spot_img
Saturday, December 7, 2024
spot_img

ಸರ್ಕಾರಿ ಇ- ಮಾರುಕಟ್ಟೆಯಿಂದ ಸರಕು ಖರೀದಿ ಪ್ರಮಾಣ ದುಪ್ಪಟ್ಟು : ವಾಣಿಜ್ಯ ಸಚಿವಾಲಯ

ಜನಪ್ರತಿನಿಧಿ (ನವ ದೆಹಲಿ) : 2024 ರಲ್ಲಿ ಸರ್ಕಾರಿ ಇ- ಮಾರುಕಟ್ಟೆಯಿಂದ ಸರಕು ಖರೀದಿ ಪ್ರಮಾಣ ದುಪ್ಪಟ್ಟಾಗಿದ್ದು, 4 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಳವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ತನ್ನ ಹೇಳಿಕೆಯಲ್ಲಿ ಈ ಬಗ್ಗೆ ತಿಳಿಸಿದ ವಾಣಿಜ್ಯ ಸಚಿವಾಲಯ, “ಸ್ಥಾಪಿತ ಸೇವಾ ಪೂರೈಕೆದಾರರ ಏಕಚಕ್ರಾಧಿಪತ್ಯವನ್ನು ಮುರಿಯುವಲ್ಲಿ ಜಿಇಎಂ ಯಶಸ್ವಿಯಾಗಿದೆ, ಸಣ್ಣ ದೇಶೀಯ ಉದ್ಯಮಿಗಳು ಯಾವುದೇ ಸಮಯದಲ್ಲಿ ಸರ್ಕಾರಿ ಟೆಂಡರ್‌ಗಳಲ್ಲಿ ಭಾಗವಹಿಸಲು ದಾರಿ ಮಾಡಿಕೊಟ್ಟಿದೆ” ಎಂದಿದೆ.

ಮಾ.28, 2024 ವರೆಗಿನ ಅಂಕಿ-ಅಂಶಗಳು ಇದಾಗಿದ್ದು, 2016 ರಲ್ಲಿ ಈ ಜಿಇಎಂ ಅನ್ನು ಸರ್ಕಾರಿ ಇಲಾಖೆಗಳಿಗೆ ಸರಕು ಸೇವೆಗಳನ್ನು ಪಡೆಯುವುದಕ್ಕೆ ಪಾದರ್ಶಕ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಜಾರಿಗೆ ತರಲಾಗಿತ್ತು.

ಜಿಇಎಂ ನಲ್ಲಿ ಮಹಿಳಾ ಸ್ವಸಹಾಯಕ ಗುಂಪು, ಸ್ಟಾರ್ಟ್ ಅಪ್ ಮತ್ತು ಎಂಎಸ್ಎಂಇಗಳಂತಹ ಸಣ್ಣ ಉದ್ಯಮಿಗಳು, ಸೇವೆ, ಸರಕುಗಳನ್ನು ಪೂರೈಸುತ್ತಾರೆ. 2016 ರಲ್ಲಿ ಪೋರ್ಟಲ್ ನಲ್ಲಿನ ವ್ಯಾಪಾರದ ಮೌಲ್ಯ 422 ಕೋಟಿ ರೂಪಾಯಿಗಳಷ್ಟಿತ್ತು 2021-22 ರಲ್ಲಿ ಇದು 1.06 ಲಕ್ಷ ಕೋಟಿಗೆ ಏರಿಕೆಯಾಗಿತ್ತು. 2023 ರಲ್ಲಿ ಇಲ್ಲಿನ ವಹಿವಾಟು 2 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಳವಾಗಿದೆ.

ಮಾರ್ಚ್ 2024 ರವರೆಗಿನ ಈ GMV ಯ ಸುಮಾರು ಶೇ. 50 ರಷ್ಟು ಸೇವೆಗಳ ಸಂಗ್ರಹಣೆಗೆ ಕಾರಣವಾಗಿದೆ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.205 ಬೆಳವಣಿಗೆಯನ್ನು ದಾಖಲಿಸಿದೆ.

ಈ ಸಂಬಂಧಿಸಿದಂತೆ ಜಿಇಎಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿಕೆ ಸಿಂಗ್ ಮಾತನಾಡಿ, ಪೋರ್ಟಲ್‌ನಿಂದ ಸೇವೆಗಳ ಸಂಗ್ರಹಣೆಯು FY23 ರಲ್ಲಿ 66,000 ಕೋಟಿಗಳಿಂದ ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ 2.05 ಲಕ್ಷ ಕೋಟಿ ರೂಪಾಯಿಗಳಿಗೆ ಜಿಗಿದಿದೆ. ವೇದಿಕೆಯಿಂದ 1.95 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ಖರೀದಿಸಲಾಗಿದೆ. ಆಟೋಮೊಬೈಲ್‌ಗಳು, ಕಂಪ್ಯೂಟರ್‌ಗಳು ಮತ್ತು ಕಚೇರಿ ಪೀಠೋಪಕರಣಗಳು ಖರೀದಿಸಲಾಗಿರುವ ಕೆಲವು ಪ್ರಮುಖ ಉತ್ಪನ್ನ ವರ್ಗಗಳಾಗಿವೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!