spot_img
Thursday, May 14, 2026
spot_img

ನಾಡದಲ್ಲಿ ‘ಶುದ್ಧ ಕುಡಿಯುವ ನೀರಿಗಾಗಿ ಹೋರಾಟ’

ಕುಂದಾಪುರ: ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉಪ್ಪು ಮಿಶ್ರಿತ ಕಲುಷಿತ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು, ಜಿಲ್ಲಾಧಿಕಾರಿಗಳ ಸಭೆಯ ನಿರ್ಣಯಗಳನ್ನು ತಕ್ಷಣ ಜಾರಿ ಮಾಡಲು ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯೋಜನ ಫೆಡರೇಶನ್ ಪಡುಕೋಣೆ ಘಟಕ ಡಿವೈ‌ಎಫ್‌ಐ ಹಾಗೂ ಜನವಾದಿ ಮಹಿಳಾ ಸಂಘಟನೆ ನಾಡ ವಲಯ ಇವರ ಜಂಟಿ ಆಶ್ರಯದಲ್ಲಿ ನಾಡ ಗ್ರಾಮ ಪಂಚಾಯತ್ ಎದುರುಗಡೆ ಬೃಹತ್ ಶುದ್ದ ಕುಡಿಯುವ ನೀರಿಗಾಗಿ ಹೋರಾಟ ನಡೆಯಿತು.

ಪ್ರಾಸ್ತವಿಕವಾಗಿ ಮಾತನಾಡಿದ ಹೋರಾಟದ ಪ್ರಮುಖರಾದ ರಾಜೀವ ಪಡುಕೋಣೆಯವರು ನಾಡ ಹಡವು ಬಡಾಕೆರೆ ಮತ್ತು ಸೇನಾಪುರ ಗ್ರಾಮಗಳಲ್ಲಿ ಗ್ರಾಮ ಪಂಚಾಯತ್ ಪೂರೈಕೆ ಮಾಡುತ್ತಿರುವ ನಳ್ಳಿ ನೀರಿನಲ್ಲಿ ಉಪ್ಪು ಮಿಶ್ರಿತ ಕಲುಷಿತ ನೀರು ಬರುತ್ತಿದ್ದು ಜನರ ಆರೋಗ್ಯ ಹದಗೆಡುತ್ತಿದ್ದು ಮತ್ತು ಅಡುಗೆ ಇನ್ನಿತರ ದೈನಂದಿನ ಕ್ರಿಯೆಗಳಿಗೆ ಈ ನೀರು ಅಸಾಧ್ಯವಾಗಿರುತ್ತದೆ. ಆದ್ದರಿಂದ ಈ ಸಮಸ್ಯೆಯ ಕುರಿತು ಕಳೆದ ವರ್ಷ ಈ ಎರಡು ಸಂಘಟನೆಗಳು ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿನಾಂಕ ೨೮/೫/೨೦೨೫ ರಂದು ಜಂಟಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ NITK ಸುರತ್ಕಲ್ ತಂಡದವರಿಂದ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ತಾಂತ್ರಿಕ ವರದಿ ನೀಡಲು ಹಾಗೂ ಏಪ್ರಿಲ್ ,ಮೇ ತಿಂಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲು ಸಭೆ ತೀರ್ಮಾನಗೊಂಡಿತು. ಆದರೆ ಇಂದಿಗೂ ಸಭೆಯ ನಿರ್ಣಯಗಳು ಸಮರ್ಪಕವಾಗಿ ಜಾರಿಯಾಗಿಲ್ಲ. ಪರಿಣಾಮವಾಗಿ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದಿಗೂ ಎಪ್ರಿಲ್, ಮೇ, ತಿಂಗಳಲ್ಲಿ ಉಪ್ಪು ಮಿಶ್ರಿತ ಕಲುಷಿತ ನೀರು ಕುಡಿಯಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ. ಕುಡಿಯಲು ಯೋಗ್ಯವಲ್ಲದ ನೀರಿಗೂ ಸಹ ಸಾರ್ವಜನಿಕರಿಂದ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಸ್ಥಳೀಯ ಆಡಳಿತ ಅಧಿಕಾರಿಗಳ ನಿರ್ಲಕ್ಷವೇ ಈ ಸಮಸ್ಯೆಗೆ ಕಾರಣವೆಂದು ದೂರಿದರು.

DYFI ಮಾಜಿ ಅಧ್ಯಕ್ಷರಾದ ಎಚ್ ನರಸಿಂಹ ಅವರು ಮಾತಾಡಿ ಮುಂದಿನ ದಿನದಲ್ಲಿ ಇಂತಹ ಗ್ರಾಮಗಳಲ್ಲಿ ಇದೇ ರೀತಿ ನೀರಿನ ಸಮಸ್ಯೆ ಉದ್ಬವ ಗೊಂಡರೆ ವರನಿಗೆ ವಧು ಸಹ ಸಿಗದಿರುವ ಪರಿಸ್ಥಿತಿ ಬರಬಹುದು ಯಾಕೆಂದರೆ ಬರಗಾಲದ ಊರಿನಲ್ಲಿ ಹೆಣ್ಣು ಮಕ್ಕಳನ್ನು ಕೊಡಲು ಆಲೋಚಿಸುತ್ತಾರೆ. ತಕ್ಷಣವೇ ಅಧಿಕಾರಿ ವರ್ಗದವರು ಮಧ್ಯ ಪ್ರವೇಶಿಸಿ ಈ ಸಮಸ್ಯೆಗೆ ಪರಿಹಾರ ಕೊಂಡುಕೊಳ್ಳಬೇಕೆಂದು ಹಾಗೂ ಸದ್ಯದ ಪರಿಸ್ಥಿತಿಗೆ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಬೇಕೆಂದು ದನಿಗೂಡಿಸಿದರು. ನಂತರ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿಗಳಿಗೆ ತಮ್ಮ ಮನವಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಡಿವೈ‌ಎಸ್‌ಐ ಅಧ್ಯಕ್ಷರಾದ ನಾಗರಾಜ್ ಕುರು, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷರಾದ ಮನೋರಮ ಭಂಡಾರಿ ಉಪಸ್ಥಿತರಿದ್ದರು. ಜನವಾದಿ ಮಹಿಳಾ ಸಂಘಟನೆಯ ನಾಡಾವಲಯದ ಕೋಶಾಧಿಕಾರಿ ಶೋಭಾ ಕೆರೆಮನೆ ಸ್ವಾಗತಿಸಿದರು. ಜಿಲ್ಲಾ ಸಂಘಟನೆಯ ಶೀಲಾವತಿ ಹಡವು, ಶ್ರೀಧರ ನಾಡ, ನಿಸರ್ಗ ಪಡುಕೋಣೆ, ಸುನಿತಾ, ಸಹನಾ, ಕೃಷ್ಣ ರಾಮನಗರ, ಮತ್ತು ಜನವಾದಿ ಸಂಘಟನೆಯ ನಾಡಾ ವಲಯದ ಕಾರ್ಯದರ್ಶಿ ನಾಗರತ್ನ ನಾಡ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!