮಗೆ ಅವಲಂಬಿತರು ಯಾರೂ ಇಲ್ಲ ಎಂದು ಮಾಜಿ ಡಿಸಿಎಂ ಹೇಳಿದ್ದು, ಯಾವುದೇ ಪ್ರಕರಣಗಳೂ ತಮ್ಮ ಮೇಲಿಲ್ಲ ಎಂದು ತಮ್ಮ ಅಫಿಡವಿಟ್‌ನಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.

ತಮ್ಮಲ್ಲಿ 25 ಲಕ್ಷ ರೂ. ನಗದು, ಪತ್ನಿ ಕೈಯಲ್ಲಿ 2 ಲಕ್ಷ ರೂ. ನಗದು ಇದೆ ಎಂದು ಈಶ್ವರಪ್ಪ ಹೇಳಿದ್ದಾರೆ. ಬ್ಯಾಂಕ್‌ ಖಾತೆಗಳಲ್ಲಿರುವ ಹಣ, ಮ್ಯೂಚುವಲ್‌ ಫಂಡ್‌, ಕಂಪನಿಗಳಲ್ಲಿ ಮಾಡಿರುವ ಹೂಡಿಕೆ, ನೀಡಿರುವ ಕೈ ಸಾಲ ಸೇರಿ ತಮ್ಮ ಚರಾಸ್ತಿ 4.28 ಕೋಟಿ ರೂ. ಹಾಗೂ ಪತ್ನಿಯ ಚರಾಸ್ತಿ 3.77 ಕೋಟಿ ರೂ. ಎಂದು ಹೇಳಿಕೊಂಡಿದ್ದಾರೆ.

ಅಫಿಡವಿಟ್‌ನಲ್ಲಿ, ಪತಿ-ಪತ್ನಿ ಇಬ್ಬರ ಬಳಿಯಲ್ಲೂ ವಾಹನಗಳಿಲ್ಲ. ಈಶ್ವರಪ್ಪ ಬಳಿ 18.5 ಲಕ್ಷ ರೂ. ಮೌಲ್ಯದ 300 ಗ್ರಾಂ ಬಂಗಾರ, 2 ಕೆಜಿ ಬೆಳ್ಳಿ ಇದ್ದರೆ, ಪತ್ನಿ ಬಳಿ 30 ಲಕ್ಷ ರೂ. ಮೌಲ್ಯದ 500 ಗ್ರಾಂ ಬಂಗಾರ, 5 ಕೆಜಿ ಬೆಳ್ಳಿ ಇದೆ.

ಈಶ್ವರಪ್ಪ ಬಳಿ 1 ಕೃಷಿ ಜಮೀನು, 3 ಕೃಷಿಯೇತರ ಭೂಮಿ (ಪತಿ-ಪತ್ನಿ ಹೆಸರಲ್ಲಿ ಜಂಟಿಯಾಗಿ 1 ಕೃಷಿಯೇತರ ಭೂಮಿ, ಮಗನ ಜೊತೆ ಜಂಟಿಯಾಗಿ 1 ಕೃಷಿಯೇತರ ಭೂಮಿ ಸೇರಿ ಒಟ್ಟು ಮೂರು ಕೃಷಿಯೇತರ ಜಮೀನು), ಬೆಂಗಳೂರಿನಲ್ಲಿ ಎರಡು ವಾಣಿಜ್ಯ ಸಂಕೀರ್ಣಗಳು ಸೇರಿ ಒಟ್ಟು 3 ವಾಣಿಜ್ಯ ಸಂಕೀರ್ಣಗಳು ಹಾಗೂ ಶಿವಮೊಗ್ಗದ ಜಂಟಿಯಾಗಿ ಮೂರು ಅಂತಸ್ತಿನ ವಾಸದ ಮನೆಯನ್ನು ದಂಪತಿ ಹೊಂದಿದ್ದಾರೆ.

6.58 ಕೋಟಿ ರೂ. ಸಾಲ

ಇನ್ನು 5.87 ಕೋಟಿ ರೂ. ಸಾಲ ಹೊಂದಿರುವುದಾಗಿ, ಪತ್ನಿ 70.80 ಲಕ್ಷ ರೂ. ಸಾಲ ಹೊಂದಿರುವುದಾಗಿ ಈಶ್ವರಪ್ಪ ತಿಳಿಸಿದ್ದಾರೆ. ಈ ಮೂಲಕ ದಂಪತಿ 6.58 ಕೋಟಿ ರೂ. ಸಾಲಗಾರರಾಗಿದ್ದಾರೆ.

ತಾವು ಬಿಕಾಂ ಪದವೀಧರ ಎಂದು ಹೇಳಿರುವ ಕೆಎಸ್‌ ಈಶ್ವರಪ್ಪ, ವ್ಯಾಪಾರ ಹಾಗೂ ಉದ್ದಿಮೆ ಪತಿ-ಪತ್ನಿಯ ವೃತ್ತಿ ಎಂದು ತಿಳಿಸಿದ್ದಾರೆ. ಬಾಡಿಗೆ, ವ್ಯಾಪಾರದ ಲಾಭ, ಹಾಗೂ ಇತರವು ತನ್ನ ಆದಾಯದ ಮೂಲ ಎಂದು ತಿಳಿಸಿದ್ದು, ಪತ್ನಿಯ ಆದಾಯ ಮೂಲ ವೇತನ, ಬಾಡಿಗೆ, ವ್ಯಾಪಾರದ ಲಾಭ ಹಾಗೂ ಇತರ ಎಂದು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!