Wednesday, September 11, 2024

ಭ್ರಷ್ಟರನ್ನು ತಮ್ಮ ಅಪ್ಪುಗೆಗೆ ತೆಗೆದುಕೊಂಡು ಮೋದಿಯವರು “ಭ್ರಷ್ಟ ಮುಕ್ತ ಕಾಂಗ್ರೆಸ್” ಮಾಡಿದ್ದಾರೆ : ಜೈರಾಮ್ ರಮೇಶ್‌

ಜನಪ್ರತಿನಿಧಿ (ನವ ದೆಹಲಿ ) : ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಮಾಜಿ ಸಂಸದ ಮತ್ತು ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಅವರು ಪಕ್ಷದಿಂದ ನಿರ್ಗಮಿಸಿ ಬಿಜೆಪಿಗೆ ಸೇರ್ಪಡೆಯಾಗಿರುವುದನ್ನು ತಮ್ಮ ಅಧಿಕೃತ ಎಕ್ಸ್‌ ಖಾತೆಯ ಮೂಲಕ ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು “ಕಾಂಗ್ರೆಸ್-ಮುಕ್ತ ಭಾರತ್” ಬಯಸಿದ್ದರು, ಆದರೆ ಬದಲಿಗೆ ಅವರು “ಭ್ರಷ್ಟ ಮುಕ್ತ ಕಾಂಗ್ರೆಸ್” ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ನಿನ್ನೆ(ಭಾನುವಾರ) ಬಿಜೆಪಿಗೆ ಸೇರ್ಪಡೆಗೊಂಡ ನಂತರ, ಜಿಂದಾಲ್ ಸ್ಟೀಲ್ ಮತ್ತು ಪವರ್‌ನ ಅಧ್ಯಕ್ಷರು “ನನ್ನ ಜೀವನದಲ್ಲಿ ಇದು ಬಹಳ ಮುಖ್ಯವಾದ ದಿನವಾಗಿದೆ. ನಾನು ಇಂದು ಬಿಜೆಪಿಗೆ ಸೇರಿದ್ದಕ್ಕಾಗಿ ನನಗೆ ಹೆಮ್ಮೆ ಇದೆ ಮತ್ತು ನಾನು ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶಕ್ಕೆ ಸೇವೆ ಸಲ್ಲಿಸಲು ಹೆಮ್ಮೆ ಪಡುತ್ತೇನೆ.ʼ ಎಂದು ಹೇಳಿದ್ದರು.

ಮಾತ್ರವಲ್ಲದೇ, ನವೀನ್ ಜಿಂದಾಲ್ ಅವರು ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಧನ್ಯವಾದಗಳನ್ನು ಅರ್ಪಿಸಿದರು.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಜೈರಾಮ್ ರಮೇಶ್, ಕಳೆದ ಹತ್ತು ವರ್ಷಗಳಲ್ಲಿ ಪಕ್ಷಕ್ಕೆ ಶೂನ್ಯ ಕೊಡುಗೆಗಳನ್ನು ನೀಡಿದ ನಂತರ, ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳುವುದು ದೊಡ್ಡ ತಮಾಷೆಯಾಗಿದೆ” ಎಂದಿದ್ದಲ್ಲೇ, ಇಂತದ್ದೊಂದು ಕಾಂಗ್ರೆಸ್‌ನಲ್ಲಿ ಆಗಬೇಕಾಗಿತ್ತುʼ ಎಂದು ಅವರು ಹೇಳಿದ್ದಾರೆ.

ಅಷ್ಟಲ್ಲದೇ, ಆಪಾದಿತ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಜಿಂದಾಲ್ ಅವರನ್ನು ಆರೋಪಿಯಾಗಿ ಸಮನ್ಸ್ ಮಾಡಿರುವ ಕುರಿತು ಎರಡು ಸುದ್ದಿ ಲೇಖನಗಳ ಸ್ಕ್ರೀನ್‌ಶಾಟ್‌ಗಳನ್ನು ಸಹ ಜೈರಾಂ ರಮೇಶ್ ಲಗತ್ತಿಸಿದ್ದಾರೆ.

ತಮ್ಮ ಮತ್ತೊಂದು ಟ್ವೀಟ್‌ನಲ್ಲಿ, ಹಿರಿಯ ಕಾಂಗ್ರೆಸ್ ನಾಯಕ, “ಪ್ರಧಾನಿ ಕಾಂಗ್ರೆಸ್ ಮುಕ್ತ ಭಾರತವನ್ನು ಬಯಸಿದ್ದರು” “ಬದಲಿಗೆ ಭ್ರಷ್ಟ ಕಾಂಗ್ರೆಸ್ಸಿಗರನ್ನು ತನ್ನ ಅಪ್ಪುಗೆಗೆ ತೆಗೆದುಕೊಳ್ಳುವುದರ ಉದ್ದೇಶದಿಂದ ED ಮತ್ತು CBI ಜೊತೆಗೆ ಹಲವಾರು ತೊಳೆಯುವ ಯಂತ್ರಗಳನ್ನು ನಿಯೋಜಿಸುವ ಮೂಲಕ ʼಭ್ರಷ್ಟ ಮುಕ್ತ ಕಾಂಗ್ರೆಸ್ʼ ಮಾಡಿದ್ದಾರೆ!” ಎಂದು ಹೇಳಿದ್ದಾರೆ.

ನವೀನ್ ಜಿಂದಾಲ್ ಬಿಜೆಪಿಗೆ ಸೇರಿದ ಕೆಲವೇ ಗಂಟೆಗಳ ನಂತರ, ಲೋಕಸಭೆ ಚುನಾವಣೆಗೆ ಪಕ್ಷದ 111 ಅಭ್ಯರ್ಥಿಗಳ ಐದನೇ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪಟ್ಟಿಯ ಪ್ರಕಾರ, ಜಿಂದಾಲ್ ಅವರಿಗೆ ಹರಿಯಾಣದ ಕುರುಕ್ಷೇತ್ರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ, ಅವರು 2004 ರಿಂದ 2014 ರ ಲೋಕಸಭೆ ಚುನಾವಣೆಯಲ್ಲಿ ಸೋಲುವವರೆಗೂ ಕಾಂಗ್ರೆಸ್ ನಾಯಕರಾಗಿ ಪ್ರತಿನಿಧಿಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!