spot_img
Friday, April 25, 2025
spot_img

ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಮುಂಬಯಿ ವಿಭಾಗದ ಕಾರ್ಯದರ್ಶಿಯಾಗಿ ಮಹಾದೇವ ಪೂಜಾರಿ ಆಯ್ಕೆ

ಮುಂಬಯಿ: ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ನೇತ್ರತ್ವದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮುಂಬಯಿ ವಿಭಾಗದ ಪದಾಧಿಕಾರಿಗಳ ಆಯ್ಕೆ ಪಕ್ರಿಯೆ ಇತ್ತೀಚೆಗೆ ನೆಡೆದಿದ್ದು ಅದರಲ್ಲಿ ಕನ್ನಡಿಗ ಮಹಾದೇವ ಪೂಜಾರಿಯವರನ್ನು ಕಾರ್ಯದರ್ಶಿಯಾಗಿ ನಿಯುಕ್ತಿಗೊಳಿಸಿ ಮುಂಬಯಿ ವಿಭಾಗದ ಅಧ್ಯಕ್ಷರಾದ ರಾಖೀ ಜಾಧವ್ ನಿಯುಕ್ತಿ ಪತ್ರವನ್ನು ನೀಡಿದ್ದಾರೆ.

ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಊರಿನವರಾದ ಮಹಾದೇವ ಪೂಜಾರಿಯವರು ನಾಲ್ಕು ದಶಕಗಳ ಹಿಂದೆ ಮುಂಬಯಿ ಮಹಾನಗರಕ್ಕೆ ಪಾದಾರ್ಪಣೆಗೈದು ಕ್ಯಾಂಟೀನ್ ಕಾರ್ಮಿಕನಾಗಿ ದುಡಿದು ರಾತ್ರಿ ಶಾಲೆಯಲ್ಲಿ ವ್ಯಾಸಂಗ ಮುಂದುವರೆಸಿದರು. ಆ ಬಳಿಕ ವಿವಿಧ ಹಂತದಲ್ಲಿ ಮುನ್ನೆಡೆದು ವಿದ್ಯೆ-ಉದ್ಯೋಗ ಎರಡಕ್ಕೂ ಮಹತ್ವ ನೀಡಿ ಅದರಲ್ಲಿ ಯಶಸ್ವಿಯಾಗಿ ತದನಂತರ ಸ್ವಂತ ಉದ್ಯಮದತ್ತ ಒಲವು ತೋರಿ ಓರ್ವ ಉದ್ಯಮಿಯಾಗಿ ರೂಪುಗೊಂಡರು. ಉದ್ಯಮದ ಜೊತೆ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವ ಇವರು ಗಾಂವ್ದೇವಿ ಪ್ರತಿಷ್ಠಾನ ಮುಂಬಯಿ ಇದರ ಅಧ್ಯಕ್ಷರಾಗಿ, ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿಯ ಅಧ್ಯಕ್ಷರಾಗಿರುವುದಲ್ಲದೆ ಹಲವಾರು ಸಂಘ ಸಂಸ್ಥೆಗಳ ಮೂಲಕ ಸಮಾಜಸೇವೆಗೈಯುತ್ತಿದ್ದಾರೆ. ತನ್ನ ಹುಟ್ಟೂರಿನ ಸಮುದಾಯ ಬಾಂಧವರನ್ನು ಒಗ್ಗೂಡಿಸಿ ಕೊಡೇರಿ ಬಿಲ್ಲವ ಸಮಾಜ ಸೇವಾ ಸಂಘ ಸ್ಥಾಪಿಸಿ ಅದರ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಗಳ ಜೊತೆಗೆ ರಾಜಕೀಯ ಪಯಣ ಆರಂಭಿಸಿದ ಇವರು ಇದೀಗ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಮುಂಬಯಿ ವಿಭಾಗದ ನೂತನ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದಾರೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!