spot_img
Sunday, February 15, 2026
spot_img

ದೇಶದಲ್ಲಿ ಕಾಂಗ್ರೆಸ್‌ ಹೀನಾಯ ಸ್ಥಿತಿಯಲ್ಲಿದೆ : ಮಾಜಿ ಪ್ರಧಾನಿ ದೇವೇಗೌಡ

ಜನಪ್ರತಿನಿಧಿ (ತುಮಕೂರು) : ಜೆಡಿಎಸ್‌  ಎಲ್ಲಿದೆ ಎಂದು ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಹೆಚ್.‌ ಡಿ ದೇವೇಗೌಡ ತಿರುಗೇಟು ನೀಡಿದದು, ದೇಶದಲ್ಲಿ ಕಾಂಗ್ರೆಸ್‌ ಎಲ್ಲಿದೆ ಎಂದು ಕೇಳಿ ತಿವಿದಿದ್ದಾರೆ.

ನಗರದಲ್ಲಿ ಜೆಡಿಎಸ್‌ ನಾಯಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ದೇವೇಗೌಡರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದಿದ್ದು, ದೇಶದಲ್ಲಿ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಸೇರಿ, ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಕಾಂಗ್ರೆಸ್‌ ಇಂತಹ ಹೀನಾಯ ಸ್ಥಿತಿಯಲ್ಲಿ ಇದ್ದರೂ ಜೆಡಿಎಸ್‌ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಂತಹ ಕುತಂತ್ರ ಬುದ್ಧಿಯಿಂದಲೇ ಕಾಂಗ್ರೆಸ್‌ಗೆ ಇಂತಹ ದುರ್ಬುದ್ಧಿ ಬಂದಿದೆ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ನಾನು ಖಡಾಖಂಡಿತವಾಗಿ ಹೇಳಿದ್ದೆ. ಆದರೂ ನನ್ನನ್ನು ಬಲವಂತವಾಗಿ ಒಪ್ಪಿಸಿ ತುಮಕೂರಿನಿಂದ ಕಣಕ್ಕಿಳಿಸಿ ನನ್ನನ್ನು ಸೋಲುವ ಹಾಗೆ ಮಾಡಿದರು. ಮೈಸೂರು ಕ್ಷೇತ್ರದ ಟಿಕೇಟ್‌ಗಾಗಿ ನನ್ನನ್ನು ನಿಲ್ಲುವಂತೆ ಮಾಡಿದರು. ಸಚಿವ ಕೆ.ಎನ್‌ ರಾಜಣ್ಣ ಅವರೊಂದಿಗೆ ರಾತ್ರೋರಾತ್ರಿ ಪಿತೂರಿ ನಡೆಸಿ ನನ್ನ ಸೋಲಿಗೆ ಕಾರಣೀಕರ್ತರಾದಿರಿ ಎಂದು ಸಿದ್ದರಾಮಯ್ಯ ಅವರ ಆರೋಪ ಹೊರಿಸಿದರು.

ಗೊಲ್ಲರಿಗೆ ಮೀಸಲಾತಿ ಕೊಡಿಸುವೆ : ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೇ ಗೊಲ್ಲ ಸಮುದಾಯಕ್ಕೆ ಮೂರೇ ಮೂರು ತಿಂಗಳಲ್ಲಿ ಪರಿಶಿಷ್ಠ ಪಂಗಡ ಮೀಸಲಾತಿ ಕೊಡಿಸುವೆ ಎಂದು ಅವರು ಹೇಳಿದರು. ಗೊಲ್ಲ ಸಮುದಾಯಕ್ಕೆ ಮೀಸಲಾತಿ ಕೊಡಿಸುವ ಹೊಣೆ ನನ್ನ ಮೇಲಿದೆ. ಕೊಟ್ಟ ಮಾತು ಎಂದೂ ತಪ್ಪುವುದಿಲ್ಲ. ಅವರ ಮನೆಗೆ ಮೀಸಲಾತಿ ತಲುಪಿಸುವೆ ಎಂದು ಭರವಸೆ ನೀಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!