spot_img
Friday, April 3, 2026
spot_img

“ರಂಗಸುರಭಿ -2024” ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ

ಜನಪ್ರತಿನಿಧಿ (ಬೈಂದೂರು) : ಸುರಭಿ ರಿ.ಬೈಂದೂರು ಪ್ರಸ್ತುತ ಪಡಿಸುವ ರಾಜ್ಯಮಟ್ಟದ ನಾಟಕೋತ್ಸವ  “ರಂಗಸುರಭಿ -2024” ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು.

“ರಂಗಸುರಭಿ -2024”ರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಶುಭ ಹಾರೈಸಿದ ಸಮುದಾಯ ಆರೋಗ್ಯ ಕೇಂದ್ರ ಬೈಂದೂರು ಇದರ ಆಡಳಿತ ವೈದ್ಯಾಧಿಕಾರಿ ಡಾ.ನಂದಿನಿ, ರಂಗಭೂಮಿಯು ಸಮಾಜದ ಒಂದು ನೈಜ ದರ್ಪಣ ಇದ್ದಂತೆ. ಸಮಾಜವನ್ನು ಇನ್ನಷ್ಟು ದರ್ಶಿಸುವಂತೆ ರಂಗಭೂಮಿಯಿಂದ ಆಗಲಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರಭಿ ರಿ.ಬೈಂದೂರು ಇದರ ಅಧ್ಯಕ್ಷ  ನಾಗರಾಜ್ ಪಿ.ಯಡ್ತರೆ ವಹಿಸಿದ್ದರು. ವೇದಿಕೆಯಲ್ಲಿ ಸುರಭಿಯ ಉಪಾಧ್ಯಕ್ಷ ಮತ್ತು ಬಾಯ್ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಆನಂದ ಮದ್ದೋಡಿ ಉಪಸ್ಥಿತರಿದ್ದರು.

ನಿರ್ದೇಶಕ ಸುಧಾಕರ್ ಪಿ ಬೈಂದೂರು ಸ್ವಾಗತಿಸಿ, ಕಾರ್ಯದರ್ಶಿ ಭಾಸ್ಕರ್ ಬಾಡ ನಿರೂಪಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!