spot_img
Saturday, December 7, 2024
spot_img

ಜೆಡಿಎಸ್‌ ಬೆಂಬಲಿತ ಬಿಜೆಪಿಯಿಂದ ಲೋಕಸಭಾ ಚುನಾವಣಾ ಕಣಕ್ಕಿಳಿದ ಬಿ.ವೈ.ರಾ ಅವರಲ್ಲಿ ಆಸ್ತಿ ಎಷ್ಟಿದೆ ಗೊತ್ತಾ ? ಇಲ್ಲಿದೆ ಮಾಹಿತಿ

ಜೆಡಿಎಸ್‌ ಬೆಂಬಲಿತ ಬಿಜೆಪಿಯಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದ ಜೊತೆಗೆ ಒಟ್ಟು ರೂ. 73.71 ಕೋಟಿ ಮೌಲ್ಯದ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ.

ರಾಘವೇಂದ್ರ ರೂ. 55.85 ಕೋಟಿ ಹಾಗೂ ಪತ್ನಿ ತೇಜಸ್ವಿನಿಯವರ ಹೆಸರಿನಲ್ಲಿ ರೂ. 17.86 ಕೋಟಿ ಆಸ್ತಿ ಇದೆ ಎಂದು ತಮ್ಮ ಅಫಿಡೆವಿಟ್‌ ನಲ್ಲಿ ಘೋಷಿಸಿಕೊಂಡಿದ್ದಾರೆ.

ರಾಘವೇಂದ್ರ ಅವರ ಬಳಿ ರೂ. 31.09 ಕೋಟಿ ಚರಾಸ್ತಿ, ರೂ. 24.76 ಕೋಟಿ ಸ್ಥಿರಾಸ್ತಿ ಹಾಗೂ ಅವರ ಪತ್ನಿ ತೇಜಸ್ವಿನಿಯವರ ಬಳಿ ರೂ. 2.95 ಕೋಟಿ ಚರಾಸ್ತಿ ಮತ್ತು ರೂ. 14.90 ಕೋಟಿ ಸ್ಥಿರಾಸ್ತಿ ಇದೆ.

ರಾಘವೇಂದ್ರ ಅವರು ವಿವಿಧ ಕಂಪನಿ, ಬಾಂಡ್‌, ಜೀವವಿಮೆ ಸೇರಿದಂತೆ ಹಲವು ಕಡೆ ಒಟ್ಟು ರೂ. 7.71 ಕೋಟಿ ಹಾಗೂ ಇವರ ಪತ್ನಿ ತೇಜಸ್ವಿನಿಯವರು ರೂ. 7 ಕೋಟಿ ಹೂಡಿಕೆ ಮಾಡಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ 13 ಉಳಿತಾಯ ಖಾತೆಗಳಲ್ಲಿ ರೂ. 98,01,123 ಠೇವಣಿ ಹೊಂದಿದ್ದಾರೆ.

ರಾಘವೇಂದ್ರ 15 ಕಂಪನಿಗಳಲ್ಲಿ ರೂ. 7.68 ಕೋಟಿ ಹೂಡಿಕೆ ಮಾಡಿದ್ದಾರೆ. ತೇಜಸ್ವನಿ ಆರು ಕಂಪನಿಗಳಲ್ಲಿ ರೂ. 1.22 ಕೋಟಿ ಹೂಡಿಕೆ ಮಾಡಿದ್ದಾರೆ. ಮ್ಯೂಚುವಲ್‌ ಫಂಡ್ಸ್‌, ಬಾಂಡ್‌ಗಳಲ್ಲಿ ರಾಘವೇಂದ್ರ ರೂ. 2.22 ಕೋಟಿ, ತೇಜಸ್ವನಿ ರೂ. 30 ಸಾವಿರ ಹೂಡಿಕೆ ಮಾಡಿದ್ದಾರೆ.

ಅವರ ಬಳಿ ರೂ. 98.33 ಲಕ್ಷ ಮೌಲ್ಯದ 1021.50 ಗ್ರಾಂ ಚಿನ್ನ, 114.26 ಕ್ಯಾರೆಟ್‌ ವಜ್ರ, 8.6 ಕೆ.ಜಿ ಬೆಳ್ಳಿ ಮತ್ತು 42 ಬೆಲೆಬಾಳುವ ಹರಳು ಇದೆ. ಪತ್ನಿ ತೇಜಸ್ವಿನಿ ಬಳಿ ರೂ. 1.13 ಕೋಟಿ ಮೌಲ್ಯದ 1395.92 ಗ್ರಾಂ ಚಿನ್ನ, 96.022 ಕ್ಯಾರೆಟ್‌ ವಜ್ರ, 5.1 ಕೆ.ಜಿ ಬೆಳ್ಳಿ ಇದೆ.

ರಾಘವೇಂದ್ರ ಹಾಗೂ ಪತ್ನಿ ಹೆಸರಿನಲ್ಲಿ ರೂ. 1.32 ಕೋಟಿ ಮೌಲ್ಯದ 11.33 ಎಕರೆ ಕೃಷಿ ಜಮೀನು, ವಿವಿಧೆಡೆ ರೂ. 26.07 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಇದೆ.

ರಾಘವೇಂದ್ರ ಅವರು ಸೋದರ ವಿಜಯೇಂದ್ರ, ಪತ್ನಿ ತೇಜಸ್ವಿನಿ, ಪುತ್ರರಿಗೆ ಹಾಗೂ ವಿವಿಧ ಸಂಸ್ಥೆಗಳಿಗೆ ರೂ. 20.39 ಕೋಟಿ ಸಾಲ ನೀಡಿದ್ದಾರೆ. ನಾಲ್ಕು ಪ್ರಕರಣಗಳಿವೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!