Sunday, September 8, 2024

ಅನುದಾನ ತಡೆಹಿಡಿದ ಆರೋಪ : ಗುಜರಿಗಳಿಗೆಲ್ಲಾ ಉತ್ತರ ಕೊಡುವ ಅಗತ್ಯವಿಲ್ಲ : ಗೋಪಾಲ್‌ ಪೂಜಾರಿ ಆಕ್ರೋಶ

ಜನಪ್ರತಿನಿಧಿ (ಬೀಜಾಡಿ) : ದೇವಾಡಿಗರ ಸಮುದಾಯಕ್ಕೆ ಬೇಕಾಗಿ ಜಾಗ ಖರೀದಿ ಮಾಡುವುದಕ್ಕೆ ಸುಕುಮಾರ್‌ ಶೆಟ್ಟಿಯವರು ಐದು ಲಕ್ಷ, ನಾನು ಒಂದು ಲಕ್ಷ ಕೊಟ್ಟಿದ್ದೇನೆ. ಚುನಾವಣೆ ಹೊತ್ತಿನಲ್ಲಿ ತರಾತುರಿಯಲ್ಲಿ ಒಂದು ಕೋಟಿಯನ್ನು ನೀರಾವರಿ ಇಲಾಖೆಯ ಮೂಲಕ ಆದೇಶವನ್ನು ಕೊಟ್ಟರು. ಚುನಾವಣೆ ಮುಗಿದ ಮೇಲೆ ಇಲಾಖೆಯಲ್ಲಿ ಹಣ ಕಾಯ್ದಿರಿಸಲಿಲ್ಲ. ಹಣ ಕಾಯ್ದಿರಿಸದೇ ಆದೇಶ ಕೊಟ್ಟಿದ್ದಾರೋ ಅವೆಲ್ಲವನ್ನೂ ಡಿ.ಕೆ ಶಿವಕುಮಾರ್‌ ಅವರು ಮಂತ್ರಿಗಳಾದ ಮೇಲೆ ರದ್ದುಗೊಳಿಸಿದರು. ಚುನಾವಣೆಗೋಸ್ಕರ ಆದೇಶ ಪ್ರತಿ ಕೊಟ್ಟು ಆದೇಶಕೊಟ್ಟಿದ್ದೇವೆ ಎಂದು ಹೇಳಿದರೇ ಆಗುವುದಿಲ್ಲ ಎಂದು ಬಿಜೆಪಿಯ ಆರೋಪಗಳಿ ಮಾಜಿ ಶಾಸಕ ಗೋಪಾಲ ಪೂಜಾರಿ ತಿರುಗೇಟು ನೀಡಿದ್ದಾರೆ.

ಮಾದ್ಯಮ ವರದಿಗಾರರೊಂದಿಗೆ ಮಾತನಾಡಿದ ಅವರು, ಆದೇಶ ಪ್ರತಿಯಲ್ಲಿ ಒಂದು ಕೋಟಿ ಕೊಟ್ಟಿದ್ದೇವೆ ಎಂದು ಹೇಳಿ ಜನರಲ್ಲಿ ಮತ ಚಲಾಯಿಸಿಕೊಂಡಿದ್ದಾರೆ. ಈಗ ನಮ್ಮ ಸರ್ಕಾರ ಬಂದಿದೆ. ನಿಮಗೆ ಅನುದಾನ ಬೇಕಾದಲ್ಲಿ ಪ್ರಸ್ತಾವನೆಯಲ್ಲಿ ಬೇಡಿಕೆಯಿಡಿ. ನಮ್ಮ ಸರ್ಕಾರದಿಂದ ಆದೇಶ ಕೊಡಿಸುತ್ತೇವೆ ಎಂದು ಅವರು ಹೇಳಿದರು.

ಆಣೆ ಪ್ರಮಾಣಕ್ಕೆ ನಿಮ್ಮನ್ನು ಆಹ್ವಾನಿಸಿದ್ದಾರೆ ಎಂದು ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವ ದೇವಸ್ಥಾನಕ್ಕೆ ಬೇಕಾದರೂ ಆಣೆ ಪ್ರಮಾಣಕ್ಕೆ ಬರುತ್ತೇನೆ. ಆದರೇ ಇಂತಹ ಗುಜರಿಗಳ ಮಾತು ಕೇಳಿಕೊಂಡು ಬರುವುದಿಲ್ಲ. ಇಂತಹ ಗುಜರಿಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ. ನನ್ನ ಬ್ಲಾಕ್‌ ನ ಜನರು ಚುನಾವಣೆಯಲ್ಲಿ ಬಿಜೆಪಿಯವರಿಗೆ ಉತ್ತರ ನೀಡುತ್ತಾರೆ. ರಾಘವೇಂದ್ರನ ಏಜೆಂಟರ್‌ಗಳ ಹಣೆಬರಹ ನಮಗೆ ಏನಂತ ಗೊತ್ತಿದೆ ಎಂದು ಅವರು ಆಕ್ರೋಶ ಹೊರ ಹಾಕಿದರು.

ಬಿಜೆಪಿಯವರು ಹತಾಶರಾಗಿದ್ದಾರೆ. ಕಾಂಗ್ರೆಸ್‌ ಐದು ಗ್ಯಾರಂಟಿಗಳನ್ನು ಮನೆಮನೆಗೆ ತಲುಪಿಸದ ಮೇಲೆ ಬಿಜೆಪಿಯವರು ಸುಖಾಸುಮ್ಮನೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಐದು ಗ್ಯಾರಂಟಿಗಳ ಎಲ್ಲಾ ಫಲಾನುಭವಿಗಳು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ. ಬಿಜೆಪಿಯವರ ಹಾಗೆ ದುಡ್ಡಗೆ ಬರುವ ಕಾರ್ಯಕರ್ತರು ಕಾಂಗ್ರೆಸ್‌ ಕಾರ್ಯಕಜರ್ತರಲ್ಲ. ಪ್ರತಿ ಗ್ರಾಮೀಣ ಕಾಂಗ್ರೆಸ್‌ ಸಭೆಯಲ್ಲೂ ಐನೂರಕ್ಕೂ ಹೆಚ್ಚು ಕಾಋಯಕರ್ತರನ್ನು ನಾವು ಒಟ್ಟುಗೂಡಿಸಿದ್ದೇವೆ. ಅದು ಕಾಂಗ್ರೆಸ್‌ನ ಶಕ್ತಿ. ಬೈಂದೂರಿನಿಂದ ಇಪ್ಪತ್ತೈದು ಸಾವಿರಕ್ಕಿಂತಲೂ ಹೆಚ್ಚು ಮತಗಳಿಂದ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!