spot_img
Monday, April 6, 2026
spot_img

ಬಿಜೆಪಿ ಬೈಂದೂರು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಪದಗ್ರಹಣ: ಸಾಮಾಜಿಕ ಸಮ್ಮೇಳನ

ಬೈಂದೂರು: ಭಾರತೀಯ ಜನತಾ ಪಾರ್ಟಿ, ಬೈಂದೂರು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಮತ್ತು ಸಾಮಾಜಿಕ ಸಮ್ಮೇಳನ ಕಾರ್ಯಕ್ರಮ ಮಾ.31ರಂದು ಬೈಂದೂರು ಅಂಬಿಕಾ ಇಂಟರ್ನ್ಯಾಷನಲ್ ಇಲ್ಲಿ ಬೈಂದೂರು ಮಂಡಲದ ಹಿಂದುಳಿದ ವರ್ಗದ ಮೋರ್ಚಾದ ಅಧ್ಯಕ್ಷರಾದ ಶಿವರಾಜ ಪೂಜಾರಿ ಗೋಳಿಹೊಳೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗ ಮೋರ್ಚಾದ ಉಪಾಧ್ಯಕ್ಷರಾದ ವಿಠ್ಠಲ್ ಪೂಜಾರಿ, ಬೈಂದೂರು ಮಂಡಲದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಹಿಂದುಳಿದವರು ಮೋರ್ಚಾದ ಅಧ್ಯಕ್ಷರಾದ ವಿಜಯ ಕೊಡವೂರು ಉಡುಪಿ, ಅಶೋಕ್ ಮೂರ್ತಿ ಬೈಂದೂರು ಪ್ರಭಾರಿಗಳು, ಅರುಣ್ ಕುಮಾರ್ ಬಾಣ ಉಡುಪಿ ಜಿಲ್ಲಾ ಸಹಪ್ರಭಾರಿ, ಶ್ರೀನಾಥ್ ರಾವ್ ರಾಜ್ಯ ಸಾಮಾಜಿಕ ಜಾಲ ತಾಣ ಸಂಚಾಲಕರು, ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ತಿಂಗಳಾಯ, ಒಬಿಸಿ ಉಪಾಧ್ಯಕ್ಷರುಗಳಾದ, ವಿನೋದ್ ಕುಮಾರ್ ಗುಜ್ಜಾಡಿ, ಭಾರತೀಯ ಚಂದ್ರಶೇಖರ್ ಉಡುಪಿ, ರಾಜಶೇಖರ ದೇವಾಡಿಗ ಬೈಂದೂರು, ಜಿಲ್ಲಾ ಒಬಿಸಿ ಕಾರ್ಯದರ್ಶಿಗಳಾದ ಚಂದ್ರಜೋಗಿ, ಶಾಂತಿ ಕಾರ್ವಿ ಗಂಗೊಳ್ಳಿ, ಬೈಂದೂರು ಮಂಡಲದ ಓಬಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ದೇವಾಡಿಗ ಉಪ್ಪುಂದ, ರಾಘವೇಂದ್ರ ಕೊಠಾರಿ ಕೆರಾಡಿ, ಮಂಡಲದ ಓಬಿಸಿ ಎಲ್ಲಾ ಪದಾಧಿಕಾರಿಗಳು, ಎಲ್ಲಾ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಕ್ಷದ ಹಿರಿಯರು ಹಾಗೂ ಕಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿಂದಿನ ಮೂರು ಅವಧಿಯ ನಿಕಟಪೂರ್ವ ಅಧ್ಯಕ್ಷರುಗಳಾದ ಎ.ಆನಂದ್ ಖಾರ್ವಿ ಉಪ್ಪುಂದ, ಗಣೇಶ್ ಪೂಜಾರಿ ಕೆಂಚನೂರು, ಸಂತೋಷ್ ಪೂಜಾರಿ ಮುಕ್ಕೋಡು ಇವರನ್ನು ಸನ್ಮಾನಿಸಲಾಯಿತು.

ಬೈಂದೂರು ಮಂಡಲದ ಹಿಂದುಳಿದ ಮೋರ್ಚಾದ ಎಲ್ಲಾ ಪದಾಧಿಕಾರಿಗಳ ಪದಗ್ರಹಣ ಮತ್ತು ಮಹಾ ಶಕ್ತಿ ಕೇಂದ್ರ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಸದಸ್ಯರುಗಳ ಪದಗ್ರಹಣ ಈ ಸಂದರ್ಭದಲ್ಲಿ ನೆರವೇರಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!