spot_img
Monday, March 2, 2026
spot_img

ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್: ಪದವಿ ಪ್ರದಾನ

ಬ್ರಹ್ಮಾವರ: ಫಾರ್ಚೂನ್ ಅಕಾಡೆಮಿಕ್ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ಬ್ರಹ್ಮಾವರ ಹಂಗಾರಕಟ್ಟೆಯ ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಸಂಸ್ಥೆಯ ಬಿಎಸ್ಸಿ ನರ್ಸಿಂಗ್, ಜಿಎನ್ಎಂ, ಮತ್ತು ಡಿಎಂ ಎಲ್ ಟಿ,DOT and AT ಇದರ ಪದವಿ ಪ್ರಧಾನ ಸಮಾರಂಭ- 2026 ಮಾರ್ಚ್1 ರಂದು ಸಂಸ್ಥೆಯ ವಠಾರದಲ್ಲಿ ನಡೆಯಿತು.
ಸಮಾರಂಭದ ಮುಖ್ಯ ಅಬ್ಯಾಗತರಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೆಡಿಕಲ್ ಸೈನ್ಸ್ ಮತ್ತು ರೀಸರ್ಚ್ ಸೆಂಟರ್ ಡೀನ್ ಡಾ. ಮಹಾಬಲೇಶ್ ಶೆಟ್ಟಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ನೆರವೇರಿಸಿ ಮಾತನಾಡಿ,
ಮೇ 12ರಂದು ಆಧುನಿಕ ನರ್ಸಿಂಗ್ ವಿಭಾಗಕ್ಕೆ ಅಡಿಪಾಯ ಹಾಕಿದ ಪ್ಲಾರೆನ್ಸ್ ನೈಂಟಿಂಗೇಲ್ ಅವರ ಜನ್ಮದಿನದಂದು ದಾದಿಯರ ಸೇವೆಯನ್ನು ಸ್ಮರಿಸುತ್ತದೆ.
ದಾದಿಯರು ಆರೋಗ್ಯ ಕ್ಷೇತ್ರದ ಬೆನ್ನೆಲುಬು ಅವರು ರೋಗಿಗಳ ಆರೈಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ರೋಗಿಗಳಿಗೆ ಮಾನಸಿಕ ಧೈರ್ಯ ಮತ್ತು ಪ್ರೀತಿಯ ಆರೈಕೆಗೆ ಪ್ರಮುಖ ಕಾರಣರಾಗಿರುತ್ತಾರೆ. ಅವರ ನಿಸ್ವಾರ್ಥ ಸೇವೆ ಬೆಲೆ ಕಟ್ಟಲು ಸಾಧ್ಯವಿಲ್ಲ ಆರೋಗ್ಯ ಕ್ಷೇತ್ರಕ್ಕೆ ಅವರ ಪಾತ್ರ ಅತ್ಯಗತ್ಯ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಫಾರ್ಚೂನ್ ಅಕಾಡೆಮಿಕ್ ಮತ್ತು ಕಲ್ಚರಲ್ ಟ್ರಸ್ಟ್ (ರಿ) ಓರ್ತೋಪೆಡಿಕ್ ಸೈನ್ಸ್ ಸರ್ಜನ್ ಮತ್ತು ಸಹಾಯಕ ಪ್ರೊಫೆಸರ್ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡಾ. ದೇವಿಕ.ಟಿ. ಶೆಟ್ಟಿ ಮಾತನಾಡಿ,
ದಾದಿಯರ ಕಠಿಣ ಶ್ರಮ ಮತ್ತು ಸಮರ್ಪಣಾ ಮನೋಭಾವಕ್ಕೆ ಸಮಾಜ ಯಾವಾಗಲೂ ಕೃತಜ್ಞರಾಗಿರುತ್ತಾರೆ. ವೃತ್ತಿಯ ಬಗ್ಗೆ ಬದ್ಧತೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಈ ಉದ್ಯೋಗದಿಂದ ಸಾಧ್ಯ ಎಂದರು.
ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಚೇರ್ಮನ್ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ,  ಶುಭ ಹಾರೈಸಿದರು ಮತ್ತುಅತಿಥಿಗಳನ್ನು ಗೌರವಿಸಿದರು.
ಟ್ರಸ್ಟಿಗಳಾದ ಸುಜಿತ್ ಕುಮಾರ್ ಶೆಟ್ಟಿ, ಸುಜಾತ ಶೆಟ್ಟಿ, ವೀಣಾ ಶೆಟ್ಟಿ, ಶ್ರದ್ಧಾ ಶೆಟ್ಟಿ, ಉಪಸ್ಥಿತರಿದ್ದರು.
ಸಂಜನಾ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಾಂಶುಪಾಲೆ ವೆಲ್ಮೀರಾ ಡಯಾಸ್ ಸ್ವಾಗತಿಸಿ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು. ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಪಟ್ಟಿಯನ್ನು ಪ್ರೀತಿಕಾ ವಾಚಿಸಿದರು.ಸೆರೆನಾ ಡಯಾಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಪವನ್ ಕುಮಾರ್ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!