spot_img
Saturday, December 7, 2024
spot_img

ರಜಾರಂಗು-24′ ಮಕ್ಕಳ ಬೇಸಿಗೆ ಶಿಬಿರಕ್ಕೆ ಪ್ರವೇಶಾತಿ ಆರಂಭ

ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಹಾಗೂ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಜಂಟಿ ಆಶ್ರಯದಲ್ಲಿ ಏಪ್ರಿಲ್ 11ರಿಂದ ಮೇ 5ರ ತನಕ ರಜಾರಂಗು-24 ಮೊಬೈಲ್ ಮುಕ್ತ ಮಕ್ಕಳ ಬೇಸಿಗೆ ಶಿಬಿರವನ್ನು ತೆಕ್ಕಟ್ಟೆ ಶಿಶುಮಂದಿರದ ಸಮೀಪ ಪ್ರಕೃತಿ ಪಾಠಶಾಲೆಯಲ್ಲಿ ಜ್ಞಾನವಸಂತದಲ್ಲಿ ಆಯೋಜಿಸಿಕೊಂಡಿದೆ.

ರೋಹಿತ್ ಎಸ್. ಬೈಕಾಡಿ ಮಾರ್ಗದರ್ಶನದಲ್ಲಿ ಶಿಬಿರ ನಡೆಯಲಿದ್ದು, ಮೈಸೂರು ಜಿಲ್ಲೆಯ ಇಲವಾಲದವರಾದ ಅಶೋಕ್ ಮೈಸೂರು ನೀನಾಸಂ ಹಾಗೂ ಮೈಸೂರು ರಂಗಾಯಣದಲ್ಲಿ ರಂಗ ಶಿಕ್ಷಣ ಪಡೆದವರಾಗಿ ಶಿಬಿರದ ನಿರ್ದೇಶಕರಲ್ಲಿ ಒಬ್ಬರಾಗಿರುವರು. ಇನ್ನೊಬ್ಬರು ನಾಗೇಶ್ ಕೆದೂರು. ಇವರು ಸಾಣೇಹಳ್ಳಿಯಲ್ಲಿ ತರಬೇತಿ ಪಡೆದು, ಇನೋವಿಟಿ ಫಿಲ್ಮ್ ಅಕಾಡೆಮಿಯಲ್ಲಿ ಅಭಿನಯ ಶಿಕ್ಷಕರಾಗಿ ಕೆಲಸ ಮಾಡುತ್ತಿರುವವರು. ಮತ್ತೋರ್ವರು ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ಪದವಿ ಪಡೆದು, ಧಾತ್ರಿ ರಂಗಸಂಸ್ಥೆಯಲ್ಲಿ ನಟ, ತಂತ್ರಜ್ಞನಾಗಿ ಅನುಭವಿ ರಂಜಿತ್ ಶೆಟ್ಟಿ ಬ್ರಹ್ಮಾವರದವರು. ಇನ್ನು ಸಂಸ್ಥೆಯ ಶಿಬಿರದ ಜವಾಬ್ದಾರಿ ಹೊತ್ತವರಾದ ಶ್ರೀಶ ತೆಕ್ಕಟ್ಟೆ. ರಂಗ ಅಧ್ಯಯನ ಕೇಂದ್ರದಲ್ಲಿ ರಂಗ ಶಿಕ್ಷಣ ಮುಗಿಸಿ, ರಂಗಾಯಣ ಶಿವಮೊಗ್ಗದಲ್ಲಿ ನಟನಾಗಿ ಸೇವೆ ಸಲ್ಲಿಸಿದವರು.

ಈ ನಾಲ್ವರು ಅನುಭವಿ ಸಂಪನ್ಮೂಲ ವ್ಯಕ್ತಿಗಳ ಸುವ್ಯವಸ್ಥೆಯಲ್ಲಿ ಅರಣ್ಯದೊಳಗಣ ಹೂರಣದ ಸವಿಯನ್ನು ಉಣ್ಣುವ ಬಗೆಯ ಪಾಠ, ಸಮುದ್ರದ ತಟದಲ್ಲಿನ ಆಟದ ಕೂಟ, ವಿಜ್ಞಾನದೊಳಗಿನ ಆಟದ ಪಕ್ಷಿನೋಟ, ಇನ್ನಿತರ ಹಲವು ಬಗೆಯ ವಿಭಿನ್ನ ಕಲಾ ಪ್ರಕಾರಗಳ ಮಾರ್ಗದರ್ಶನದೊಂದಿಗೆ ರಂಗಭೂಮಿಯ ನಟನೆಯ ಸತ್ವವನ್ನು ಮಕ್ಕಳಲ್ಲಿ ಬಿತ್ತರಿಸುವ ಶಿಬಿರ ಇದಾಗಿದೆ.

ಸೀಮಿತ ಮಕ್ಕಳಿಗೆ ಮಾತ್ರ ಅವಕಾಶವಿದ್ದು ಪ್ರಥಮವಾಗಿ ಸೇರಿಕೊಂಡವರಿಗೆ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಪ್ರವೇಶಾತಿ ಆರಂಭಗೊಂಡ ಈ ಶಿಬಿರ (ಸಂಪರ್ಕ: 9945947771, 8073998079) ವಿಭಿನ್ನವಾಗಿ ಮಕ್ಕಳ ಪ್ರತಿಭೆಯ ಅನಾವರಣಕ್ಕಾಗಿ ತೆರೆದುಕೊಳ್ಳಲಿದೆ ಎಂದು ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!