spot_img
Monday, March 2, 2026
spot_img

ಗಂಗೊಳ್ಳಿ: ಯಕ್ಷಗಾನ ಕಲಾರಂಗದ 90ನೆಯ ಮನೆ ಹಸ್ತಾಂತರ

ಗಂಗೊಳ್ಳಿ: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರಾವ್ಯ ಖಾರ್ವಿ (ಶ್ರೀಮತಿ ರೇಖಾ ಮತ್ತು ಜಗನ್ನಾಥ ಇವರ ಪುತ್ರಿ ಎಸ್. ಎಸ್. ಎಲ್. ಸಿ. ಯಲ್ಲಿ 97% ಅಂಕ) ಇವಳಿಗೆ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಕುಂದಾಪುರದ ವಸಂತ ಆಚಾರ್ಯ ಇವರು ತಮ್ಮ ತಾಯಿ ನೆನಪಿನಲ್ಲಿ, 7,00,000 ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಸರಸ್ವತಿ ಕೃಪಾ’ವನ್ನು ಮಾ.೦೧ರಂದು ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿದರು.

ಅನಂತರ ಮಾತನಾಡಿದ ಅವರು ಯಕ್ಷಗಾನ ಕಲಾರಂಗ ಅಕ್ಷರಾರ್ಥದಲ್ಲಿ ನೊಂದವರ ಬಾಳಿಗೆ ಬೆಳಕಾಗುತ್ತಿದೆ. ಕಳೆದ ವರ್ಷ ಜುಲೈ ತಿಂಗಳು ದೋಣಿ ದುರಂತದಲ್ಲಿ ತಂದೆಯನ್ನು ಕಳೆದುಕೊಂಡು ಕಂಗಾಲಾಗಿದ್ದ ಶ್ರಾವ್ಯಳ ಕುಟುಂಬಕ್ಕೆ ಆಸರೆಯಾಗಿ ಅವರಿಗೆ ಧೈರ್ಯ ತುಂಬಿದ್ದಾರೆ. ಈ ಮನೆಯ ಪ್ರಾಯೋಜಕತ್ವ ವಹಿಸಿದ ವಸಂತ ಆಚಾರ್ಯ ಮತ್ತು ಅವರ ಅಣ್ಣಂದಿರು ಸಾತ್ವಿಕರು. ಎಲ್ಲರೂ ಅನ್ಯೋನ್ಯರಾಗಿ ಒಂದೇ ಮನೆಯಲ್ಲಿ ವಾಸಿಸುತ್ತಿರುವುದು ಈ ಕಾಲದ ಕೌತುಕ ಎಂದು ಹೇಳಿದರು.

ವಸಂತ ಆಚಾರ್ಯ ಮತ್ತು ಪತ್ನಿ ಶೋಭಾ ಆಚಾರ್ಯ ಈ ಸಂದರ್ಭದಲ್ಲಿ ಮಾತನಾಡಿ, ಕಲಾರಂಗ ನಮಗೆ ಯಾವ ಶ್ರಮವೂ ಇಲ್ಲದೆ ಪುಣ್ಯ ಕಾರ್ಯಕ್ಕೆ ಅವಕಾಶ ಕಲ್ಪಿಸಿತು. ಇದರಿಂದ ತಾಯಿಯ ನೆನಪನ್ನು ಸಾರ್ಥಕಗೊಳಿಸಿದಂತಾಯಿತು. ಪ್ರತಿಭಾವಂತ ಅರ್ಹ ವಿದ್ಯಾರ್ಥಿನಿಗೆ ಮನೆ ನಿರ್ಮಿಸಿದ್ದು ತುಂಬಾ ಸಂತೋಷ ತಂದಿದೆ. ಅವಳ ಮುಂದಿನ ಶಿಕ್ಷಣದ ಖರ್ಚನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಯು. ಎಸ್.ರಾಜಗೋಪಾಲ ಆಚಾರ್ಯರು ಪ್ರಾಯೋಜಕರು ನಿರಹಂಕಾರದಿಂದ ನೀಡಿದ್ದಾರೆ ನಾಹಂ ಕರ್ತಾ ಹರಿ:ಕರ್ತಾ’ ಎಂಬ ಮಾತನ್ನು ಅಳವಡಿಸಿಕೊಂಡ ವಸಂತ ಆಚಾರ್ಯ ಕುಟುಂಬಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಗಣೇಶ್ ಆಚಾರ್ಯ, ಸುರೇಶ್ ಆಚಾರ್ಯ, ದಿನೇಶ್ ಆಚಾರ್ಯ, ಉಷಾ ನಾಗೇಶ್ ಆಚಾರ್ಯ, ಸಿದ್ಧಾರ್ಥ ಆಚಾರ್ಯ ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ಪ್ರೊ.ಕೆ.ಸದಾಶಿವ ರಾವ್, ವಿಜಯ ಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಜಯರಾಮ ಪಡಿಯಾರ್, ಗಣೇಶ ಬ್ರಹ್ಮಾವರ, ಪ್ರಭಾಕರ ಬಂಡಿ, ವಿನೋದಾ.ಎಂ., ಉಪನ್ಯಾಸಕ ನರೇಂದ್ರ, ಪತ್ರಕರ್ತ ರಾಘವೇಂದ್ರ ಪೈ, ಶೋಭಾ ಸುವರ್ಣ, ಮಾನ್ವೀ,ಊರ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗಂಗೊಳ್ಳಿಯ ವಿದ್ಯಾಪೋಷಕ್ ವಿದ್ಯಾರ್ಥಿನಿಯರಾದ ನಿಸರ್ಗ, ಮನೀಷಾ, ಅಮೂಲ್ಯ, ಮಾನ್ಯ ಈ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಇದು ವಸಂತ ಆಚಾರ್ಯ ದಂಪತಿ ಪ್ರಾಯೋಜಕತ್ವದ ಎರಡನೇ ಮನೆಯಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!